ಮಾವಿನ ಎಲೆಗಳನ್ನೂ ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತೇವೆ. ಮಾವಿನ ಎಲೆಗಳಲ್ಲಿ ಉತ್ತಮವಾದ ಔಷಧೀಯ ಗುಣಗಳಿವೆ. ಈ ಎಲೆಗಳಲ್ಲಿ ವಿಟಮಿನ್ ಸಿ, ಎ ಮತ್ತು ಬಿ ವಿಟಮಿನ್ ಗಳಿವೆ. ಈ ಎಲೆಗಳನ್ನು ನೀರಿನಲ್ಲಿ ಕುದಿಸಬಹುದು ಅಥವಾ ಪುಡಿ ರೂಪದಲ್ಲಿ ಸೇವಿಸಬಹುದು. ಬೇಸಿಗೆಯ ಹಣ್ಣಾದ ಮಾವು ಸಿಹಿತಿಂಡಿಗೆ ಸೂಕ್ತವಾಗಿದೆ. ಮಾವಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಶಿಯಂ ಮತ್ತು ಮೆಗ್ನೀಷಿಯಂ ನಂತಹ ಖನಿಜಗಳಿಂದ ಸಮೃದ್ಧವಾಗಿದೆ.
ಮಾವಿನ ಎಲೆಯಲ್ಲಿ ಅತ್ಯಂತ ಶ್ರೀಮಂತ ಪೋಷಕಾಂಶಗಳು ಎನಿಸಿಕೊಳ್ಳುವ ವಿಟಮಿನ್ ಸಿ, ಬಿ ಹಾಗೂ ಎಗಳಿವೆ ಎಂದರೆ ನೀವು ನಂಬಲೇಬೇಕು. ಮಾವಿನ ಎಲೆಗಳನ್ನು ನಾವು ಜ್ಯೂಸ್ ಮಾಡಿಕೊಂಡು ಸೇವಿಸುವುದರಿಂದ, ಇಲ್ಲವೇ ಪುಡಿ ಮಾಡಿ ಸೇವಿಸುವುದರಿಂದ ತುಂಬಾ ಲಾಭಗಳು ಇವೆ. ಅದರಲ್ಲಿ ನಮ್ಮ ದೇಹದಲ್ಲಿನ ಇನ್ಸೂಲೀನ್ ಪ್ರೊಡಕ್ಷನ್ ಹೆಚ್ಚು ಮಾಡುವ ಶಕ್ತಿ ಇದೆ. ಹೀಗಾಗಿ ಇದು ಸಕ್ಕರೆ ಕಾಯಿಲೆಯನ್ನು ಸರಳವಾಗಿ ನಿಯಂತ್ರಿಸುತ್ತದೆ. ಸಕ್ಕರೆ ರೋಗ ಆರಂಭಿಕ ಹಂತದಲ್ಲಿದ್ದಾಗ ಈ ಮಾವಿನ ಎಲೆಗಳನ್ನು ಸೇವಿಸಿದರೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ.
ಮಾವಿನ ಎಲೆಗಳಲ್ಲಿ ಆ್ಯಂಟಿಆಕ್ಸಿಡಂಟ್ನಂತಹ ಅಂಶಗಳಿದ್ದು ಇವು ರಕ್ತನಾಳವನ್ನು ಶಕ್ತಿಯುತಗೊಳಿಸುತ್ತವೆ. ಇದರಿಂದ ಬಿಪಿ ಅಂದ್ರೆ ರಕ್ತದೊತ್ತಡದಂತಹ ಸಮಸ್ಯೆಗಳಿಂದ ದೂರ ಇರಬಹುದು. ಹೃದಯ ಸಂಬಂಧಿ ಕಾಯಿಲೆಗಳಿಂದಲೂ ಕೂಡ ದೂರ ಇರಬಹುದು.ಮಾವಿನ ಎಲೆ ಸೇವಿಸುವುದರಿಂದ ಚಯಾಪಚಯ ಕ್ರಿಯೆಯೂ ಸರಳವಾಗುತ್ತದೆ.
ತೂಕ ಇಳಿಸಬೇಕು ಎಂದು ನಿರ್ಧರಿಸಿದವರು ಮಾವಿನ ಎಲೆಗಳ ಬಳಕೆ ಉತ್ತಮ ಎಂದು ಹೇಳಲಾಗುತ್ತದೆ. ಇದು ದೇಹದಲ್ಲಿರುವ ಕೊಬ್ಬಿನ ಅಂಶವನ್ನು ಕರಗಿಸುವಲ್ಲಿ ತುಂಬಾ ಸಹಾಯಕವಾಗುತ್ತದೆ.
ಉಸಿರಾಟದ ತೊಂದರೆ ಇದ್ದವರಿಗೆ ಮಾವಿನ ಎಲೆಯನ್ನು ಸೇವಿಸುವಂತೆ ಹೇಳಲಾಗುತ್ತದೆ. ಅಸ್ತಮಾ, ಶೀತದಿಂದ ಬಳಲುತ್ತಿದ್ದವರು ಮಾವಿನ ಎಲೆಯನ್ನು ಬಳಸುವುದರಿಂದ ಸಂಪೂರ್ಣ ಗುಣಮುಖರಾಗುತ್ತಾರೆ.
ಥ್ರೋಟ್ ಇನ್ಫೆಕ್ಷನ್ನಂತಹ ಸಮಸ್ಯೆಗಳಿಗೂ ಕೂಡ ಮಾವಿನ ಎಲೆ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಪಚನ ಕ್ರಿಯೆ ಉತ್ತಮವಾಗಲು, ಊರಿಯೂತದಂತಹ ಸಮಸ್ಯೆಗಳು, ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಮಾವಿನ ಎಲೆ ತುಂಬಾ ಸಹಾಯಕಾರಿ ಎಂದೇ ಹೇಳಲಾಗುತ್ತದೆ.