ವಾಹನ ಸವಾರರಿಗೆ ಕೇಂದ್ರ ಸರ್ಕಾರ ಡಬಲ್ ಶಾಕ್ ಕೊಟ್ಟಿದೆ. ಸಂಚಾರಿ ನಿಯಮಗಳನ್ನು ಪಾಲಿಸದೇ ಬೇಕಾಬಿಟ್ಟಿ ವಾಹನಗಳನ್ನು ಓಡಿಸುವವರಿಗೆ ಹೊಸ ದಂಡ ನೀತಿ ಜಾರಿಗೆ ತರಲಾಗಿದೆ. ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ ಪ್ರಕಾರ ಮಾರ್ಚ್ ಒಂದರಿಂದಲೇ ಸಂಚಾರಿ ನಿಯಮ ಪಾಲಿಸದೇ ಇದ್ದಲ್ಲಿ ಡಬಲ್ ದಂಡ ಕಟ್ಟಬೇಕಾಗುತ್ತದೆ.
ಹೊಸ ಮೋಟಾರು ವಾಹನ ಅಪರಾಧ ಮತ್ತು ದಂಡಗಳು
೧.ಕುಡಿದು ವಾಹನ ಚಲಾಯಿಸುವುದು
ರೂ.10,000 ದಂಡ ಅಥವಾ 6 ತಿಂಗಳ ಜೈಲು ಶಿಕ್ಷೆಉಲ್ಲಂಘನೆ ಪುನರಾವರ್ತನೆಯಾದರೆ ರೂ.15,000 ಮತ್ತು/ಅಥವಾ 2 ವರ್ಷಗಳ ಜೈಲು ಶಿಕ್ಷೆ
೨. ಹೆಲ್ಮೆಟ್ ಇಲ್ಲದೆ ಸವಾರಿ
ರೂ.1,000 ಜೊತೆಗೆ ಮೂರು ತಿಂಗಳವರೆಗೆ ಪರವಾನಗಿ ರದ್ದು
೩ಸೀಟ್ ಬೆಲ್ಟ್ ಹಾಕದೇ ವಾಹನ ಚಲಾಯಿಸುವುದು
ರೂ.1,000 ದಂಡ
೪.ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸುವುದು.
ರೂ.5,000 ದಂಡ
೫.ಪರವಾನಗಿ ಇಲ್ಲದೆ ವಾಹನ ಚಾಲನೆ
ರೂ.5,000 ದಂಡ
೬. ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್
ರೂ.1,000 ದಂಡ
೭.ಚಾಲ್ತಿ ಇಲ್ಲದ ಡ್ರೈವಿಂಗ್ ಲೈಸೆನ್ಸ್ ಇಟ್ಕೊಂಡು ವಾಹನ ಚಾಲನೆ
ರೂ.2,000 ದಂಡ ಅಥವಾ 3 ತಿಂಗಳ ಜೈಲು ಶಿಕ್ಷೆ,
ಉಲ್ಲಂಘನೆ ಪುನರಾವರ್ತನೆಯ ಸಂದರ್ಭದಲ್ಲಿ ರೂ.4,000 ದಂಡ
೮ ಮಾಲಿನ್ಯ ಪ್ರಮಾಣಪತ್ರವಿಲ್ಲದೆ ವಾಹನ ಚಲಾಯಿಸುವುದು
ರೂ.10,000 ದಂಡ ಅಥವಾ 6 ತಿಂಗಳವರೆಗೆ ಜೈಲು ಶಿಕ್ಷೆ
೯.ತುರ್ತು ವಾಹನಗಳಿಗೆ ದಾರಿ ಮಾಡಿಕೊಡದಿರುವುದು (ಉದಾಹರಣೆಗೆ: ಆಂಬ್ಯುಲೆನ್ಸ್ ಇತ್ಯಾದಿ..)
ರೂ.10,000 ದಂಡ ಅಥವಾ 6 ತಿಂಗಳವರೆಗೆ ಜೈಲು ಶಿಕ್ಷೆ
೧೦. ಸಾರ್ವಜನಿಕ ರಸ್ತೆಗಳಲ್ಲಿ ರೇಸಿಂಗ್ ಅಥವಾ ವೇಗದ ಚಾಲನೆ
ರೂ.5,000 ದಂಡ
೧೧. ಓವರ್ಲೋಡ್
ರೂ.20,000 ದಂಡ
೧೨. ಸಿಗ್ನಲ್ ಜಂಪಿಂಗ್
ರೂ.5,000 ದಂಡ