ಬಿಸಿಲಿನ ಧಗೆಯಿಂದ ದಣಿವಾರಿಸಿಕೊಳ್ಳಲು ತಂಪಾದ ಕಬ್ಬಿನ ಹಾಲಿಗಿಂತ ರುಚಿಕರ ಮತ್ತು ಆರೋಗ್ಯಕರ ಪಾನೀಯ ಇನ್ನೊಂದಿಲ್ಲ. ಈ ರಸ ಅತಿ ಪೌಷ್ಟಿಕ ಹಾಗೂ ಒಂದಕ್ಕಿಂತ ಹೆಚ್ಚು ವಿಧದಲ್ಲಿ ಆರೋಗ್ಯವನ್ನು ವೃದ್ದಿಸುವ ಪಾನೀಯವೂ ಆಗಿದೆ. ಅಚ್ಚರಿ ಎಂದರೆ, ಬೇಸಿಗೆಯಲ್ಲಿ ಇದರ ಸೇವನೆಯಿಂದ ದೇಹ ತಂಪಾದರೆ ಚಳಿಗಾಲದಲ್ಲಿ ಇದರ ಸೇವನೆಯಿಂದ ದೇಹ ಬೆಚ್ಚಗಾಗುತ್ತದೆ! ಆಲ್ಲದೇ ಕಬ್ಬಿನ ಹಾಲಿನ ಸೇವನೆಯಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.
ಅಕ್ರಮ ಚಿನ್ನ ಸಾಗಾಟ ಪ್ರಕರಣ: ನಟಿ ರನ್ಯಾ ರಾವ್ಗೆ 14 ದಿನ ನ್ಯಾಯಾಂಗ ಬಂಧನ!
ಬೇಸಿಗೆಯಲ್ಲಿ ಜನರು ತಮ್ಮ ಆಹಾರದಲ್ಲಿ ಅನೇಕ ರೀತಿಯ ಪಾನೀಯಗಳನ್ನು ಸೇರಿಸಿಕೊಳ್ಳುತ್ತಾರೆ. ಈ ಪಾನೀಯಗಳಲ್ಲಿ ಕಬ್ಬಿನ ರಸವೂ ಸೇರಿದೆ. ಹೌದು, ಕಬ್ಬಿನ ರಸ ಕುಡಿಯಲು ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಬೇಸಿಗೆಯಲ್ಲಿ ಕಬ್ಬಿನ ರಸ ಸೇವಿಸುವುದರಿಂದ ದೇಹವು ಹೈಡ್ರೇಟೆಡ್ ಆಗಿರುವುದರೊಂದಿಗೆ ತಂಪಾಗಿರುತ್ತದೆ. ಇದು ಕಾರ್ಬೋಹೈಡ್ರೇಟ್ಗಳು, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ನಂತಹ ಅನೇಕ ಪೋಷಕಾಂಶಗಳನ್ನು ಹೊಂದಿದ್ದು, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದರ ಸೇವನೆಯು ಅನೇಕ ರೀತಿಯ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಆದರೆ ಇಷ್ಟೆಲ್ಲಾ ಪ್ರಯೋಜನಗಳಿದ್ದರೂ, ಕೆಲವು ಜನರು ಕಬ್ಬಿನ ರಸವನ್ನು ಕುಡಿಯುವಂತಿಲ್ಲ.
ಶೀತ ಮತ್ತು ಜ್ವರ ಇದ್ದಾಗ :
ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರೆ, ಕಬ್ಬಿನ ರಸವನ್ನು ಕುಡಿಯಬೇಡಿ. ಕಬ್ಬು ತಂಪಾಗಿಸುವ ಪರಿಣಾಮವನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ ಶೀತ ಮತ್ತು ಕೆಮ್ಮಿನ ಸಮಸ್ಯೆ ಹೆಚ್ಚಾಗುತ್ತದೆ. ಇದಲ್ಲದೆ, ಇದು ಪಾಲಿಸೊಸನಾಲ್ ಎಂಬ ಅಂಶವನ್ನು ಹೊಂದಿದ್ದು, ಇದು ತಲೆನೋವಿಗೆ ಕಾರಣವಾಗಬಹುದು.
ಬೊಜ್ಜು ಹೆಚ್ಚಾಗಬಹುದು :
ಬೊಜ್ಜು ಇರುವವರು ಕಬ್ಬಿನ ರಸ ಸೇವಿಸಬಾರದು. ಇದರಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳು ಮತ್ತು ಸಕ್ಕರೆ ಇದ್ದು, ಇದು ನಿಮ್ಮ ತೂಕವನ್ನು ವೇಗವಾಗಿ ಹೆಚ್ಚಿಸುತ್ತದೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಕಬ್ಬಿಣ ಹಾಲನ್ನು ಮುಟ್ಟಿಯೂ ನೋಡಬಾರದು.
ಜೀರ್ಣಕಾರಿ ಸಮಸ್ಯೆಗಳು :
ಜೀರ್ಣಕ್ರಿಯೆಯ ಸಮಸ್ಯೆ ಇರುವವರು ಕಬ್ಬಿನ ರಸ ಸೇವಿಸಬಾರದು. ಇದು ಪೋಲಿಕೊಸನಾಲ್ ಎಂಬ ಅಂಶವನ್ನು ಹೊಂದಿದ್ದು, ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಹೊಟ್ಟೆ ನೋವು, ವಾಂತಿ ಮತ್ತು ಅತಿಸಾರದಂತಹ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು.
ಮಧುಮೇಹ ರೋಗಿಗಳು ಸೇವಿಸಲೇಬಾರದು :
ಮಧುಮೇಹ ರೋಗಿಯಾಗಿದ್ದರೆ, ಕಬ್ಬಿನ ರಸವನ್ನು ಸೇವಿಸಬಾರದು. ಇದರ ಗ್ಲೈಸೆಮಿಕ್ ಸೂಚ್ಯಂಕ ಹೆಚ್ಚಾಗಿದ್ದು, ರಕ್ತದಲ್ಲಿನ ಸಕ್ಕರೆಯನ್ನು ವೇಗವಾಗಿ ಹೆಚ್ಚಿಸುತ್ತದೆ.
ನಿದ್ರಾಹೀನತೆಯ ಸಮಸ್ಯೆ :
ನಿದ್ರಾಹೀನತೆಯಿಂದ ಬಳಲುತ್ತಿರುವವರು ಕಬ್ಬಿನ ರಸವನ್ನು ಕುಡಿಯಬಾರದು. ಇದರಲ್ಲಿರುವ ಪೋಲಿಕೊಸನಾಲ್ ತಲೆತಿರುಗುವಿಕೆ ಮತ್ತು ನಿದ್ರಾಹೀನತೆಗೆ ಕಾರಣವಾಗಬಹುದು.ಮೊದಲೇ ನಿದ್ರಾಹೀನತೆಯಿಂದ ಬಳಲುತ್ತಿರುವವರು ಇದನ್ನು ಸೇವಿಸಬಾರದು.