ಮನುಷ್ಯನ ಆರೋಗ್ಯ ಸಮಸ್ಯೆಗಳಲ್ಲಿ ನೋವು ಕೂಡ ಒಂದು ಮೈ ಕೈ ನೋವು, ಮೂಳೆ ನೋವು, ನರಗಳ ನೋವು ಮತ್ತು ಚರ್ಮದ ಭಾಗದಲ್ಲಿ ನೋವು ಈ ರೀತಿ ಅನೇಕ ತರಹದ ನೋವುಗಳನ್ನು ಮನುಷ್ಯ ಅನುಭವಿಸುತ್ತಾನೆ. ಈ ರೀತಿಯ ನೋವುಗಳಿಗೆ ಅನೇಕ ಕಾರಣಗಳು ಇರುತ್ತವೆ..
ಗೃಹಲಕ್ಷ್ಮಿಯರ ಖಾತೆಗೆ ಬಂತು ಜೂನ್ ತಿಂಗಳ ಹಣ: ಆದರೂ ಮಹಿಳೆಯರು ಕೆಂಡಾಮಂಡಲ!
ಹೀಗಾಗಿ ಇತ್ತೀಚಿನ ದಿನಗಳಲ್ಲಿ ನೋವು ನಿವಾರಣೆಯ ವಿಧಾನಗಳಲ್ಲಿ ಸಾಕಷ್ಟು ಬೆಳವಣಿಗೆ ಮತ್ತು ಸುಧಾರಣೆ ಕಾಣುತ್ತಿದೆ. ಅದರಲ್ಲೂ ನ್ಯೂರೋ ಮಾಡ್ಯುಲೇಷನ್ ನಲ್ಲಿ ಬಹಳಷ್ಟು ಜನರಿಗೆ ಆಸಕ್ತಿ ಹೆಚ್ಚಾಗುತ್ತಿದೆ. ಏಕೆಂದರೆ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಮತ್ತು ಎಲ್ಲಾ ಕಡೆ ಇದನ್ನು ಹೆಚ್ಚಾಗಿ ಬಳಸಲಾಗುತ್ತಿದೆ.
ಹೀಗಾಗಿ ಸಾಮಾನ್ಯ ಜನರಿಗೆ ಇದರ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯ. ಯಾವುದೇ ಬಗೆಯ ನೋವು ಕೇವಲ ಮಾತ್ರೆಗಳಲ್ಲಿ ಕಡಿಮೆ ಆಗದಿದ್ದರೆ, ಅದನ್ನು ಮುಂದಿನ ಹಂತಗಳಲ್ಲಿ ಅಂದರೆ ಮೇಲೆ ಹೇಳಿದ ಎಲ್ಲಾ ಬಗೆಯ ಸುಧಾರಿತ ಚಿಕಿತ್ಸೆಗಳ ಮೂಲಕ ಕಡಿಮೆ ಮಾಡಿಕೊಳ್ಳ ಬಹುದಾಗಿದೆ. ಹೀಗಾಗಿ ಇದರ ಬಗ್ಗೆ ಜನರು ಹೆಚ್ಚು ತಿಳಿದುಕೊಂಡು ಚಿಕಿತ್ಸೆಗಳ ಲಾಭಗಳನ್ನು ಬಳಸಿಕೊಳ್ಳುವುದು ಬಹಳ ಒಳ್ಳೆಯದು
ಈ ಮೇಲಿನ ಯಾವುದೇ ಪ್ರಕ್ರಿಯೆಗಳು ಕೆಲಸ ಮಾಡದೆ ಇದ್ದಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ನ್ಯೂರೋ ಮಾಡ್ಯುಲೇಷನ್ ಅಂದರೆ ನೇರವಾಗಿ ನರದ ಮೇಲೆ ಎಲೆಕ್ಟ್ರಿಕಲ್ ಅಥವಾ ಮ್ಯಾಗ್ನೆಟಿಕ್ ಸ್ಟಿಮುಲೇಷನ್ ಪ್ರಕ್ರಿಯೆಯ ಮೂಲಕ ನೋವು ನಿವಾರಣೆ ಮಾಡಲಾಗುತ್ತದೆ.
ಕೆಲವರಿಗೆ ಒಪಿಯಾರ್ಡ್ಸ್ ಚಿಕಿತ್ಸೆ ನೀಡುವ ಮೂಲಕ ನೋವು ನಿರ್ವಹಣೆ ಮಾಡುತ್ತದೆ. ಇದು ಕ್ಯಾನ್ಸರ್ ಕಾಯಿಲೆಗೂ ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಎಲೆಕ್ಟ್ರಿಕಲ್ ಸ್ಟಿಮುಲೇಷನ್ ಪ್ರಕ್ರಿಯೆಯಿಂದ ಸಿಂಪಲ್ ಟೆನ್ಸ್ ಮೂಲಕ ಅಂದರೆ ಟ್ರಾನ್ಸ್ ಕ್ಯುಟೆನಿಯಸ್ ನರ್ವ್ ಸ್ಟಿಮುಲೇಶನ್ ಮೂಲಕ ನೋವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಲಾಗುತ್ತದೆ. ಕೆಲವೊಂದು ಪ್ರಕರಣಗಳಲ್ಲಿ ಅಂದರೆ ಡಿಸ್ಕ್ ಪ್ರೋಲಾಪ್ಸ್ ಆದಂತಹ ಸಂದರ್ಭದಲ್ಲಿ ಸರ್ಜಿಕಲ್ ಪ್ರೊಸೀಜರ್ಗಳನ್ನು ಬಳಸಿ ಹೆಚ್ಚಾಗಿರುವ ನೋವನ್ನು ನಿಯಂತ್ರಣ ಮಾಡಲಾಗುತ್ತದೆ. ಇಂಜೆಕ್ಷನ್ ಮೂಲಕವೂ ನೋವು ನಿವಾರಣೆ ಮಾಡಬಹುದು.
ಇನ್ನು ಚಿಕಿತ್ಸೆಯ ವಿಧಾನಕ್ಕೆ ಬರುವುದಾದರೆ, ನರಗಳ ಹಾನಿ ಇಲ್ಲವಾದರೆ ಅಂದರೆ ಉದಾಹರಣೆಗೆ, ಸಕ್ಕರೆ ಕಾಯಿಲೆಯಿಂದ ನರಗಳ ನೋವು ಬಂದಿದ್ದರೆ, ಅದನ್ನು ಔಷಧಿಗಳನ್ನು ನೀಡುವ ಮೂಲಕ ಬಗೆಹರಿಸುತ್ತೇವೆ. ಬೇರೆ ಬೇರೆ ಜನರಿಗೆ ಬೇರೆ ಬೇರೆ ತರಹದ ಔಷಧಿಗಳು ಕೆಲಸ ಮಾಡುತ್ತವೆ.
ಒಂದು ವೇಳೆ ಔಷಧಿಗಳು ಕೆಲಸ ಮಾಡದೆ ಇದ್ದಂತಹ ಸಂದರ್ಭದಲ್ಲಿ, ಮ್ಯಾಗ್ನೆಟಿಕ್ ಸ್ಟಿಮುಲೆಶನ್ ನೀಡಿ ನೋವು ಪರಿಹಾರ ಮಾಡಲಾಗುತ್ತದೆ. ಮ್ಯಾಗ್ನೆಟಿಕ್ ತಂತ್ರಾಂಶದಿಂದ ನೋವಿನ ಸಿಗ್ನಲ್ ಗಳು ಮೆದುಳಿಗೆ ತಲುಪದಂತೆ ಇದು ತಡೆಯುತ್ತದೆ. ಸ್ಪೈನಲ್ ಕಾರ್ಡ್ ನಲ್ಲಿ ಇದು ಉತ್ತೇಜಿಸಿ ನೋವು ನಿವಾರಣೆ ಮಾಡುತ್ತದೆ.
ಬೇರೆ ಬೇರೆ ತರಹದ ನೋವು ನಿವಾರಣ ತಂತ್ರಗಳು ನರಗಳ ನೋವು ಕಡಿಮೆಯಾಗುವಂತೆ ಮಾಡಬಹುದು. ಉದಾಹರಣೆಗೆ ಮೆಡಿಕಲ್ ಶಾಪ್ ಗಳಲ್ಲಿ ಸಿಗುವಂತಹ ನೋವು ನಿವಾರಣ ಔಷಧಿಗಳು, ಮಾತ್ರೆಗಳು ನೋವನ್ನು ಕಡಿಮೆ ಮಾಡುತ್ತವೆ.
ಕೆಲವರಿಗೆ ಇದು ಅತ್ಯಂತ ಪರಿಣಾಮಕಾರಿಯಾಗಿ ಒಳ್ಳೆಯ ಪ್ರಯೋಜನ ಕೊಡುತ್ತದೆ. ಆದರೆ ಇನ್ನು ಕೆಲವರಿಗೆ ಕೇವಲ ತಾತ್ಕಾಲಿಕ ಪರಿಹಾರವಾಗಿ ಆ ಕ್ಷಣಕ್ಕೆ ನೋವು ಕಡಿಮೆಯಾಗಿ ಮತ್ತೆ ಹೆಚ್ಚಾಗುತ್ತದೆ.
ಬಹಳಷ್ಟು ಜನರು ತಮ್ಮ ಇಂತಹ ನೋವುಗಳಿಗೆ ಆಸ್ಪತ್ರೆಗೆ ಸಾವಿರಾರು ಹಾಗೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿರು ತ್ತಾರೆ.ಆದರೂ ಕೂಡ ಇದರಿಂದ ಪರಿಹಾರ ಸಿಕ್ಕಿರುವುದಿಲ್ಲ. ಇದರಿಂದ ಮಾನಸಿಕ ಖಿನ್ನತೆಗೆ ಜಾರಿ ಬಹಳಷ್ಟು ಜನರು ಸೂಸೈಡ್ ಮೂಲಕ ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾರೆ
ಬಹಳಷ್ಟು ಜನರಿಗೆ ನೇರವಾಗಿ ನರಗಳ ನೋವು ಕಾಣಿಸುತ್ತದೆ. ಇನ್ನು ಕೆಲವರಿಗೆ ಪರೋಕ್ಷವಾಗಿ ಅಂದರೆ ಬೇರೆ ಬೇರೆ ಕಾಯಿಲೆಗಳ ಪ್ರಭಾವದಿಂದ ನರಗಳ ನೋವು ಕಂಡು ಬರುತ್ತದೆ.
ಉದಾಹರಣೆಗೆ ಸಕ್ಕರೆ ಕಾಯಿಲೆ ಇರುವವರಿಗೆ ಕಾಲುಗಳ ಭಾಗದಲ್ಲಿ ನರಗಳು ಹಾನಿಗೊಳಗಾಗುತ್ತವೆ. ಇದರಿಂದ ಕಾಲುಗಳ ಭಾಗದ ಲ್ಲಿರುವ ನರಗಳ ನೋವು ಕಾಣಿಸುತ್ತದೆ. ಇನ್ನು ಕೆಲವರಿಗೆ ಹರ್ಪಿಸ್ ಕಾರಣದಿಂದ ನರಗಳಿಗೆ ಹಾನಿ ಉಂಟಾಗಿ ನೋವು ಕಂಡು ಬರುತ್ತದೆ. ಸೊಂಟದ ಭಾಗದಲ್ಲಿ ಡಿಸ್ಕ್ ಸಮಸ್ಯೆಯಿಂದ ನರಗಳ ಹಾನಿ ಉಂಟಾಗಿ ನೋವು ಕಾಣಿಸುತ್ತದೆ.