ಗೆಣಸು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ತರಕಾರಿ. ಈ ಗಡ್ಡೆಯನ್ನು ಬೇಯಿಸಿಕೊಂಡು ತಿನ್ನಬಹುದು, ಪಲ್ಯ ಮಾಡಬಹುದು, ಸಾಂಬಾರ್ ಮಾಡಬಹುದು, ಬೋಂಡ ಕೂಡ ಮಾಡಿಕೊಂಡು ತಿನ್ನಬಹುದು. ಜೀವಸತ್ವಗಳು ಮತ್ತು ಫೈಬರ್ನಿಂದ ಸಮೃದ್ಧವಾಗಿರುವ ಗೆಣಸು ನಿಮ್ಮ ಚರ್ಮ, ಹೃದಯ ಮತ್ತು ಒಟ್ಟಾರೆ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಪಿಷ್ಟ, ಫೈಬರ್, ಪ್ರೋಟೀನ್, ಖನಿಜಗಳಾದ ಮ್ಯಾಂಗನೀಸ್, ತಾಮ್ರ, ಪೊಟ್ಯಾಸಿಯಮ್, ಕಬ್ಬಿಣ, ವಿಟಮಿನ್ಗಳಾದ ಬಿ ಕಾಂಪ್ಲೆಕ್ಸ್, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಎ ಗೆಣಸಿನಲ್ಲಿದೆ.
ಖಿನ್ನತೆಗೆ ರಾಮಬಾಣ
ಸಿಹಿ ಗೆಣಸಿನಲ್ಲಿ ಮೆಗ್ನೀಶಿಯಂ ಅಂಶವಿದ್ದು, ಇದು ಖಿನ್ನತೆಯ ಸೆಲ್ಸ್’ಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಮೆಗ್ನೇಸಿಯಮ್ ಸೇವನೆಯು ಮೆದುಳನ್ನು ರಕ್ಷಿಸುತ್ತದೆ. ಹಾಗೆ ಸಿಹಿಗೆಣಸಿನಲ್ಲಿ ಪೊಟ್ಯಾಸಿಯಂ ಉನ್ನತ ಮಟ್ಟದಲ್ಲಿರುತ್ತದೆ. ಇದು ಹೃದಯ ಬಡಿತವನ್ನುನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಗೆ ಸಹಾಯಕಾರಿ.
ಸಿಹಿ ಗೆಣಸಿನಿಂದ ಹೊಟ್ಟೆಗೆ ಸಂಬಂಧಪಟ್ಟ ಅಜೀರ್ಣತೆ, ಮಲಬದ್ಧತೆ, ವಾಕರಿಕೆ, ವಾಂತಿ, ಭೇದಿ ಇತ್ಯಾದಿ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ಹಾಗೆ ಸಿಹಿಗೆಣಸಿನ ಜ್ಯೂಸ್ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಜೀರ್ಣಶಕ್ತಿ ಹೆಚ್ಚಾಗುತ್ತದೆ. ಹಲವು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗೆ ಸಿಹಿಗೆಣಸಿನ ಜ್ಯೂಸ್ ತುಂಬಾ ಪ್ರಯೋಜನಕಾರಿ.
ಕಣ್ಣಿನ ಆರೋಗ್ಯ ವೃದ್ಧಿ
ಸಿಹಿಗೆಣಸಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಎ ಇದ್ದು, ಇದು ಕಣ್ಣುಗಳ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡಿತ್ತದೆ. ವಿಟಮಿನ್ ಎ ಕೊರತೆಯಿಂದಾಗಿ ಕಣ್ಣಿನಲ್ಲಿ ಉಂಟಾಗುವ ತೊಂದರೆಗಳಿಗೆ ಸಿಹಿ ಗೆಣಸು ಶಮನಕಾರಿಯಾಗಿದೆ. ಹಾಗೆಯೇ ಸಾಮಾನ್ಯವಾಗಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುವ ಆಹಾರವೆಂದು ಸಿಹಿಗೆಣಸನ್ನು ಹೇಳಲಾಗುತ್ತದೆ. ಸಿಹಿ ಗೆಣಸಿನಲ್ಲಿ ಹೆಚ್ಚಿನ ಸಾಂದ್ರತೆಯಲ್ಲಿ ಕೋಲೀನ್ ಎನ್ನುವ ಪೋಷಕಾಂಶವಾಗಿದ್ದು, ಇದು ಕೆಲವು ಜನರಲ್ಲಿ ವ್ಯವಸ್ಥಿತ ಉರಿಯೂತವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಅದಲ್ಲದೆ ಸೈನಿಡಿನ್ ಎಂದು ಕರೆಯಲ್ಪಡುವ ಉತ್ಕರ್ಷಣ ನಿರೋಧಕ ಜೀರ್ಣಾಂಗ ವ್ಯವಸ್ಥೆಯಲ್ಲಿನ ವಿಷವನ್ನು ತೆಗೆದುಹಾಕಲು ಇದು ಸಹಾಯ ಮಾಡುತ್ತದೆ.
ಆರೋಗ್ಯಕರ ರಕ್ತದಲ್ಲಿನ ಸಕ್ಕರೆ ಮಟ್ಟ ಬೆಂಬಲಿಸುತ್ತದೆ.
ಸಿಹಿ ಗೆಣಸಿನಲ್ಲಿ ಅಧಿಕ ಪ್ರಮಾಣದ ಕ್ಯಾರೋಟಿನ್, ವಿಟಮಿನ್ ಬಿ6 ಅಂಶ ಇದೆ. ಇದು ನಮ್ಮ ದೇಹದಲ್ಲಿ ಏರುಪೇರಾಗುವ ಇನ್ಸುಲಿನ್ ಸಮಸ್ಯೆಯನ್ನು ಸರಿಪಡಿಸಿ ಮಧುಮೇಹಕ್ಕೆ ಸಂಬಂಧಪಟ್ಟ ಹೃದಯದ ಮತ್ತು ಹೃದಯ ರಕ್ತ ನಾಳದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದರಲ್ಲಿ ಸ್ವಾಭಾವಿಕ ಸಕ್ಕರೆ ಅಂಶ ಇರುವುದರಿಂದ ಮಧಮೇಹವನ್ನು ಕಡಿಮೆ ಮಾಡಿ, ಇನ್ಸುಲಿನ್ ಪ್ರಮಾಣವನ್ನು ಸ್ಥಿರವಾಗಿಡುತ್ತದೆ. ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳುತ್ತದೆ. ಒಟ್ಟಾರೆಯಾಗಿ ಸಿಹಿ ಗೆಣಸು ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದ್ದು, ದೇಹದ ವಿವಿಧ ಸಮಸ್ಯೆಗಳು ಪರಿಹಾರಗೊಳ್ಳುತ್ತದೆ.
ತೂಕ ಇಳಿಕೆ:
ಯಾರಾದರೂ ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಸಿಹಿ ಗೆಣಸನ್ನು ಸೇವಿಸಬಹುದು. ಇದು ಹೆಚ್ಚಿನ ಫೈಬರ್ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಇದು ನಿಮಗೆ ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ. ಇದರ ಅತಿಯಾದ ಸೇವನೆ ಅನಾರೋಗ್ಯಕರ ತಿಂಡಿಗಳನ್ನು ತಿನ್ನುವುದನ್ನು ಕಡಿಮೆ ಮಾಡುತ್ತದೆ. ಅಲ್ಲದೇ ತೂಕವನ್ನು ಸುಲಭವಾಗಿ ಇಳಿಸುತ್ತದೆ.