ಹೆಣ್ಣು ಮಕ್ಕಳು ಹೆಚ್ಚಾಗಿ ತಮ್ಮ ಉಗುರುಗಳಿಗೆ ನೈಲ್ ಪಾಲಿಶ್ ಹಚ್ಚುತ್ತಾರೆ. ಮೇಲ್ನೋಟಕ್ಕೆ ಇದು ಅಂದವಾಗಿ ಕಾಣಿಸಿದರು ಇದನ್ನು ಹಚ್ಚುವುದರಿಂದ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀಳುತ್ತದೆ. ನೈಲ್ ಪಾಲಿಶ್ ಹಚ್ಚುವುದರಿಂದ ಸಾಕಷ್ಟು ತೊಂದರೆಗಳು ಆಗಲಿದೆ. ಯಾವ ತೊಂದರೆಗಳು ಆಗಲಿದೆ, ಮಾಹಿತಿ ತಿಳಿದುಕೊಳ್ಳೋಣ.
ನೈಲ್ ಪಾಲಿಶ್ ಹಚ್ಚುವುದರಿಂದ ವಿವಿಧ ಬಗೆಯ ರಾಸಾಯನಿಕ ಅಂಶಗಳಿಂದ ಕೂಡ ಆ ಪಾಲಿಶ್ ದೇಹಕ್ಕೆ ಸೇರುತ್ತದೆ, ಇದರಿಂದ ಆರೋಗ್ಯದ ಮೇಲೆ ಸಮಸ್ಯೆಗಳು ಉಂಟಾಗುತ್ತದೆ.
ಸಂಶೋಧಕರು ಹೇಳುವ ಹಾಗೆ ಯಾವುದೇ ಉಗುರು ಬಣ್ಣ ತೆಗೆದುಕೊಂಡರೂ ಅದರಲ್ಲಿ ಈ ಮೂರು ಬಗೆಯ ರಾಸಾಯನಿಕ ಅಂಶಗಳು ಅಡಗಿರುತ್ತವೆ. ಇವುಗಳು ತುಂಬಾ ಡೇಂಜರ್ ಎಂದು ಹೇಳಲಾಗುತ್ತದೆ. ದೇಹದಲ್ಲಿ ವಿಷಕಾರಿ ಅಂಶಗಳನ್ನು ಉತ್ಪತ್ತಿ ಮಾಡುತ್ತವೆ ಎಂದು ತಿಳಿದುಬಂದಿದೆ.
ಇವುಗಳ ಪ್ರಭಾವದಿಂದ ದೇಹದಲ್ಲಿ ಜನನಾಂಗ ವ್ಯವಸ್ಥೆ ಹಾಗೂ ನರಮಂಡಲ ವ್ಯವಸ್ಥೆ ಹದಗೆಡುತ್ತದೆ. ಸಾಕಷ್ಟು ಜನರಿಗೆ ಇದರಿಂದ ಉಸಿರಾಟದ ತೊಂದರೆ ಮತ್ತು ದೇಹದ ಒಳಭಾಗದಲ್ಲಿ ರಕ್ತಸ್ರಾವ ಉಂಟಾಗುತ್ತದೆ.
ನೈಲ್ ಪಾಲಿಶ್ ಹಚ್ಚುವುದರಿಂದ ಗರ್ಭಿಣಿಯರಿಗೆ ಆಗುವ ತೊಂದರೆಗಳು
ನೈಲ್ ಪಾಲಿಶ್ ಹಚ್ಚುವುದರಿಂದ ಗರ್ಭಿಣಿಯರಿಗೂ ಸಹ ತೊಂದರೆಯಾಗುತ್ತದೆ. ಗರ್ಭಿಣಿಯರು ಪದೇ ಪದೇ ನೈಲ್ ಪಾಲಿಶ್ ಹಚ್ಚುವುದರಿಂದ ಅವರಿಗೆ ಅವಧಿಗೆ ಮುನ್ನ ಹೆರಿಗೆ ಆಗುವ ಸಾಧ್ಯತೆ ಕೂಡ ಇದೆಯಂತೆ. ಇನ್ನು ಅವರಿಗೆ ಹುಟ್ಟುವ ಮಕ್ಕಳಿಗೆ ಸಹ ತೊಂದರೆಯಾಗುತ್ತದೆ. ಕೆಲವರಿಗೆ ಹೊಟ್ಟೆ ಹಸಿವು ಉಂಟಾಗುವುದಿಲ್ಲ. ಜೊತೆಗೆ ವೀಪರೀತ ತಲೆನೋವು ಸಹ ಕಾಣಿಸುತ್ತದೆ.
ಒಟ್ಟಿನಲ್ಲಿ ಮಹಿಳೆಯರಿಗೆ ತೊಂದರೆ ಅಂತೂ ಗ್ಯಾರೆಂಟಿ ಆಗುತ್ತದೆ. ಸಾಧ್ಯವಾದಷ್ಟು ನೀವು ನಿಮ್ಮ ಸೌಂದರ್ಯ ಉತ್ಪನ್ನಗಳನ್ನು ಮಾತ್ರ ಖರೀದಿ ಮಾಡುವಾಗ ಅವುಗಳಲ್ಲಿ ಟಾಕ್ಸಿಸಿಟಿ ರೇಟಿಂಗ್ ಕಡಿಮೆ ಇರುವ ಉತ್ಪನ್ನಗಳನ್ನು ಮಾತ್ರ ಖರೀದಿಸಿ.