ನಿಮ್ಮ ಮೊಬೈಲ್ನಲ್ಲಿ’ಪಿಂಕ್ ವಾಟ್ಸ್ ಆ್ಯಪ್’ ಇದ್ದರೆ ಈಗಲೇ ಈಗಲೇ ಡಿಲೇಟ್ ಮಾಡಿ ಬಿಡಿ ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ.
ಹೌದು, ಪಿಕ್ ಕಲರ್ನ ಯಾವುದೇ ವಸ್ತಗಳು ನಮ್ಮನ್ನು ತನ್ನತ್ತ ಸೆಳೆದೆಬಿಡುತ್ತವೆ. ಹಾಗೆಯೇ ಇದೀಗ ಪಿಂಕ್ ವ್ಯಾಟ್ಸಪ್ ಬಂದಿದ್ದು, ಇದನ್ನು ಬಳಕೆ ಮಾಡುವವರು ಅಪಾಯಕ್ಕೆ ಸಿಲುಕುತ್ತಾರೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ. ಹಾಗಾದರೆ ಈ ಬಗ್ಗೆ ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆ ಹೇಳಿದ್ದೇನು ಎನ್ನುವ ಮಾಹಿತಿಯನ್ನು ಇಲ್ಲಿದೆ ಮುಂದೆ ಓದಿ
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಕರ್ನಾಟಕ ರಾಜ್ಯ ಪೊಲೀಸ್, ‘ಗುಲಾಬಿ ಬಣ್ಣದ ವಾಟ್ಸ್ ಆಪ್ ಅಪಾಯಕಾರಿ ಎಚ್ಚರಿಕೆಯಿಂದಿರಿ, ಆಕರ್ಷಣೆಯ ಗುಲಾಬಿ ಬಣ್ಣದ ವಾಟ್ಸ್ಆ್ಯಪ್ ಬಳಸುವವರನ್ನು ಗುರಿಯಾಗಿಸಿ ಮೋಸಗಾರರು ಡೇಟಾ ಮಾಡಲು ಬಳಸಿಕೊಳ್ಳುತ್ತಾರೆ. ಜಾಗೃತೆಯಿಂದಿರಿ..’ ಎಂದು ಸಂದೇಶ ನೀಡಿದೆ.
ಒಂದು ವೇಳೆ ನೀವು ಗುಲಾಬಿ ವಾಟ್ಸ್ ಆ್ಯಪ್ ಅನ್ನು ಮೊಬೈಲ್ನಲ್ಲಿ ಇನ್ಸ್ಟಾಲ್ ಮಾಡಿದರೆ ಫೋನ್ನಲ್ಲಿರುವ ಫೋಟೊ, ಸೇವ್ ಆಗಿರುವ ಫೋನ್ ನಂಬರ್ಗಳು. ನೆಟ್ ಬ್ಯಾಂಕಿಂಗ್ ಪಾಸ್ವರ್ಡ್, ಎಸ್ಎಂಎಸ್ ಹ್ಯಾಕ್ ಆಗಲಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಇನ್ನು ವಾಟ್ಸ್ಆ್ಯಪ್ ಪಿಂಕ್ ವಾಟ್ಸ್ಆ್ಯಪ್ನ ಹೊಸ ಆವೃತ್ತಿ ಅಥವಾ ವಾಟ್ಸ್ಆ್ಯಪ್ ಅಧಿಕೃತ ಬಿಡುಗಡೆ ಅಲ್ಲ. ಬದಲಿಗೆ, ಇದು ಬಳಕೆದಾರರನ್ನು ವಂಚಿಸುವ, ಮೋಸಗೊಳಿಸುವ ದೊಡ್ಡ ಹಗರಣ ಆಗಿದೆ. ಇದರ ಲಿಂಕ್ ಇರುವ ಸಂದೇಶಗಳನ್ನು ಸಾಮಾನ್ಯವಾಗಿ ಸ್ಪ್ಯಾಮ್ ಸಂದೇಶಗಳ ಮೂಲಕ ಹರಡಲಾಗುತ್ತದೆ. ಜೊತೆಗೆ ಲಿಂಕ್ ಲಗತ್ತಿಸಿ ಅದನ್ನು ಕ್ಲಿಕ್ ಮಾಡುವಂತೆ ಸೂಚಿಸಿರಲಾಗುತ್ತದೆ. ಲಿಂಕ್ ಕ್ಲಿಕ್ ಮಾಡಿದರೆ ಬಳಕೆದಾರರನ್ನು ವೆಬ್ಸೈಟ್ಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ಅವರು ವಾಟ್ಸ್ಆ್ಯಪ್ ಪಿಂಕ್ ಅನ್ನು ಡೌನ್ಲೋಡ್ ಮಾಡಲು ಸೂಚಿಸಲಾಗುತ್ತದೆ. ಆದರೂ ಹೊಸ ವೈಶಿಷ್ಟ್ಯಗಳು ಅಥವಾ ಥೀಮ್ಗಳನ್ನು ಸ್ವೀಕರಿಸುವ ಬದಲು, ಬಳಕೆದಾರರ ಮೊಬೈಲ್ಗಳಲ್ಲಿ ಅವರ ಗಮನಕ್ಕೆ ಬಾರದಂತೆ ದುರುದ್ದೇಶಪೂರಿತ ಸಾಫ್ಟ್ವೇರ್ ಡೌನ್ಲೋಡ್ ಆಗುತ್ತದೆ. ಈ ಸಾಫ್ಟ್ವೇರ್ ಮೂಲಕ ದತ್ತಾಂಶಗಳನ್ನು ಕದಿರುವ ಸಾಧ್ಯೆತೆ ಹೆಚ್ಚಿರುತ್ತದೆ. ಆದ್ದರಿಂದ ಎಚ್ಚರಿಕೆಯಿಂದಿರುವುದು ಸೂಕ್ತ ಎಂದು ತಿಳಿಸಿದೆ.