ಹೊಟ್ಟೆಯ ಸಮಸ್ಯೆಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬರಿಗೂ ಕಾಡುತ್ತದೆ. ಮುಖ್ಯವಾಗಿ ಆಹಾರ ಸೇವನೆಯಲ್ಲಿ ವ್ಯತ್ಯಾಸವಾದಾಗ ಹೊಟ್ಟೆ ಕೆಡುತ್ತದೆ. ಇನ್ನು ಕೆಲವೊಮ್ಮೆ ಸೋಂಕು ತಗುಲಿ ಹೊಟ್ಟೆಯಲ್ಲಿ ಗುಳ್ಳೆಗಳಾಗುತ್ತವೆ. ಅದನ್ನು ಹೊಟ್ಟೆಯ ಹುಣ್ಣು ಎನ್ನುತ್ತಾರೆ.
ಆರಂಭದ ಹಂತದಲ್ಲಿ ಹೊಟ್ಟೆಯ ನೋವು, ಗುಳ್ಳೆಯದ ಲಕ್ಷಣಗಳು ಕಾಣಿಸಿಕೊಂಡರೆ ಮನೆಮದ್ದಿನ ಮೂಲಕ ಅದನ್ನು ಪರಿಹಾರ ಮಾಡಿಕೊಳ್ಳಬಹುದು. ಆದರೆ ಕಡಿಮೆಯಾಗದೇ ಇದ್ದರೆ ವೈದ್ಯರಲ್ಲಿ ತೋರಿಸುವುದು ಉತ್ತಮ . ಹಾಗಾದರೆ ಹೊಟ್ಟೆಯ ಹುಣ್ಣಿನ ಲಕ್ಷಣಗಳು ಯಾವೆಲ್ಲಾ, ಅದಕ್ಕೆ ಮನೆಯಲ್ಲಿ ಯಾವ ರೀತಿ ಮದ್ದುಗಳನ್ನು ಮಾಡಬಹುದು ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಹೊಟ್ಟೆ ಹುಣ್ಣಿನ ಲಕ್ಷಣಗಳೆಂದರೆ
- ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ಉಬ್ಬಿದ ಅನುಭವ
- ವಾಕರಿಕೆ
- ವಾಂತಿ
- ಅಜೀರ್ಣ
- ಎದೆಯುರಿ ಮತ್ತು ಹುಳಿ ತೇಗು
- ಹೊಟ್ಟೆಯ ನೋವು
ಅರಿಶಿನ
- ಉರಿಯೂತವನ್ನು ಕಡಿಮೆ ಮಾಡುವ ಮತ್ತು ಸೋಂಕನ್ನು ನಿವಾರಿಸುವ ಗುಣವನ್ನು ಅರಿಶಿನ ಹೊಂದಿದೆ. ಹೀಗಾಗಿ ಹೊಟ್ಟೆ ಹುಣ್ಣಿಗೆ ಉತ್ತಮ ಮನೆಮದ್ದಾಗಲಿದೆ.
- ಇದು ಹೊಟ್ಟೆಯ ಒಳಪದರದಲ್ಲಿ ಉರಿಯೂತ ಮತ್ತು ಊತವನ್ನು ಕಡಿಮೆ ಮಾಡಬಹುದು. ಹೀಗಾಗಿ ಆಹಾರದಲ್ಲಿ ಅರಿಶಿನವನ್ನು ಸೇರಿಸಿ ಅಡುಗೆ ಮಾಡಬಹುದು.
- ಹೀಗೆ ಮಾಡಿ ನೀವು ಒಂದು ಲೋಟ ಬೆಚ್ಚಗಿನ ನೀರಿಗೆ ಅರಿಶಿನ ಪುಡಿಯನ್ನು ಸೇರಿಸಿ ಅದಕ್ಕೆ ಚಿಟಿಕೆ ಸಕ್ಕರೆಯನ್ನು ಹಾಕಿ ಸೇವನೆ ಮಾಡಿ. ಇದರಿಂದ ಸೋಂಕು ತಗುಲಿದ್ದರೆ ನಿವಾರಣೆಯಾಗುತ್ತದೆ.
ಅಲೋವೆರಾ
ಅಲೋವೆರಾವು ಗಾಯವನ್ನು ಗುಣಪಡಿಸುವ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ, ಏಕೆಂದರೆ ಇದು ಹೊಟ್ಟೆಯ ಹುಣ್ಣುಗಳಿಗೆ ಪರಿಣಾಮಕಾರಿ ಪರಿಹಾರವಾಗಿದೆ. ಶುದ್ಧ ಅಲೋವೆರಾ ಜೆಲ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ಹೊಟ್ಟೆಯ ಒಳಪದರದಲ್ಲಿನ ಊತವನ್ನು ಕಡಿಮೆ ಮಾಡಲು ಮತ್ತು ಹುಣ್ಣುಗಳನ್ನು ನಿವಾರಣೆ ಮಾಡುತ್ತದೆ.
ಪ್ರತಿದಿನ ಬೆಳಗ್ಗೆ 5 ರಿಂದ 10 ಎಂಎಲ್ನಷ್ಟು ಅಲೋವೆರಾದ ಜ್ಯೂಸ್ ತಯಾರಿಸಿ ಸೇವನೆ ಮಾಡಿ. ಇದರಿಂದ ಹೊಟ್ಟೆಗೆ ತಣ್ಣನೆಯ ಅನುಭವವಾಗುತ್ತದೆ.
ನೆಲ್ಲಿಕಾಯಿಯ ಸೇವನೆ
ಬೆಟ್ಟದ ನೆಲ್ಲಿಕಾಯಿಯಲ್ಲಿ ಹೇರಳವಾದ ವಿಟವಿನ್ ಸಿ ಅಂಶ ಅಡಕವಾಗಿರುತ್ತದೆ. ಅಲ್ಲದೆ. ಇದು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ, ಇದು ಹುಣ್ಣುಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ರಸದ ರೂಪದಲ್ಲಿ ನೆಲ್ಲಿಕಾಯಿಯನ್ನು ಸೇವನೆ ಮಾಡುವುದರಿಂದ ಗ್ಯಾಸ್ಟ್ರಿಕ್ ಮತ್ತು ಅಲ್ಸರ್ ಅನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ಬಾಳೆಹಣ್ಣು
ಬಾಳೆಹಣ್ಣು ಹೊಟ್ಟೆ ಮತ್ತು ದೇಹವನ್ನು ತಣ್ಣಗಾಗಿ ಇಡಲು ಸಹಾಯ ಮಾಡುತ್ತದೆ. ಅಲ್ಲದೆ ದೇಹದ ಆರೋಗ್ಯವನ್ನು ಎಲ್ಲಾ ರೀತಿಯಿಂದಲೂ ಉತ್ತಮವಾಗಿಡುತ್ತದೆ. ಹೀಗಾಗಿ ಹೊಟ್ಟೆಯ ಹುಣ್ಣಿಗೂ ಕೂಡ ಬಾಳೆಹಣ್ಣು ಉತ್ತಮ ಮದ್ದಾಗಲಿದೆ.
ಬಾಳೆಹಣ್ಣಿನಲ್ಲಿರುವ ಲ್ಯುಕೋಸಯಾನಿಡಿನ್ಗಳಂತಹ ಫ್ಲೇವನಾಯ್ಡ್ಗಳು ಹುಣ್ಣನ್ನು ಗುಣಪಡಿಸು ಸಹಾಯ ಮಾಡುತ್ತದೆ. ಅಲ್ಲದೆ ಉರಿ ಮತ್ತು ನೋವನ್ನು ಕೂಡ ಶಮನ ಮಾಡುತ್ತದೆ
ಎಲೆಕೋಸುಕ್ಯಾಬೀಜ್
ಎಲೆಕೋಸು ಜಠರಗರುಳಿನ ಅಸ್ವಸ್ಥತೆಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಇದು ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ಉಬ್ಬುವಿಕೆ ಸಮಸ್ಯೆಯ ನಿವಾರಣೆ ಮಾಡುತ್ತದೆ. ಎಲೆಕೋಸು ರಸವು ಹೊಟ್ಟೆಯ ಹುಣ್ಣುಗಳಿಗೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಇದನ್ನು ಸಾಂಪ್ರದಾಯಿಕವಾಗಿ ಆಯುರ್ವೇದದಲ್ಲಿ ಬಳಸಲಾಗುತ್ತದೆ.
ಪ್ರತಿನಿತ್ಯ ಅರ್ಧ ಲೋಟದಷ್ಟು ಎಲೆಕೋಸಿನ ಜ್ಯೂಸ್ ಸೇವನೆಯಿಂದ ಒಂದು ವಾರದೊಳಗೆ ಹೊಟ್ಟೆಯ ಹುಣ್ಣನ್ನು ನಿವಾರಣೆ ಮಾಡಬಹುದಾಗಿದೆ.