ಥೈರಾಯ್ಡ್ ತೊಂದರೆ ಇರುವವರಿಗೆ ಆಹಾರ ಪದ್ಧತಿ ಬಹಳ ಮುಖ್ಯ. ಕೆಲವೊಂದು ಆಹಾರಗಳನ್ನು ಸೇವಿಸಲೇಬೇಕಾಗುತ್ತದೆ ಮತ್ತು ಇನ್ನೂ ಕೆಲವು ಆಹಾರಗಳಿಂದ ದೂರ ಉಳಿಯಬೇಕಾಗುತ್ತದೆ.
ಹಾಗಾದರೆ ಯಾವ ಪದಾರ್ಥಗಳ ಸೇವನೆ ಮಾಡಬಾರದು ತಿಳಿದುಕೊಳ್ಳಿ.
ಎಲೆಕೋಸು, ಹೂಕೋಸು: ಥೈರಾಯ್ಡ್ ಸಮಸ್ಯೆ ಹೊಂದಿರುವವರು ಹೂಕೋಸು, ಎಲೆಕೋಸನ್ನು ಸೇವಿಸಬಾರದು. ಇದರಲ್ಲಿರುವ ಗಿಟಾರ್ನಾಯ್ಡ್ಸ್ ಅಂಶವು ಥೈರಾಯ್ಡ್ ಸಮಸ್ಯೆಯ ಅಪಾಯವನ್ನು ಹೆಚ್ಚಿಸುತ್ತದೆ.
ಸೋಯಾ ಉತ್ಪನ್ನಗಳು: ತೋಫು, ಸೋಯಾ ಹಾಲು ಮತ್ತು ಸೋಯಾಬೀನ್ ಸೇರಿದಂತೆ ಸೋಯಾ ಉತ್ಪನ್ನಗಳು ಗೊಯಿಟ್ರೋಜೆನ್ ಎಂಬ ಸಂಯುಕ್ತಗಳನ್ನು ಹೊಂದಿರುತ್ತವೆ. ಇದು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ಥೈರಾಯ್ಡ್ ಹಾರ್ಮೋನ್ ಉತ್ಪಾದನೆಗೆ ಅಡ್ಡಿಯುಂಟುಮಾಡುತ್ತದೆ.
ಮಾಂಸಹಾರ: ಥೈರಾಯ್ಡ್ ಸಮಸ್ಯೆ ಇರುವವರು ಮಾಂಸಹಾರ ಸೇವನೆಯನ್ನು ತ್ಯಜಿಸಬೇಕು. ಇದು ಸ್ಯಾಚುರೇಟೆಡ್ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಥೈರಾಯ್ಡ್ ರೋಗಿಗಳಿಗೆ ಹೆಚ್ಚು ಹಾನಿಯುಂಟು ಮಾಡುತ್ತದೆ. ಇದು ದೇಹದ ಉಷ್ಣತೆಯು ಅಸಹಜ ಮಟ್ಟಕ್ಕೆ ಏರಲು ಕಾರಣವಾಗುತ್ತದೆ.
ಒಣಬೀಜಗಳು: ಥೈರಾಯ್ಡ್ ಸಮಸ್ಯೆ ಇರುವ ಕೆಲವರಿಗೆ ಒಣ ಬೀಜಗಳನ್ನು ಜೀರ್ಣ ಮಾಡಿಕೊಳ್ಳಲು ಕಷ್ಟವಾಗಬಹುದು. ಏಕೆಂದರೆ ಅವುಗಳಲ್ಲಿ ಆಕ್ಸಲೆಟ್ ಮತ್ತು ಫೈಟೆಟ್ ಪ್ರಮಾಣ ಹೆಚ್ಚಾಗಿರುತ್ತದೆ.
ಚಹಾ ಅಥವಾ ಕೆಫೀನ್ ಉತ್ಪನ್ನಗಳು: ಚಹಾ ಅಥವಾ ಕೆಫೀನ್ ಉತ್ಪನ್ನಗಳು ಥೈರಾಯ್ಡ್ ಗ್ರಂಥಿಯ ಮೇಲೆ ಪರಿಣಾಮ ಬೀರುತ್ತವೆ. ಇದು ನಿಮ್ಮ ರಕ್ತದಲ್ಲಿನ ಥೈರಾಯ್ಡ್ ಮಟ್ಟವನ್ನು ಕ್ರಮೇಣ ಹೆಚ್ಚಿಸುತ್ತದೆ. ಇದು ಕೆಲವರಲ್ಲಿ ಹೆಚ್ಚಿನ ಗಂಟಲು ನೋವಿಗೆ ಕಾರಣವಾಗುತ್ತದೆ