ನಾಲ್ಕು ಜನರ ಮಧ್ಯೆ ನಾವು ಮಾತನಾಡುತ್ತಾ ನಿಂತಿರಬೇಕಾದರೆ ಅಪ್ಪಿ ತಪ್ಪಿ ನಾವು ಮಾತನಾ ಡುವಾಗ ನಮ್ಮ ಬಾಯಿ ವಾಸನೆ ಬಂದರೆ ಅದರಿಂದ ನಮ್ಮ ಎದುರಿಗೆ ಇರುವವರು ಸ್ವಲ್ಪ ಪಕ್ಕಕ್ಕೆ ಸರಿಯುತ್ತಾರೆ.
ಇದು ನಮಗೆ ಒಂದು ರೀತಿಯ ಮುಖಕ್ಕೆ ಹೊಡೆದ ಹಾಗೆ ಅಸಹ್ಯ ಹುಟ್ಟಿಸುತ್ತದೆ ಮತ್ತು ಮನಸ್ಸಿಗೆ ಸಾಕಷ್ಟು ಬೇಸರ ವಾಗುತ್ತದೆ. ಈ ರೀತಿ ಮತ್ತೆ ಇನ್ನೊಂದು ಆಗಬಾರದು ಅಂದುಕೊಳ್ಳುತ್ತೇವೆ. ಇದು ಒಂದು ಉದಾಹರಣೆ ಅಷ್ಟೇ.
ಸರಿಯಾಗಿ ನೀರು ಕುಡಿಯಿರಿ
ದಿನಕ್ಕೆ ಒಂದೆರಡು ಲೀಟರ್ ಆದರೂ ಸರಿಯಾಗಿ ನೀರು ಕುಡಿಯಬೇಕು. ಇದರಿಂದ ಬಾಯಿಯ ದುರ್ವಾಸನೆ, ಕ್ರಮೇಣವಾಗಿ ದೂರವಾಗುತ್ತದೆ.
ಸೋಂಪು ಕಾಳು
ಪ್ರತಿ ದಿನ ಊಟದ ನಂತರ ಸೋಂಪು ಕಾಳುಗಳನ್ನು ಜಗಿದು ಸೇವನೆ ಮಾಡುವುದರಿಂದ, ಜೀರ್ಣ ಶಕ್ತಿ ಹೆಚ್ಚಾಗುವುದರ ಜೊತೆಗೆ, ಬಾಯಿಯ ದುರ್ವಾಸನೆಯನ್ನು ತಡೆಯಬಹುದು
ತಂಬಾಕು ಹಾಗೂ ಧೂಮಪಾನದಿಂದ ದೂರವಿರಿ…
ಧೂಮಪಾನ ಹಾಗೂ ತಂಬಾಕು, ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ವಿಚಾರ ನಮಗೆಲ್ಲಾ ಗೊತ್ತೇ ಇದೆ. ಪ್ರಮುಖವಾಗಿ ಇದರಿಂದ ವಸಡುಗಳಿಗೆ ಸಂಬಂಧಿಸಿದ ಕಾಯಿಲೆ ಉಂಟಾಗುವುದರ ಜೊತೆಗೆ ಬಾಯಿಯ ದುರ್ವಾ ಸನೆ ಹೆಚ್ಚಾಗುತ್ತದೆ.
ದಿನಕ್ಕೆ ಎರಡು ಬಾರಿ ಹಲ್ಲುಜ್ಜಿ
ಪ್ರತಿ ದಿನ ಬೆಳಗ್ಗೆ ಹಾಗೂ ರಾತ್ರಿ ಊಟದ ಬಳಿಕ ಹಲ್ಲುಜ್ಜಿ, ನಾಲಿಗೆ ಯನ್ನು ಶುಚಿಗೊಳಿಸುವುದರಿಂದ, ಬಾಯಿಯ ಆರೋಗ್ಯ ಹೆಚ್ಚಾಗಿ, ಬಾಯಿಯ ದುರ್ವಾಸನೆ ಸಮಸ್ಯೆ ನಿವಾರಣೆಯಾಗುತ್ತದೆ.
ಮೌತ್ ವಾಶ್ ಬಳಸಿ
ರಾತ್ರಿ ಮಲಗಿಕೊಳ್ಳುವ ಮುನ್ನ, ಬಾಯಿಯನ್ನು ಸ್ವಚ್ಛ ಮಾಡಿಕೊಳ್ಳಲು ಮೌತ್ ವಾಶ್ ಉಪಯೋಗಿಸಿ. ಇದರಿಂದ ಕೂಡ ಬಾಯಿಯ ದುರ್ವಾಸನೆ ಸಮಸ್ಯೆ ದೂರವಾಗುತ್ತದೆ
ಗ್ರೀನ್ ಟೀ ಕುಡಿಯಿರಿ
ಪ್ರತಿದಿನ ಕುಡಿಯುವ ಮಾಮೂಲಿ ಚಹಾ ಅಥವಾ ಕಾಫಿಗೆ ಹೋಲಿಸಿದರೆ ಗ್ರೀನ್ ಟೀ ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಪಾನೀಯದಲ್ಲಿ ಸಿಗುವ ಕಡಿಮೆ ಪ್ರಮಾಣದ ಕೆಫಿನ್ ಹಾಗೂ ಪ್ರಬಲ ಆಕ್ಸಿಡೆಂಟ್ ಅಂಶಗಳು, ಹಾಗೂ ಸೋಂಕು ನಿವಾರಕ ಗುಣಲಕ್ಷಣಗಳು, ಬಾಯಿಯ ದುರ್ವಾಸನೆಗೆ ಪರಿಣಾಮಕಾರಿ ಮನೆಮದ್ದು.
ಆಗಾಗಾ ಬಾಯಿ ಮುಕ್ಕಳಿಸುತ್ತಾ ಇರಿ
ಬೆಳಗಿನ ಉಪಹಾರ ಸೇವನೆ ಮಾಡಿದ ಬಳಿಕ ಅಥವಾ ಮಧ್ಯಾಹ್ನ ಊಟ ಮಾಡಿದ ನಂತರ, ಪ್ರಮುಖವಾಗಿ ಚಹಾ ಅಥವಾ ಕಾಫಿ ಕುಡಿದ ನಂತರ ಬಾಯಿ ಮುಕ್ಕಳಿಸುತ್ತಾ ಇರಿ