ಕೆಲವು ಸಮಯದಲ್ಲಿ ಕುಟುಂಬದ ಆರ್ಥಿಕ ಸಮಸ್ಯೆಯಿಂದಾಗಿ ಸಾಲದ ಮೊತ್ತಕ್ಕೆ ಸಾಲದ EMI ಪಾವತಿಸಲು ಸಾಧ್ಯವಾಗದೇ ಇರಬಹುದು. ಅಥವಾ ಬೇರೆ ಸಮಸ್ಯೆಯಿಂದಾಗಿ EMI ಪಾವತಿ ಸಾಧ್ಯವಾಗದೇ ಇರಬಹುದು.
ಭೀಮಾ ಸಿನಿಮಾ ನೋಡಲು ಬಂದ ಮಹಿಳಾ ಅಬಿಮಾನಿಗೆ ಕಾಮುಕನ ಕಾಟ: ವಾಶ್ ರೂಂನಲ್ಲಿ ಮೊಬೈಲ್ ಇಟ್ಟು ರೆಕಾರ್ಡ್!
ಹೀಗಾದಾಗ ಏನಾಗುತ್ತದೆ? ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ. ನೀವು ಬ್ಯಾಂಕ್ ಅಥವಾ ಇತರ ಹಣಕಾಸು ಕಂಪನಿಯಿಂದ ಸಾಲವನ್ನು ತೆಗೆದುಕೊಳ್ಳುವಾಗ, ನೀವು ಮೊತ್ತವನ್ನು EMI ರೂಪದಲ್ಲಿ ಪಾವತಿಸಬೇಕಾಗುತ್ತದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ
ನಾವು ಪ್ರತಿ ತಿಂಗಳೂ EMI ಪಾವತಿಸಬೇಕು. ಇದರಿಂದ, ಸಾಲದ ಮೊತ್ತವನ್ನು ಪಾವತಿಸುವುದರ ಜೊತೆಗೆ, ನಮ್ಮ CIBIL ಕ್ರೆಡಿಟ್ ಸ್ಕೋರ್ ಕೂಡ ಸುಧಾರಿಸುತ್ತದೆ. ಆದರೆ ನೀವು EMI ಪಾವತಿಸುವುದನ್ನು ನಿಲ್ಲಿಸಿದರೆ, ನಿಮಗೆ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಅದಕ್ಕೆ ನೀವು ಹೆದರುವ ಅಗತ್ಯವಿಲ್ಲ. ತಿಳಿದುಕೊಳ್ಳಬೇಕಾದ ಕೆಲವು ಕಾನೂನು ಅಂಶಗಳು ಇಲ್ಲಿವೆ
ಇಎಂಐ ಕಟ್ಟಲು ವಿಫಲವಾಗೋದು ಜೈಲು ಪಾಲಾಗುವಷ್ಟು ಅಪರಾಧವಲ್ಲ. ಚೆಕ್ ಬೌನ್ಸ್ ಆದಲ್ಲಿ ವ್ಯಕ್ತಿ ಜೈಲಿಗೆ ಹೋಗಬೇಕಾಗುತ್ತದೆ. ಆದರೆ ಬ್ಯಾಂಕ್ ಸಾಲದ ವಿಷಯದಲ್ಲಿ ಇದು ಅನ್ವಯ ಆಗೋದಿಲ್ಲ. ನಿಮ್ಮ ಆಸ್ತಿಯೂ ಹರಾಜಾಗುತ್ತದೆ ಎಂದು ಭಯಪಡುವ ಅಗತ್ಯವೂ ಇಲ್ಲ.
ನಿಜವಾದ ಕಾನೂನು ಏನು ಹೇಳುತ್ತದೆ ಎಂದರೆ, ಆರ್ಬಿಐನ ಹೊಸ ನಿಯಮಗಳ ಪ್ರಕಾರ, ಸಾಲದ ಇಎಂಐ ಪಾವತಿಸದ ಯಾವುದೇ ವ್ಯಕ್ತಿಗೆ ಅವರು ಕರೆ ಮಾಡಿ ಬೆದರಿಕೆ ಹಾಕಬಾರದು ಎಂದು ಮಾರ್ಗಸೂಚಿಗಳು ಹೇಳುತ್ತವೆ. ಈ ಹಿಂದೆ ಸಾಲ ನೀಡಿದ ಬ್ಯಾಂಕ್ ಸತತವಾಗಿ ಎರಡು ಅಥವಾ ಮೂರು ಇಎಂಐ ಕಟ್ಟದಿದ್ದರೆ ನೋಟಿಸ್ ನೀಡಬೇಕು.
ಸಾಲ ವಸೂಲಿ ಮಾಡುವವರು ಗ್ರಾಹಕರಿಗೆ ತೊಂದರೆ ಕೊಡಬಾರದು. ಅವರನ್ನು ಸೌಜನ್ಯದಿಂದ ನಡೆಸಿಕೊಳ್ಳಬೇಕು. ಪಾವತಿಸದಿದ್ದಲ್ಲಿ ಆಸ್ತಿಯ ಹರಾಜಿನ ಸಮಯದಲ್ಲಿ ಅವರನ್ನು ಸಂಪರ್ಕಿಸಬೇಕು.
ಅಲ್ಲದೇ ಅವರ ಒಪ್ಪಿಗೆಯೊಂದಿಗೆ ಮಾತ್ರ ಹರಾಜು ಮಾಡಲಾಗುತ್ತದೆ. ಯಾವುದೇ ಸಮಸ್ಯೆಯಿಂದಾಗಿ ನೀವು ಸಾಲದ EMI ಅನ್ನು ಪಾವತಿಸಲು ಸಾಧ್ಯವಾಗದಿದ್ದರೆ.. ನೀವು ಅದರ ಬಗ್ಗೆ ಬ್ಯಾಂಕ್ ಮ್ಯಾನೇಜರ್ನೊಂದಿಗೆ ಮಾತನಾಡಬಹುದು.. ಸಾಲದ ಅವಧಿಯನ್ನು ವಿಸ್ತರಿಸಲು ಅಥವಾ ಇನ್ನಾವುದೇ ಪರಿಹಾರಕ್ಕಾಗಿ ಮಾತನಾಡಬಹುದು. ಬ್ಯಾಂಕ್ ಗಳೂ ಕೂಡ ಇದಕ್ಕೆ ಒಪ್ಪಿಗೆ ನೀಡುವ ಸಾಧ್ಯತೆ ಹೆಚ್ಚಿದೆ.