ಗೋಡಂಬಿ ಮತ್ತು ಒಣದ್ರಾಕ್ಷಿಗಳು ಸಾಮಾನ್ಯವಾಗಿ ಎಲ್ಲಾರಿಗೂ ಗೊತ್ತಿರುವಂತದ್ದೇ ಆಗಿದ್ದು, ಇದನ್ನು ಹೆಚ್ಚಾಗಿ ಎಲ್ಲರ ಮನೆಗಳಲ್ಲೂ ಆಹಾರಕ್ಕೆ ಬಳಸುವುದನ್ನು ನಾವು ನೋಡುತ್ತೇವೆ. ಕೆಲವು ಆಹಾರಕ್ಕೆ ಇವುಗಳು ಇಲ್ಲಾಂದ್ರೆ ಅದು ಪರಿಪೂರ್ಣವಾಗುವುದಿಲ್ಲ ಅಥವಾ ರುಚಿಕರ ಎನಿಸುವುದಿಲ್ಲ ಅಲ್ಲವೆ?ಗೋಡಂಬಿ ಮತ್ತು ದ್ರಾಕ್ಷಿಗಳು ನಮಗೆ ಸಿಕ್ಕಂತಹ ಒಂದು ಅದ್ಬುತ ನೈಸರ್ಗಿಕ ಕೊಡುಗೆ ಎಂದರೆ ತಪ್ಪಾಗಲಾರದು.
ಇನ್ನೂ ಗೋಡಂಬಿ ನೈಸರ್ಗಿಕವಾಗಿ ತುಂಬಾ ಆರೋಗ್ಯಕರ. ಇದು ಕೊಬ್ಬು, ಪ್ರೋಟೀನ್ಗಳು, ಆಹಾರದ ಫೈಬರ್, ವಿಟಮಿನ್ಗಳು ಮತ್ತು ಖನಿಜಗಳಂತಹ ಎಲ್ಲಾ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ. ಗೋಡಂಬಿಯು ಕ್ಯಾಲೋರಿಗಳನ್ನು ಹೊಂದಿದ್ದರೂ, ಅವುಗಳ ಪೌಷ್ಟಿಕಾಂಶದ ಮೌಲ್ಯವು ತುಂಬಾ ಹೆಚ್ಚಾಗಿದೆ. ಇದು ಪೌಷ್ಟಿಕಾಂಶದಲ್ಲಿ ಸಮೃದ್ಧವಾಗಿದೆ.
ಗೋಡಂಬಿಯು ಬಹಳಷ್ಟು ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ. ಅಲ್ಲದೇ, ಇದು ಅಪರ್ಯಾಪ್ತ ಕೊಬ್ಬನ್ನು ಹೊಂದಿರುತ್ತದೆ. ಇದು ಹೃದಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದು ಎಲ್ಡಿಎಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಕೊಬ್ಬು ನಿಮ್ಮ ಹೊಟ್ಟೆಯನ್ನು ಹೆಚ್ಚು ಹೊತ್ತು ತುಂಬಿರುತ್ತದೆ. ಇದು ಅತಿಯಾದ ಹಸಿವನ್ನು ಕಡಿಮೆ ಮಾಡುತ್ತದೆ. ದೈನಂದಿನ ಆಹಾರದಲ್ಲಿ ಗೋಡಂಬಿಯನ್ನು ಸೇರಿಸುವುದರಿಂದ, ಅದರಲ್ಲಿರುವ ಎಲ್ಲಾ ಪೋಷಕಾಂಶಗಳು ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಗೋಡಂಬಿ ನಿಮ್ಮ ಹೃದಯವನ್ನು ಆರೋಗ್ಯವಾಗಿರಿಸುತ್ತದೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಸ್ವಲ್ಪ ಪ್ರಮಾಣದ ಗೋಡಂಬಿಯು ದೇಹದಲ್ಲಿ HDL ಮಟ್ಟವನ್ನು ಹೆಚ್ಚಿಸುತ್ತದೆ. ಗೋಡಂಬಿಯನ್ನು ಹೆಚ್ಚು ತಿಂದರೆ ತೂಕ ಹೆಚ್ಚಾಗುವುದು ಖಂಡಿತ.
ಗೋಡಂಬಿಯು ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ವಿವಿಧ ಜೀವಸತ್ವಗಳನ್ನು ಹೊಂದಿರುತ್ತದೆ, ಇದು ಜೀವರಾಸಾಯನಿಕ ಕ್ರಿಯೆಗಳಿಗೆ ಸಹಾಯ ಮಾಡುತ್ತದೆ. ಇದು ಆರೋಗ್ಯವನ್ನು ಬೆಂಬಲಿಸುತ್ತದೆ, ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಗ್ಲೂಕೋಸ್ ಚಯಾಪಚಯವನ್ನು ಸುಧಾರಿಸುತ್ತದೆ.
ಗೋಡಂಬಿಯಲ್ಲಿ ಫೈಬರ್ ಅಂಶವಿದ್ದು, ಇದು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಫೈಬರ್ ಅಧಿಕವಾಗಿರುವ ಆಹಾರಗಳು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ನಿಯಂತ್ರಿಸುತ್ತದೆ