ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು, ಮಕ್ಕಳು ಓದಿನಲ್ಲಿ ಆಸಕ್ತಿಯನ್ನೇ ಕಳೆದುಕೊಂಡಿರುತ್ತಾರೆ. ಓದಲು ಕುಳಿತರೆ ಹತ್ತಾರು ಆಕರ್ಷಣೆಗಳು ಅವರನ್ನು ಸೆಳೆಯುತ್ತವೆ, ಅದು ಟಿವಿ, ಮೊಬೈಲ್, ಗೇಮ್, ಫುಡ್ ಹೀಗೆ ಹತ್ತಾರು ಕಡೆ ಅವರ ಮನಸ್ಸು ಓಡುತ್ತಿರುತ್ತದೆ. ಇದೆಲ್ಲವನ್ನೂ ತಡೆದು ಓದಲು ಕುಳಿತರೆ ಅವರಿಗೆ ನಿದ್ದೆ ಎಂಬ ಮಾರಿ ಅಂಟಿಕೊಳ್ಳುತ್ತದೆ. ಹೌದು ಹಲವರು ಓದಲು ಬುಕ್ ಹಿಡಿದು ಕುಳಿತರೆ ಸಾಕು ನಿದ್ರಾದೇವಿ ಆವರಿಸುತ್ತಾಳೆ.
ಹಾಗಾದರೆ ಓದುವಾಗ ನಿದ್ರೆ ಬಾರದಂತೆ ಮಾಡುವುದು ಹೇಗೆ? ಓದುವಾಗ ನಿಮಗೂ ನಿದ್ರೆ ಬರುತ್ತಿದ್ದರೆ ಏನು ಮಾಡಬೇಕು? ಈ ಬಗ್ಗೆ ತಜ್ಞರು ಹೇಳಿರುವುದೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕುಳಿತುಕೊಳ್ಳುವ ಜಾಗ ಹೀಗಿರಲಿ
ನೀವು ಓದಲು ಕುಳಿತುಕೊಳ್ಳುವ ಜಾಗ ನಿಮ್ಮ ಓದಿಗೆ ಬಹಳ ಮುಖ್ಯವಾಗಿರುತ್ತದೆ. ನೀವು ನಿತ್ಯ ಮಲಗುವ ಹಾಸಿಗೆ, ಇಲ್ಲವೆ ಬೆಡ್ ಮೇಲೆ ಓದಲು ಕುಳಿತುಕೊಳ್ಳಬೇಡಿ. ಇದರಿಂದ ನಿಮಗೆ ಯಾವ ಪ್ರಯೋಜನವೂ ಆಗುವುದಿಲ್ಲ. ಇನ್ನೊಂದೆಡೆ ನೀವು ಓದಲು ಕೂರುವ ಜಾಗದಲ್ಲಿ ಉತ್ತಮ ಗಾಳಿ, ಬೆಳಕು ಬರುವಂತಿರಲಿ. ಟೇಬಲ್ ಮೇಲೆ ಚೆಲ್ಲಾಪಿಲ್ಲಿಯಾಗಿ ವಸ್ತುಗಳ ಹರಡಿರಬೇಡಿ. ಇಷ್ಟೇ ಅಲ್ಲ ಕಣ್ಣಿಗೆ ನೇರವಾಗಿ ಬೆಳಕು ಹೊಡೆಯುವಂತೆ ಕುಳಿತುಕೊಳ್ಳಬೇಡಿ.
ಆಗಾಗ ನೀರು ಕುಡಿಯಿರಿ
ನೀವು ಓದಲು ಕುಳಿತುಕೊಳ್ಳಲು ಆರಂಭದಲ್ಲಿ ಚೆನ್ನಾಗಿ ನೀರು ಕುಡಿದು ಅಂದಿನ ಓದು ಆರಂಭಿಸಿ. ಜೊತೆಗೆ ಪ್ರತಿ 20ರಿಂದ 30 ನಿಮಿಷಗಳಿಗೊಮ್ಮೆ ಸ್ವಲ್ಪ ಸ್ವಲ್ಪವೇ ನೀರು ಕುಡಿಯಿರಿ. ಆದರೆ ಮುಖಕ್ಕೆ ಆಗಾಗ ನೀರು ಚಿಮುಕಿಸುವುದನ್ನು ಮಾಡಬೇಡಿ ಇದರಿಂದ ನಿದ್ರೆ ಕಡಿಮೆಯಾಗುವುದಿಲ್ಲ
ಓದುವ ಕೋಣೆಯಲ್ಲಿ ಅಥವಾ ನೇರಕ್ಕೆ ಗಡಿಯಾರ ಇಡಬೇಡಿ
ನೀವು ಓದಲು ಕೂರುವ ಕೋಣೆ ಅಥವಾ ನಿಮ್ಮ ನೇರವಾಗಿ ಗಡಿಯಾರ ಇಟ್ಟುಕೊಳ್ಳಬೇಡಿ. ಏಕೆಂದರೆ ನಿಮಗೆ ಓದಿನ ಕಡೆಗಿನ ಗಮನಕ್ಕಿಂತಲೂ ಸಮಯ ಓಡುತ್ತಿರುವ ಕಡೆ ಗಮನಹರಿಯುತ್ತದೆ. ಇದರಿಂದ ಓದಿನಲ್ಲಿ ಗಮನವಿಲ್ಲದೆ ನಿದ್ರೆಗೆ ದಾರಿಯಾಗುತ್ತದೆ.
ಟೀ ಇಲ್ಲವೆ ಜ್ಯೂಸ್ ಕುಡಿಯಿರಿ
ನೀವು ತಡರಾತ್ರಿಯವರೆಗೂ ಓದಬೇಕು ಎಂದುಕೊಂಡರೆ ಓದಿನ ಮಧ್ಯದಲ್ಲಿ ಒಮ್ಮೆ ಟೀ-ಕಾಫಿ ಇಲ್ಲವೆ ಯಾವುದಾದರು ಹಣ್ಣಿನ ಜ್ಯೂಸ್ ಕುಡಿಯಿರಿ. ಇದರಿಂದ ನಿಮಗೆ ನಿದ್ರೆ ಬಾರದಿರಬಹುದು. ಓದಿನ ಕಡೆ ಹೆಚ್ಚು ಗಮನ ಹೋಗಬಹುದು.
ಆಗಾಗ ವಿರಾಮ ನೀಡಿ
ಓದಲು ಕುಳಿತ ಮೇಲೆ ಗಂಟೆಗೆ ಒಮ್ಮೆಯಾದರು ಸಣ್ಣ ವಿರಾಮ ನೀಡಿ. ಹೊರಗೆ ಹೋಗಿ ಓಡಾಡುವುದು, ನೀರು ಕುಡಿಯುವುದು, ನಡೆಯುವುದು ಮಾಡಿ. ಹೀಗೆ ಮಾಡುವುದರಿಂದ ನಿದ್ರೆಯಿಂದ ಪಾರಾಗಬಹುದು.
ಅಭ್ಯಾಸ ಮಾಡುವ ವಿಷಯ ಬದಲಾಯಿಸಿ
ನೀವು ರಾತ್ರಿ ಹೊತ್ತು ಓದುವಾಗ ಒಂದೇ ವಿಷಯವನ್ನು ಓದುತ್ತಿದ್ದರೆ ನಿದ್ರೆ ಬರಬಹುದು. ಬೇರೆ ಬೇರೆ ಪಠ್ಯಗಳು, ಸಮಸ್ಯೆಗಳ ಬಗೆಹರಿಸುವುವು, ಇಲ್ಲವೆ ಬೇರೆ ಬೇರೆ ಸಬ್ಜೆಟ್ ಓದುವುದರಿಂದಲೂ ನಿದ್ರೆಯಿಂದ ಪಾರಾಗಬಹುದು. ತೀರ ನಿದ್ರೆ ತಡೆಯಲಾಗುತ್ತಿಲ್ಲ ಎಂದರೆ ನಿಮಗೆ ಸುಲಭ ಎನಿಸುವ ವಿಷಯವನ್ನು ಓದಬಹುದು.