ಇಂದಿಗೂ ಭಾರತದಲ್ಲಿ ಅನೇಕ ಜನರು ತಮ್ಮ ಬೆಳಗಿನ ಉಪಹಾರಕ್ಕೂ ಮೊದಲು ರಸ್ಕ್ ಮತ್ತು ಚಹಾ ಸೇವಿಸುತ್ತಾರೆ. ಬೆಳಗ್ಗೆ ಎದ್ದು ಫ್ರೆಶ್ ಆದ ಕೂಡಲೇ ಮಕ್ಕಳು, ಮಹಿಳೆಯರು, ವೃದ್ಧರು ಹೀಗೆ ತುಂಬಾ ಜನರು ಬೆಳಗ್ಗೆ ಚಹಾ ಮತ್ತು ರಸ್ಕ್, ಟೋಸ್ಟ್, ಬ್ರೆಡ್ ಸೇವನೆ ಮಾಡ್ತಾರೆ. ಚಹಾ ಮತ್ತು ರಸ್ಕ್ ಇಲ್ಲದಿದ್ದರೆ ಕೆಲವರು ಬೆಳಗ್ಗೆಯೇ ಮೂಡ್ ಹಾಳು ಮಾಡಿಕೊಳ್ಳುತ್ತಾರೆ.
ರಸ್ಕ್ ಗಳು ಆರೋಗ್ಯಕ್ಕೆ ಹಾನಿಕಾರಕವಾದ ಅನೇಕ ರೀತಿಯ ಅಂಶಗಳನ್ನು ಹೊಂದಿವೆ. ಸರಳವಾಗಿ ಹೇಳುವುದಾದರೆ ಇದು ಒಂದು ರೀತಿಯಲ್ಲಿ, ನಿಧಾನವಾಗಿ ದೇಹಕ್ಕೆ ಸೇರಿಕೊಳ್ಳುವ ವಿಷದಂತೆ ಜೊತೆಗೆ ಇದು ನಿಮ್ಮ ಆರೋಗ್ಯದ ಮೇಲೆಯೂ ಪರಿಣಾಮ ಬೀರಬಹುದು.
ರಸ್ಕ್ ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದು. ಇದು ಒಂದು ರೀತಿಯ ಹಿಟ್ಟು, ಸಕ್ಕರೆ ಮತ್ತು ಅಗ್ಗದ ಎಣ್ಣೆಗಳ ಮಿಶ್ರಣವಾಗಿದೆ. ಇದು ಸಾಕಷ್ಟು ಟ್ರಾನ್ಸ್ ಕೊಬ್ಬು ಮತ್ತು ಸಕ್ಕರೆಯನ್ನು ಹೊಂದಿರುತ್ತದೆ. ಹಾಗಾಗಿ ಇದು ಹೃದಯದ ಆರೋಗ್ಯ ಮತ್ತು ದೇಹದ ತೂಕಕ್ಕೆ ಅಪಾಯಕಾರಿ. ಇದಲ್ಲದೆ ಗ್ಲುಟೆನ್, ಇನ್ನಿತರ ವಿವಿಧ ಆಹಾರ ಪದಾರ್ಥಗಳನ್ನು ಇದಕ್ಕೆ ಸೇರಿಸಲಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅಂಗಡಿಗಳಲ್ಲಿ ಲಭ್ಯವಿರುವ ರಸ್ಕ್ ಗಳು ಹೆಚ್ಚಾಗಿ ಹಳೆಯ ಬ್ರೆಡ್ ನಿಂದ ತಯಾರಿಸಲಾಗುತ್ತದೆ. ಇದು ಕೂಡ ದೇಹದ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ರಸ್ಕ್ ತಯಾರಿಕೆಯಲ್ಲಿ ಬಳಸುವ ಎಣ್ಣೆಗಳು ತುಂಬಾ ಅಗ್ಗವಾಗಿರುವುದಲ್ಲದೆ ಕಡಿಮೆ ಗುಣಮಟ್ಟದ್ದಾಗಿದೆ. ಹಾಗಾಗಿ ಇವು ಹೃದ್ರೋಗಗಳಿಗೆ ಕಾರಣವಾಗಬಹುದು.
ಚಹಾದೊಂದಿಗೆ ರಸ್ಕ್ ಸೇವನೆ ಮಾಡುವ ಬದಲು ನೀವು ಆರೋಗ್ಯಕರ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಚಹಾದೊಂದಿಗೆ ಹುರಿದ ಮಖಾನಾ, ಹುರಿದ ದಾಲ್ ಅಥವಾ ಶೇಂಗಾ ಬೀಜಗಳನ್ನು ತಿನ್ನಬಹುದು. ಇವು ಪೌಷ್ಟಿಕ ಆಹಾರ ಮಾತ್ರವಲ್ಲ, ತೂಕವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತವೆ. ಈ ತಿಂಡಿಗಳು ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ಅವು ನಿಮಗೆ ಶಕ್ತಿಯನ್ನು ಒದಗಿಸುತ್ತವೆ. ಇದನ್ನು ನೀವು ರಸ್ಕ್ ಗಳಿಂದ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಸಾಧ್ಯವಾದಷ್ಟು ರಸ್ಕ್ ನಂತಹ ಆಹಾರಗಳಿಂದ ದೂರವಿರಿ ಉತ್ತಮ ಆಹಾರಗಳನ್ನು ತಜ್ಞರ ಸಲಹೆ ಪಡೆದು ಸೇವನೆ ಮಾಡಿ.