ಬೆಂಗಳೂರು: ಇದು ಜೋಗಿ ಸಿನಿಮಾದಲ್ಲಿ ಪ್ರೇಮ್ ಬರೆದಿರೋ ಸಾಲುಗಳು. ಹೈದರ್ ಕೊಲೆಯಲ್ಲಿ ಈ ಸಾಲುಗಳು ಹೇಳಿ ಮಾಡಿಸದ ಹಾಗೆ ಇದೆ. ವರ್ಷದ ಹಿಂದೆ ಒಟ್ಟಿಗೆ ಊಟ ಮಾಡಿ ಒಬ್ಬರಿಗೊಬ್ಬರು ಬಾಯಿಗೆ ತುತ್ತಿಟ್ಟವರೇ ಹೈದರ್ ಕೊಲೆಗೆ ಸ್ಕೆಚ್ ಹಾಕಿದ್ದಾರೆ.
ಕಳೆದ ರಂಜಾನ್ ನಲ್ಲಿ ನಾಜ್ ಹಾಗೂ ಹೈದರ್ ನ ರಾಜಿಯಾಗಿದ್ರು. ಈ ರಾಜಿ ವೇಳೆ ಭರ್ಜರಿ ಊಟ ಮಾಡಿದ್ರು. ಈ ಸಮಯದ ಎಕ್ಸ್ ಕ್ಲೂಸಿವ್ ವಿಡಿಯೋ AIN ಕನ್ನಡ ಗೆ ಲಭ್ಯವಾಗಿದೆ. ಈ ಸಮಯದಲ್ಲಿ ಹೈದರ್ ಖುದ್ದು ಅಬ್ಬಾಸ್ ಬಾಯಿಗೆ ತುತ್ತು ತಿನ್ನಿಸಿದ್ದಾನೆ.
ಬೀಟ್ ರೂಟ್ ಸೇವಿಸುವುದರಿಂದ ನೀವು ದಪ್ಪ, ಉದ್ದ ಕೂದಲನ್ನು ಪಡೆಯಬಹುದು..!
ನಾಜ್ ಕೂಡ ಖುಷಿಖುಷಿಯಾಗಿ ಹೈದರ್ ಜೊತೆಹೆ ಊಟ ಮಾಡಿ ವರ್ಷದ ನಂತರ ಇದೇ ಹೈದರ್ ತಲೆಗೆ ಮಚ್ಚು ಬೀಸಿದ್ದಾರೆ. ಒಟ್ಟಿನಲ್ಲಿ ರೌಡಿಗಳು ಯಾವಾಗ ರಾಜಿ ಅಂತ ಕರಿತಾರೋ ಯಾವಾಗ ಮಚ್ಚು ಬೀಸ್ತಾರೋ ಗೊತ್ತಾಗಲ್ಲ. ಸದ್ಯ ನಾಜ್ ಕೊಲೆ ಕೇಸ್ ನಲ್ಲಿ ಅರೆಸ್ಟ್ ಆದ್ರೆ ಹೈದರ್ ಕುಟುಂಬಸ್ಥರು ಅಬ್ಬಾಸ್ ಮೇಲೆ ಆರೋಪ ಮಾಡ್ತಿದ್ದಾರೆ.