ಚಹಾ, ಕಾಫಿ, ಬೂಸ್ಟ್ ಕುಡಿಯುತ್ತಿರೋ ಮಂದಿಗೆ ಆರೋಗ್ಯ ಇಲಾಖೆ ಶಾಕಿಂಗ್ ನ್ಯೂಸ್ ಕೊಟ್ಟಿದೆ.
ಬೆಳಿಗ್ಗೆ ಎದ್ದ ತಕ್ಷಣ ಬಿಸಿನೀರು ಕುಡಿಯುತ್ತೀರಾ!? ಹಾಗಿದ್ರೆ ಈ ಸುದ್ದಿ ನೋಡಿ!
ಸಿಟಿಯಲ್ಲಿರುವ ಬಹುತೇಕ ಮಂದಿ ಹೋಟೆಲ್, ಟೀ ಸ್ಟಾಲ್, ಆಫೀಸ್ ಸೆರಿದಂತೆ ಹಲವು ಕಡೆ ಪೇಪರ್ ಕಪ್ನಲ್ಲಿ ಟೀ, ಕಾಫಿ ಕುಡಿಯುತ್ತಾರೆ. ನೀವು ಏನಾದರೂ ಯದ್ವಾ-ತದ್ವಾ ಕಾಫಿ, ಟೀ ಕುಡಿಯುತ್ತಿದ್ದರೆ ಇಂದೇ ನಿಲ್ಲಿಸಿಬಿಡಿ. ಯಾಕೆಂದ್ರೆ ಆ ಪೇಪರ್ ಗ್ಲಾಸ್ ನಿಮ್ಮ ಪ್ರಾಣ ತೆಗೆದರೂ ಅಚ್ಚರಿ ಇಲ್ಲ.
ಪ್ರಯೋಗಾಲದಲ್ಲಿ ಆಹಾರ ಇಲಾಖೆ ನಡೆಸಿದ ಟೆಸ್ಟ್ ಒಂದರಲ್ಲಿ ಇದು ದೃಢವಾಗಿದೆ. ಪರೀಕ್ಷೆ ವೇಳೆ ಕ್ಯಾನ್ಸರ್ ತರುವ ಅಂಶ ಪತ್ತೆಯಾಗಿದೆ.
ಸಿಕ್ಕ ಸಿಕ್ಕ ಕಡೆ ಪೇಪರ್ ಲೋಟದಲ್ಲಿ ಬಿಸಿ ಟೀ, ಕಾಫಿ ಕುಡಿಯುತ್ತಿದ್ದರೆ ಇದೇ ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದು. ಪ್ಲೇಪರ್ ಲೋಟದಲ್ಲಿ ಆರೋಗ್ಯ ಹಾನಿಕಾರಕವಾಗಿರುವ ಅಂಶ ಇರುವುದು ಆಹಾರ ಸುರಕ್ಷತಾ ಇಲಾಖೆ ನಡೆಸಿದ ಪರೀಕ್ಷೆಯಿಂದ ಬಯಲಾಗಿದೆ. ಪೇಪರ್ ಲೋಟದಲ್ಲಿ ಕ್ಯಾನ್ಸರ್ ಕಾರಕ ಅಂಶ ಇದೆ ಎಂಬುದು ತಿಳಿದುಬಂದಿದೆ.
ಆಹಾರ ಇಲಾಖೆ ಪೇಪರ್ ಲೋಟಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿದ್ದು, ಅವುಗಳ ಬಳಕೆಯಿಂದ ಕ್ಯಾನ್ಸರ್ ಬರುವ ಅಂಶ ಪತ್ತೆಯಾಗಿದೆ. ಪೇಪರ್ ಲೋಟದಲ್ಲಿ ಶೇಕಡಾ 20 ರಷ್ಟು ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ, ಅವುಗಳಲ್ಲಿ ಬಿಸಿಯಾದ ಟೀ, ಕಾಫಿ ಹಾಕಿದ್ರೆ ಪ್ಲಾಸ್ಟಿಕ್ ಕರಗುತ್ತದೆ. ಕರಗಿದ ಪ್ಲಾಸ್ಟಿಕ್ ಅಂಶ ಮನುಷ್ಯನ ದೇಹ ಸೇರಿದರೆ ಕ್ಯಾನ್ಸರ್ ಬರುವ ಸಾಧ್ಯತೆ ಅತೀ ಹೆಚ್ಚು. ಹೀಗಾಗಿ ಪ್ಲಾಸ್ಟಿಕ್ ಅಂಶ ಇಲ್ಲದ ಕಪ್ಗಳ ಬಳಕೆಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ ಎಂದು ಆಹಾರ ಮತ್ತು ಸುರಕ್ಷತಾ ಇಲಾಖೆಯ ಶ್ರೀನಿವಾಸ್ ತಿಳಿಸಿದ್ದಾರೆ.
ಪ್ಲಾಸ್ಟಿಕ್ ಮಿಶ್ರಿತ ಪೇಪರ್ ಕಪ್ ಅಪಾಯಕರ ಎಂಬುದು ಬೀದಿ ಬದಿ ವ್ಯಾಪಾರಿಗಳಿಗೂ ಮನದಟ್ಟಾಗಿದೆ. ಹೀಗಾಗಿ ಈಗಾಗಲೇ ಪ್ಲಾಸ್ಟಿಕ್ ಅಂಶ ಇರುವ ಪೇಪರ್ ಕಪ್ ಬಳಕೆ ಶೇಕಾಡ 90ರಷ್ಟು ಕಡಿಮೆ ಮಾಡಲಾಗಿದೆ ಎಂದು ಬೆಂಗಳೂರು ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಂಗಸ್ವಾಮಿ ತಿಳಿಸಿದ್ದಾರೆ.