ಸಾಮಾನ್ಯವಾಗಿ ಕೆಲವರು ಕಾಲಗಳಿಗೆ ಅನುಗುಣವಾಗಿ ತಣ್ಣೀರು ಅಥವಾ ಬಿಸಿ ನೀರಿನಿಂದ ಸ್ನಾನ ಮಾಡುತ್ತಾರೆ. ಕೆಲವರಿಗೆ ಎಷ್ಟೇ ಚಳಿ ಇರಲಿ ಅಥವಾ ಎಷ್ಟೇ ಸೆಕೆ ಇರಲಿ, ಅವರಿಗೆ ಸ್ನಾನಕ್ಕೆ ಬಿಸಿ ನೀರೇ ಬೇಕು. ಆದರೆ, ಇನ್ನೂ ಕೆಲವೊಬ್ಬರಿರುತ್ತಾರೆ. ಯಾವ ಚಳಿಯಿದ್ದರೂ, ತಣ್ಣೀರ ಸ್ನಾನವೇ ಆಗಬೇಕು. ಆಗ ಮಾತ್ರ ಅವರಿಗೆ ಸಮಾಧಾನ.ಇದು ಒಳ್ಳೆಯದಾ? ಅಥವಾ ಎಲ್ಲಾ ಕಾಲದಲ್ಲೂ ತಣ್ಣೀರಿನ ಸ್ನಾನ ಮಾಡುವುದರಿಂದ ಏನಾದರೂ ಅಪಾಯವಿದೆಯೇ? ಖಂಡಿತಾ ಇದೆ ಎನ್ನುತ್ತಾರೆ ತಜ್ಞರು.
ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ನಿಮ್ಮ ಏರಿಯಾ ಇದೇನಾ ಚೆಕ್ ಮಾಡಿ?
ತಣ್ಣೀರು ಸ್ನಾನ ಯಾವುದೇ ರೀತಿಯ ಹಾನಿ ಆಗುವುದಿಲ್ಲ ಎಂದು ಅನೇಕ ಮಂದಿ ಭಾವಿಸಿದ್ದಾರೆ. ಆದರೆ ಹೀಗೆ ಮಾಡುವುದು ಆರೋಗ್ಯಕ್ಕೆ ತುಂಬಾ ಡೆಂಜರ್. ಆರೋಗ್ಯ ತಜ್ಞರ ಪ್ರಕಾರ, ತಣ್ಣಗಿರುವ ಟ್ಯಾಂಕ್ ನೀರಿನಲ್ಲಿ ಸ್ನಾನ ಮಾಡುವುದರಿಂದ ಹೃದಯಾಘಾತ, ಪಾರ್ಶ್ವವಾಯು ಮತ್ತು ಅನೇಕ ಗಂಭೀರ ಉಸಿರಾಟದ ಸಮಸ್ಯೆಗಳು ಉಂಟಾಗಬಹುದು. ಕೆಲವರಿಗೆ ತಣ್ಣೀರು ಹೆಚ್ಚು ಅಪಾಯಕಾರಿ ಆಗಿದೆ. ಇನ್ನೂ ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಹೃದ್ರೋಗ ತಜ್ಞರಿಂದ ತಿಳಿದುಕೊಳ್ಳೋಣ ಬನ್ನಿ.
ಈ ಬಗ್ಗೆ ತಜ್ಞರೊಬ್ಬರು ಮಾತನಾಡಿ, ಚಳಿಗಾಲದಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯ ಸುಮಾರು 20-30% ರಷ್ಟು ಹೆಚ್ಚು. ಇದು ತಾಪಮಾನದಲ್ಲಿನ ಕುಸಿತದಿಂದಾಗಿ ಉಂಟಾಗಬಹುದು.
ಈ ಸೀಸನ್ನಲ್ಲಿ ಟ್ಯಾಂಕ್ನ ತಣ್ಣೀರಿನಿಂದ ಸ್ನಾನ ಮಾಡಿದರೆ, ತಾಪಮಾನದಲ್ಲಿನ ವ್ಯತ್ಯಾಸವು ಹೃದಯದ ರಕ್ತನಾಳಗಳನ್ನು ಕುಗ್ಗಿಸುತ್ತದೆ. ಹೀಗಾಗಿ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಬೇಕು. ಇಂತಹ ವೇಳೆ ಹೃದಯದ ಅಪಧಮನಿಗಳಲ್ಲಿ 30 ರಿಂದ 40% ರಷ್ಟು ಅಡಚಣೆ ಉಂಟಾದರೆ ಹೃದಯದಲ್ಲಿ ರಕ್ತನಾಳಗಳ ಹರಿವಿಗೆ ಅಡ್ಡ ಉಂಟಾಗಬಹುದು ಮತ್ತು ಹೃದಯಾಘಾತ ಉಂಟಾಗಬಹುದು.
ವೈದ್ಯರು ಹೇಳುವ ಪ್ರಕಾರ, ತುಂಬಾ ತಣ್ಣನೆಯ ನೀರಿನಿಂದ ಸ್ನಾನ ಮಾಡುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಜೊತೆಗೆ ನ್ಯುಮೋನಿಯಾ ಮತ್ತು ಉಸಿರಾಟದ ಕಾಯಿಲೆಗಳು ಬರಬಹುದು. ಅಸ್ತಮಾ ಅಥವಾ ಇತರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರು ತಣ್ಣೀರಿನಲ್ಲಿ ಸ್ನಾನ ಮಾಡುವುದನ್ನು ತಪ್ಪಿಸಬೇಕು.
ತಣ್ಣೀರು ದೇಹದಲ್ಲಿ ತಂಪನ್ನು ಉಂಟು ಮಾಡುತ್ತದೆ. ಇದರಿಂದಾಗಿ ಉಸಿರಾಟದ ಕೊಳವೆಗಳು ಕುಗ್ಗುತ್ತವೆ. ಕೊನೆಗೆ ಇದು ಉಸಿರಾಟದ ಸಮಸ್ಯೆಯನ್ನು ಉಂಟುಮಾಡುತ್ತದೆ. ಈ ಕಾರಣದಿಂದಾಗಿ ಸಾಧ್ಯವಾದಷ್ಟು ಜನರು ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು. ಅದರಲ್ಲೂ ತಣ್ಣೀರು ಮಕ್ಕಳು ಮತ್ತು ವೃದ್ಧರ ದೇಹದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ತಣ್ಣೀರು ವಯಸ್ಸಾದವರಲ್ಲಿ ಲಘೂಷ್ಣತೆಗೆ ಕಾರಣವಾಗಬಹುದು, ಇದು ಆರೋಗ್ಯಕ್ಕೆ ಮಾರಕವಾಗಬಹುದು.
ತಣ್ಣೀರಿನಿಂದ ಸ್ನಾನ ಮಾಡುವುದಷ್ಟೇ ಅಲ್ಲ, ವಿಪರೀತ ಚಳಿ ಇರುವಾಗ ಬಟ್ಟೆ ತೊಡದೇ ಮನೆಯಿಂದ ಹೊರಗೆ ಬರಬಾರದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗೆ ಮಾಡುವುದರಿಂದ, ದೇಹದಲ್ಲಿ ರಕ್ತನಾಳಗಳು ಕುಗ್ಗುವಿಕೆ ಮತ್ತು ಅಧಿಕ ರಕ್ತದೊತ್ತಡ ಸೇರಿದಂತೆ ಅನೇಕ ಸಮಸ್ಯೆಗಳು ಉಂಟಾಗುತ್ತದೆ.
ವಿಶೇಷವಾಗಿ ಹೃದ್ರೋಗ ಅಥವಾ ಇತರ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಚಳಿ ಇರುವಾಗ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಹೀಗಿದ್ದರೂ ಯಾರಾದರೂ ತುಂಬಾ ತಣ್ಣನೆಯ ನೀರಿನಿಂದ ಸ್ನಾನ ಮಾಡುವ ತಪ್ಪನ್ನು ಮಾಡಿದರೆ, ಸರಿಯಾದ ಬೆಚ್ಚಗಿನ ಬಟ್ಟೆಗಳನ್ನು ಧರಿಸಬೇಕು ಮತ್ತು ಕೊಠಡಿಯನ್ನು ಹೀಟರ್ನ ಸಹಾಯದಿಂದ ಬೆಚ್ಚಗಿರಿಸಬೇಕು. ಇದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬರಬಹುದು ಎಂದು ಹೇಳಿದ್ದಾರೆ.