ಹಬ್ಬದ ಸೀಸನ್ ಶುರುವಾಗಿದೆ. ಈಗಾಗಲೇ ಪ್ರಸಿದ್ಧ ಇ ಕಾಮರ್ಸ್ ತಾಣಗಳಲ್ಲಿ ಸೇಲ್ಗಳು ನಡೆಯುತ್ತಿದೆ. ಬಿಗ್ ದಿವಾಳಿ ಸೇಲ್ ಲೈವ್ ಆಗಿದೆ. ಹಾಗಾದರೆ ಸ್ಮಾರ್ಟ್ ಫೋನ್ಗಳನ್ನೂ ಪ್ರೀತಿ ಪಾತ್ರರಿಗೆ ಉಡುಗೊರೆಯಾಗಿ ನೀಡಬಹುದು. ಒಂದೊಮ್ಮೆ ಯಾವ ಸ್ಮಾರ್ಟ್ ಫೋನ್ ಕೊಳ್ಳಬಹುದು ಎಂಬ ಗೊಂದಲ ನಿಮಗಿದ್ದರೆ 30 ಸಾವಿರ ರೂಪಾಯಿಯೊಳಗಿನ ಕೆಲ 5 ಜಿ ಸ್ಮಾರ್ಟ್ಫೋನ್ಗಳ ಮಾಹಿತಿ ಇಲ್ಲಿದೆ.
ರೆಡ್ಮಿ ನೋಟ್ 12 ಪ್ರೋ 5 ಜಿ (Redmi Note 12 Pro 5G): ಈ ಫೋನ್ 6.67 ಇಂಚಿನ ಎಫ್ಎಚ್ಡಿ ಡಿಸ್ಪ್ಲೇಯೊಂದಿಗೆ ಬರುತ್ತದೆ. 5000mAh ಬ್ಯಾಟರಿಯನ್ನು ಇದು ಹೊಂದಿದ್ದು, ಈ ಫೋನ್ನ ಬೆಲೆ 22,192 ರೂಪಾಯಿ.
ರಿಯಲ್ ಮಿ 11 ಪ್ರೋ 5 ಜಿ (Realme 11 Pro 5G) : ಈ ಫೋನ್ 5000mAh ಬ್ಯಾಟರಿಯೊಂದಿಗೆ ಬರುತ್ತದೆ. ಇದರ ಬೆಲೆ 23,838 ರೂಪಾಯಿ.
ರಿಯಲ್ ಮಿ ನರ್ಝೋ 60 ಪ್ರೋ (Realme Narzo 60 Pro) : ಈ ಫೋನ್ 6.7 ಇಂಚಿನ OLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು 5000mAh ಬ್ಯಾಟರಿ ಹೊಂದಿದ್ದು, ಈ ಸ್ಮಾರ್ಟ್ ಫೋನ್ 100 ಎಂಪಿ ಕ್ಯಾಮೆರಾ ಹಾಗೂ 12ಜಿಬಿ ರ್ಯಾಮ್ ಹೊಂದಿದೆ. ಇದರ ಬೆಲೆ 23,999 ರೂಪಾಯಿ.
ಮ್ಸಂಗ್ ಗ್ಯಾಲಕ್ಸಿ ಎಫ್54 5 ಜಿ (Samsung Galaxy F54 5G): ಈ ಫೋನ್ 6.7 ಇಂಚಿನ ಎಫ್ಎಚ್ಡಿ ಪ್ಲಸ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ಸ್ಯಾಮ್ಸಂಗ್ Exynos 1380 ಪ್ರೊಸೆಸರ್ನಿಂದ ಚಾಲಿತವಾಗಿದೆ. ಇದು 108 ಎಂಪಿ ಮೇನ್ ಕ್ಯಾಮೆರಾ ಹಾಗೂ 6000mAH ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ ಸುಮಾರು 24,989 ರೂಪಾಯಿ.
ವಿವೋ ವಿ29ಇ 5ಜಿ (Vivo V29e 5G): 25,800 ರೂಪಾಯಿಗೆ ಲಭ್ಯವಿದೆ ವಿವೋ ವಿ29ಇ 5ಜಿ ಫೋನ್. ಈ ಫೋನ್ 6.78 ಇಂಚಿನ ಎಫ್ಎಚ್ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 5000mAh ಬ್ಯಾಟರಿ, 64 ಎಂಪಿ ಮೇನ್ ಕ್ಯಾಮೆರಾ ಮತ್ತು 8 ಎಂಪಿ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಒಪೋ ರೆನೊ 7 5ಜಿ (Oppo Reno 7 5G): ಒಪೋ ರೆನೊ 7 5ಜಿ ಮೊಬೈಲ್ ಫೋನ್ನ ಬೆಲೆ 27,300 ರೂಪಾಯಿ. ಇದು 6.43 ಇಂಚಿನ ಎಫ್ಎಚ್ಡಿ ಡಿಸ್ಪ್ಲೇ ಹಾಗೂ 4500mAh ಬ್ಯಾಟರಿ ಒಳಗೊಂಡಿದೆ.
ವನ್ ಪ್ಲಸ್ 10ಆರ್ 5ಜಿ (OnePlus 10R 5G): ಈ ಫೋನ್ 6.7 ಇಂಚಿನ ಡಿಸ್ಪ್ಲೇ, 5000mAh ಬ್ಯಾಟರಿ, 50 ಮೆಗಾಫಿಕ್ಸೆಲ್ ಕ್ಯಾಮೆರಾದೊಂದಿಗೆ ಬರುತ್ತದೆ. ಈ ಫೋನ್ನ ಬೆಲೆ 27,999 ರೂಪಾಯಿ.
ವನ್ ಪ್ಲಸ್ ನಾರ್ಡ್ ಸಿಇ 3 5ಜಿ (OnePlus Nord CE 3 5G) : ಈ ಫೋನ್ 6.7 ಇಂಚಿನ ಎಫ್ಎಚ್ಡಿ AMOLED ಡಿಸ್ಪ್ಲೇ ಹೊಂದಿದ್ದು, 5000mAh ಬ್ಯಾಟರಿಯೊಂದಿಗೆ ಬರುತ್ತದೆ. ಈ ಫೋನ್ನ ಬೆಲೆ 28,999 ರೂಪಾಯಿ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎ34 5ಜಿ (Samsung Galaxy A34 5G): 6.6 ಇಂಚಿನ ಎಫ್ಎಚ್ಡಿ ಪ್ಲಸ್ ಸೂಪರ್ AMOLED ಡಿಸ್ಪ್ಲೇ ಹೊಂದಿರುವ ಈ ಫೋನ್ 48 ಮೆಗಾಪಿಕ್ಸೆಲ್ ಮೇನ್ ಕ್ಯಾಮೆರಾದೊಂದಿಗೆ ಬರುತ್ತದೆ. ಈ ಫೋನ್ನ ಬೆಲೆ 29,999 ರೂಪಾಯಿ.