ಅರಶಿನದಲ್ಲಿ ವಿಟಮಿನ್ ಸಿ, ವಿಟಮಿನ್ ಇ, ಕಬ್ಬಿಣ, ಸತು ಸೇರಿದಂತೆ ಹಲವು ಪೋಷಕಾಂಶಗಳು ಸಮೃದ್ಧವಾಗಿದೆವಾಗಿದೆ. ಇದು ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ಮತ್ತು ನಂಜುನಿರೋಧಕ ಗುಣವಿರುವ ಆಯುರ್ವೇದ ಔಷಧಿಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ
ಅರಶಿನದಲ್ಲಿ ಮೆಟಾನಿಲ್ ಹಳದಿ ರಾಸಾಯನಿಕವನ್ನು ಬೆರೆಸುತ್ತಾರೆ. ಹೀಗಾಗಿ ಕಲಬೆರಕೆಯುಕ್ತ ಅರಶಿನಯನ್ನು ಪತ್ತೆ ಹಚ್ಚಿ, ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕಷ್ಟವೇನಲ್ಲ.
ಶುದ್ಧ ಅರಿಶಿನವನ್ನು ಪತ್ತೆಹಚ್ಚಲು ಅತ್ಯಂತ ಸರಳವಾದ ವಿಧಾನವೆಂದರೆ ಬಣ್ಣಗಳನ್ನು ಪರೀಕ್ಷಿಸುವುದು. ಶುದ್ಧ ಅರಿಶಿನವು ಸಾಮಾನ್ಯವಾಗಿ ಆಳವಾದ ಚಿನ್ನದ ಹಳದಿ ಬಣ್ಣವನ್ನು ಹೊಂದಿರುತ್ತದೆ. ನಕಲಿ ಅರಶಿನದ ಬಣ್ಣವು ಮಸುಕಾಗಿದ್ದು, ಮಂದ ಹಳದಿ ಬಣ್ಣದಲ್ಲಿರುತ್ತದೆ
ಒಂದು ಚಮಚ ಅರಿಶಿನವನ್ನು ತೆಗೆದುಕೊಂಡು ಒಂದು ಲೋಟ ನೀರಿಗೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಕರಗಿದ ಬಳಿಕ ತಳಭಾಗದಲ್ಲಿ ಅರಿಶಿನದ ಕಣಗಳು ಉಳಿದುಕೊಂಡಿದ್ದರೆ, ಅದು ನಕಲಿ ಅರಿಶಿನವಾಗಿರುತ್ತದೆ. ಒಂದು ವೇಳೆ ಶುದ್ಧ ಅರಿಶಿನವಾಗಿದ್ದರೆ ಕರಗುವುದಿಲ್ಲ, ಬದಲಾಗಿ ನೀರಿನಲ್ಲಿ ತೇಲುತ್ತದೆ.
ಒಂದು ಚಿಟಿಕೆ ಅರಿಶಿನ ಪುಡಿಯನ್ನು ಅಂಗೈಯಲ್ಲಿ ಹೆಬ್ಬೆರಳಿನಿಂದ ಉಜ್ಜಿ, ಅರಿಶಿನವು ಶುದ್ಧವಾಗಿದ್ದರೆ, ನಿಮ್ಮ ಕೈಯಲ್ಲಿ ಹಳದಿ ಬಣ್ಣವು ಉಳಿಸಿಬಿಡುತ್ತದೆ, ಅದಲ್ಲದೇ ಕೈಗೆ ಅರಶಿನವು ಅಂಟಿಕೊಳ್ಳುತ್ತದೆ. ಅರಶಿನವು ಕಲಬೆರಕೆಯಿದ್ದರೆ ಬಣ್ಣಬಿಡುವುದಿಲ್ಲ, ಬೇಗನೆ ಕೈಯಿಂದ ಉದುರಿ ಹೋಗುತ್ತದೆ.
ಕಲಬೆರಕೆಯುಕ್ತ ಅರಶಿನವೇ ಎಂದು ಗುರುತಿಸಲು ಸ್ವಲ್ಪ ಹೈಡ್ರೋಕ್ಲೋರಿಕ್ ಆಮ್ಲವನ್ನು ಬೆರೆಸಿ ಅರಶಿನವನ್ನು ನೀರಿಗೆ ಹಾಕಬೇಕು. ಆ ಬಳಿಕ ಅರಿಶಿನದ ಬಣ್ಣವು ನೀಲಿ, ನೇರಳೆ ಅಥವಾ ಗುಲಾಬಿ ಬಣ್ಣಕ್ಕೆ ತಿರುಗಿದರೆ, ಕಲಬೆರಕೆಯಾಗಿದೆ ಎನ್ನುವುದನ್ನು ಸೂಚಿಸುತ್ತದೆ
ಅರಿಶಿನ ಪುಡಿಗೆ ಕಲಬೆರಕೆಯಾಗಿ ಕ್ಯಾಲ್ಸಿಯಂ ಕಾರ್ಬೋನೇಟ್ ಅಂಶವನ್ನು ಸೇರಿಸಲಾಗುತ್ತದೆ. ಇದನ್ನು ಪತ್ತೆ ಹಚ್ಚಲು ಹೈಡ್ರೋಕ್ಲೋರಿಕ್ ಆಮ್ಲವನ್ನು ಬಳಸಿ ಪರೀಕ್ಷಿಸಬಹುದು. ಮೊದಲಿಗೆ ಅರಿಶಿನಕ್ಕೆ ಪುಡಿಗೆ ನೀರು ಮತ್ತು ಹೈಡ್ರೋಕ್ಲೋರಿಕ್ ಆಮ್ಲವನ್ನು ಸೇರಿಸಬೇಕು. ಈ ದ್ರಾವಣದಲ್ಲಿ ಗುಳ್ಳೆಗಳ ರಚನೆಯು ಕಂಡು ಬಂದರೆ ಕ್ಯಾಲ್ಸಿಯಂ ಕಾರ್ಬೋನೇಟ್ ಪ್ರಮಾಣವು ಇದೆ ಎಂದರ್ಥ.