ಜಗತ್ತಿನಲ್ಲಿ ಹೆಚ್ಚಿನ ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಅನೇಕ ಸಮಸ್ಯೆಗಳನ್ನು ಮಹಿಳೆಯರು ಎದುರಿಸುತ್ತಿದ್ದಾರೆ. ಹಾಗಾಗಿ ಪಿಸಿಒಎಸ್ ಸಮಸ್ಯೆಯನ್ನು ತೊಡೆದುಹಾಕಲು ಈ ಜೀವನಶೈಲಿಯನ್ನು ರೂಢಿಸಿಕೊಳ್ಳಿ.
ನೀವು ಒತ್ತಡವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಒತ್ತಡದ ಜೀವನಶೈಲಿಯಿಂದ ಪಿಸಿಒಎಸ್ ಸಮಸ್ಯೆ ಹೆಚ್ಚು ಕಾಡುತ್ತದೆ. ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಋತುಚಕ್ರ ಅನಿಯಂತ್ರಿತವಾಗುತ್ತದೆ.
ಸರಿಯಾದ ಆಹಾರ ಕ್ರಮಗಳನ್ನು ಪಾಲಿಸಿ. ತರಕಾರಿ, ಹಣ್ಣುಗಳು, ಧಾನ್ಯಗಳನ್ನು ಹೆಚ್ಚು ಸೇವಿಸಿ. ಜಂಕ್ ಫುಡ್, ಸಂಸ್ಕರಿಸಿದ ಆಹಾರಗಳು ಮತ್ತು ಕರಿದ ಪದಾರ್ಥಗಳನ್ನು ಹೆಚ್ಚು ಸೇವಿಸಬೇಡಿ. ಹಾಗೇ ಕಾರ್ಬೋಹೈಡ್ರೇಟ್ ಆಹಾರಗಳಿಂದ ದೂರವಿರಿ. ಬಿಳಿ ಬ್ರೆಡ್, ಅಕ್ಕಿ ಸಕ್ಕರೆಯನ್ನು ಹೆಚ್ಚು ಬಳಸಬೇಡಿ.