ದಾಳಿಂಬೆ ನಾರಿನಂಶ, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಈ ಹಣ್ಣು ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಾಳಿಂಬೆ ಸಿಪ್ಪೆಯ ಚಹಾವನ್ನು ಮನಸ್ಸನ್ನು ಚುರುಕುಗೊಳಿಸಲು ತಯಾರಿಸಬಹುದು. ದಾಳಿಂಬೆ ಸಿಪ್ಪೆಯ ಚಹಾವನ್ನು ತಯಾರಿಸಲು ಸುಲಭವಾದ ಪಾಕವಿಧಾನವನ್ನು ಹಂಚಿಕೊಂಡಿದ್ದಾರೆ. ಇದನ್ನು ನೀವು ಸ್ಥಳೀಯ ಭಾಷೆಯಲ್ಲಿ ದಾಳಿಂಬೆ ಸಿಪ್ಪೆಗಳ ಕಷಾಯ ಎಂದೂ ಕರೆಯಬಹುದು.
ದಾಳಿಂಬೆ ಸಿಪ್ಪೆ ಚಹಾ(Pomogranate peel tea ) ತಯಾರಿಸೋದು ಹೇಗೆ ಎಂದು ಇಲ್ಲಿದೆ ನೋಡಿ:
ದಾಳಿಂಬೆ ಸಿಪ್ಪೆ ಚಹಾ ತಯಾರಿಸಲು, ಮೊದಲನೆಯದಾಗಿ, ಖಾಲಿ ಟೀ ಬ್ಯಾಗ್ ತೆಗೆದುಕೊಂಡು ಅದರಲ್ಲಿ ಒಂದು ಟೀಸ್ಪೂನ್ ದಾಳಿಂಬೆ ಸಿಪ್ಪೆ ಪುಡಿಯನ್ನು ಬೆರೆಸಿ ಮತ್ತು ಅದನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ. ಚಹಾದ ರುಚಿಯನ್ನು ಹೆಚ್ಚಿಸಲು ಈ ಚಹಾಕ್ಕೆ ಸ್ವಲ್ಪ ಜೇನುತುಪ್ಪ ಸಹ ಸೇರಿಸಬಹುದು.
ದಾಳಿಂಬೆ ಸಿಪ್ಪೆಯಿಂದ ತಯಾರಿಸಿದ ಚಹಾ ಕುಡಿಯುವುದರ ಪ್ರಯೋಜನಗಳು
ಚರ್ಮದ ಸಮಸ್ಯೆಗಳಿಗೆ ಸಹಾಯಕಾರಿ-
ದಾಳಿಂಬೆ ಸಿಪ್ಪೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಪಾಲಿಫಿನಾಲ್ ಗಳು ಹೆಚ್ಚಾಗಿವೆ, ಇದು ಹೈಪರ್ ಪಿಗ್ಮೆಂಟೇಶನ್ (ಚರ್ಮದ ಕಪ್ಪು ಕಲೆಗಳು) ಚಿಕಿತ್ಸೆಗೆ ಸಹಾಯ ಮಾಡುತ್ತೆ.
ಹೃದಯದ(Heart) ಆರೋಗ್ಯ ಕಾಪಾಡುತ್ತೆ-
ದಾಳಿಂಬೆ ಸಿಪ್ಪೆ ಹೃದಯ ಮತ್ತು ಮಧುಮೇಹದಂತಹ ಗಂಭೀರ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತೆ. ದಾಳಿಂಬೆ ಸಿಪ್ಪೆ ರಸವು ಉರಿಯೂತ ನಿವಾರಕವಾಗಿ ಕಾರ್ಯನಿರ್ವಹಿಸುತ್ತೆ, ಇದು ಅಧಿಕ ತೂಕ (Over Weight) ಮತ್ತು ಸ್ಥೂಲಕಾಯದ ಜನರಲ್ಲಿ ಕೊಲೆಸ್ಟ್ರಾಲ್ (Cholestarol) ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Sugar Level) ಸುಧಾರಿಸುತ್ತೆ.
ಮಧುಮೇಹ(Diabetes) ನಿಯಂತ್ರಿಸಲು ಸಹಕಾರಿ
ದಾಳಿಂಬೆಯಲ್ಲಿ ಹೆಚ್ಚಿನ ಪ್ರಮಾಣದ ಪಾಲಿಫಿನಾಲ್ ಗಳಿವೆ, ಅವು ಆಂಟಿ-ಆಕ್ಸಿಡೇಟಿವ್ ಚಟುವಟಿಕೆಯನ್ನು ಹೊಂದಿವೆ. ದಾಳಿಂಬೆ ಸಿಪ್ಪೆಗಳಲ್ಲಿನ ಎಲಾಜಿಕ್ ಆಮ್ಲ ಮತ್ತು ಪಿಕ್ಲುಜಿನ್ ಗುಣಲಕ್ಷಣಗಳು ಆಹಾರ ಸೇವಿಸಿದ ನಂತರ ದೇಹದಲ್ಲಿ ಹೆಚ್ಚಾಗುವ ಗ್ಲುಕೋಸ್ ಸ್ಪೈಕ್ ಕಡಿಮೆ ಮಾಡಲು ಸಹಾಯ ಮಾಡುತ್ತೆ. ಅವು ಮಧುಮೇಹ ನಿಯಂತ್ರಿಸುವಲ್ಲಿ ಸಹಾಯಕ.
ಬಾಯಿಯ ಆರೋಗ್ಯ (Oral Health)
ದಾಳಿಂಬೆ ಸಿಪ್ಪೆ ಹಲ್ಲುಗಳಲ್ಲಿ ಪ್ಲೇಕ್ ರಚನೆ ತಡೆಯಲು ಸಹಾಯ ಮಾಡುತ್ತೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ, ಇದು ಹಲ್ಲು ಮತ್ತು ಒಸಡು ರೋಗಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತೆ.
ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ತೊಡೆದುಹಾಕುತ್ತೆ-(high blood pressure)
ಈ ಚಹಾ ಹೆಚ್ಚಿನ ರಕ್ತದೊತ್ತಡದ ಸಮಸ್ಯೆಯನ್ನು (High Blood Pressure) ದೊಡ್ಡ ಪ್ರಮಾಣದಲ್ಲಿ ತೊಡೆದುಹಾಕುತ್ತೆ. ಅಧಿಕ ರಕ್ತದೊತ್ತಡವು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಮುಖ್ಯ ಕಾರಣವಾಗಿದೆ. ಉರಿಯೂತ ನಿವಾರಕ ಪದಾರ್ಥಗಳಾದ ದಾಳಿಂಬೆ ರಸವು ಅಧಿಕ ರಕ್ತದೊತ್ತಡ ಕಡಿಮೆ ಮಾಡಲು ಉಪಯುಕ್ತವಾಗಿದೆ.
ತೂಕ (Weight) ಇಳಿಸಿಕೊಳ್ಳಲು ಸಹ ಸಹಾಯಕ-
ದಾಳಿಂಬೆ ಸಿಪ್ಪೆಗಳು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇದರಲ್ಲಿರುವ ಫೈಬರ್ (Fiber) ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತೆ. ಹಾಗಾಗಿ, ತೂಕ ಇಳಿಸಿಕೊಳ್ಳಲು ನೀವು ಈ ಚಹಾ ಕುಡಿಯಬಹುದು. ದಾಳಿಂಬೆ ಸಿಪ್ಪೆಗಳಿಂದ ತಯಾರಿಸಿದ ಚಹಾವನ್ನು ನೀವು ನಿಯಮಿತವಾಗಿ ಕುಡಿದರೆ, ಆಗ ಪ್ರತಿರಕ್ಷಣಾ ವ್ಯವಸ್ಥೆಯು ಸಹ ಬಲವಾಗಿರುತ್ತೆ, ಇದರಿಂದ ನೀವು ಅನೇಕ ರೀತಿಯ ರೋಗಗಳನ್ನು ತಪ್ಪಿಸಬಹುದು.
ದಾಳಿಂಬೆ ಸಿಪ್ಪೆಯ ಪ್ರಯೋಜನಗಳು
ಗಂಟಲು ನೋವು,(sore throat)ಕೆಮ್ಮು ಇತ್ಯಾದಿಗಳ ಸಮಸ್ಯೆ ಇದ್ದರೆ, ದಾಳಿಂಬೆ ಸಿಪ್ಪೆಯಲ್ಲಿರುವ ಆಂಟಿಮೈಕ್ರೋಬಿಯಲ್ ಅಂಶಗಳು ಬ್ಯಾಕ್ಟೀರಿಯಾ, ಸೋಂಕನ್ನು ಕಡಿಮೆ ಮಾಡುತ್ತವೆ. ಮೂತ್ರವಿಸರ್ಜನೆ, ಯುಟಿಐ (UTI), ಮೂತ್ರವಿಸರ್ಜನೆಯಲ್ಲಿ ಕಿರಿಕಿರಿ ಹೊಂದಿರುವ ಜನರು, ದಾಳಿಂಬೆ ಸಿಪ್ಪೆಗಳಿಂದ ತಯಾರಿಸಿದ ಚಹಾ ಅಥವಾ ಕಷಾಯ ಕುಡೀಯೋದರಿಂದ ಸಮಸ್ಯೆ ನಿವಾರಣೆಯಾಗುತ್ತೆ.