ಲಿವರ್ಗೆ ಹಾನಿಯಾದಾಗ ಅದರ ಲಕ್ಷಣ ನಮ್ಮ ಪಾದಗಳಲ್ಲಿ ಕಂಡು ಬರುವುದು, ಆದ್ದರಿಂದ ಈ ಲಕ್ಷಣಗಳು ಕಂಡು ಬಂದಾಗ ಒಮ್ಮೆ ಚೆಕಪ್ ಮಾಡಿಸಿ:
ಲಿವರ್ ಸಮಸ್ಯೆ ಇರುವವರಿಗೆ ಈ ಲಕ್ಷಣಗಳು ಹೆಚ್ಚಾಗಿ ಕಂಡು ಬರುವುದು. ಮಧುಮೇಹ ಇರುವವರಿಗೆ ಲಿವರ್ ಸಮಸ್ಯೆ ಕಂಡು ಬರುವ ಸಾಧ್ಯತೆ ಹೆಚ್ಚು. ಲಿವರ್ ಸಮಸ್ಯೆ ಉಂಟಾದಾಗ ಕಾಲುಗಳಲ್ಲಿ ಸರಿಯಾಗಿ ರಕ್ತಸಂಚಾರವಾಗದೆ ಕಾಲುಗಳಲ್ಲಿ ರೆಡ್ ಅಂಡ್ ಬ್ರೌನ್ ಸ್ಪಾಟ್ ಕಂಡು ಬರುವುದು. ಲಿವರ್ನಲ್ಲಿ ಸಮಸ್ಯೆ ಉಂಟಾದಾಗ ಪಾದಗಳಲ್ಲಿ ಬಣ್ಣ ವ್ಯತ್ಯಾಸ ಕಂಡು ಬರುವುದು.
ಲಿವರ್ ಸಮಸ್ಯೆ ಉಂಟಾದಾಗ ಕಾಲುಗಳಲ್ಲಿ ತುರಿಕೆ ಕಂಡು ಬರುವುದು. ಕೆಲವರಿಗೆ ರಾತ್ರಿಯಲ್ಲಿ ತುಂಬಾನೇ ತುರಿಕೆ ಉಂಟಾಗುವುದು, ಆದರೆ ತುರಿಕೆಗೆ ಕಾರಣವೇನು ಎಂಬುವುದು ಗೊತ್ತಿರುವುದಿಲ್ಲ, ಕಾಲುಗಳಲ್ಲಿ, ಉಗುರುಗಳಲ್ಲಿ ಫಂಗಸ್ ಸೋಂಕು ಉಂಟಾಗುವುದು. ಅದರಲ್ಲೂ ಪಾದಗಳಲ್ಲಿ ತುಂಬಾನೇ ತುರಿಕೆ ಕಂಡು ಬರುವುದು.
ಸಾಮಾನ್ಯವಾಗಿ ರೀತಿ ನರಗಳು ಉಬಬ್ಬುವುದು ಕಾಲುಗಳಲ್ಲಿ ಕಂಡು ಬಂದರೆ ಲಿವರ್ನ ಆರೋಗ್ಯ ಪರೀಕ್ಷೆ ಮಾಡುವುದು ಒಳ್ಳೆಯದು. ಲಿವರ್ ಆಸ್ಟ್ರೋಜಿನ್ ಅನ್ನು ನಿಯಂತ್ರಿಸಲು ಸಾಧ್ಯವಾಗದೇ ಹೋದಾಗ ಈ ರೀತಿ ಕಂಡು ಬರುವುದು. ಫ್ಯಾಟಿ ಲಿವರ್ನಿಂದ ಗಾಲ್ಸ್ಟೋನ್ ಸಮಸ್ಯೆ ಕೂಡ ಉಂಟಾಗುವುದು.
ಒಮೆಗಾ 3 ಕೊಬ್ಬಿನಂಶದ ಕೊರತೆಯಾದಾಗ ಪಾದಗಳಲ್ಲಿ ಬಿರುಕು ಕಂಡು ಬರುವುದು. ಲಿವರ್ ಪಿತ್ತರಸ ಉತ್ಪತ್ತಿ ಮಾಡಿದಾಗ ಆಹಾರದಲ್ಲಿನ ಪೋಷಕಾಂಶ ಹಾಗೂ ಒಮೆಗಾ 3 ಕೊಬ್ಬಿನಂಶವನ್ನು ದೇಹವು ಹೀರಿಕೊಳ್ಳುವುದು. ದೇಹವು ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದಾಗ ಒಮೆಗಾ 3 ಕೊರತೆಯಾಗಿ ಪಾದಗಳಲ್ಲಿ ಬಿರುಕು ಕಂಡು ಬರುವುದು ಎನ್ನಲಾಗಿದೆ.