ಹುಬ್ಬಳ್ಳಿ: ಪೊಲೀಸರ ಮೇಲೆ ಒತ್ತಡ ಹಾಕಿದರೂ ಮಣಿಯವುದಿಲ್ಲ. ಪೊಲೀಸ್ ಇಲಾಖೆಗೆ ತನ್ನದೇ ಆದ ನಿಯಮಗಳಿವೆ. ಕಾನೂನಾತ್ಮಕ ಸಲಹೆ ಇದ್ದರೆ ಪಡೆಯುತ್ತೇವೆಯೇ ಹೊರತು ಒತ್ತಡಕ್ಕಲ್ಲ ಎಂದು ಹುಬ್ಬಳ್ಳಿ ಧಾರವಾಡ ನೂತನ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಎಚ್ಚರಿಕೆ ನೀಡಿದರು.
Breaking: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 10 ವರ್ಷ ಜೈಲು,1 ಲಕ್ಷ ರೂ. ದಂಡ!
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾಯಿತ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಸೇರಿದಂತೆ ಎಲ್ಲರ ನಿರೀಕ್ಷೆ ಇರುವುದು ಸಾರ್ವಜನಿಕರಿಗೆ ನೆಮ್ಮದಿ ನೀಡುವುದು. ಸಮಾದಲ್ಲಿ ಶಾಂತಿ ಕದಡುವ, ಸಾರ್ವಜನಿಕರ ನೆಮ್ಮದಿ ಹಾಳು ಮಾಡುವಂಥವರ ಪರ ಯಾರೇ ಒತ್ತಡ ತಂದರೂ ಅದಕ್ಕೆ ಮಣಿಯುವುದಿಲ್ಲ ಎಂದರು.
ರೌಡಿಗಳು ರೌಡಿಗಳೇ. ಇದರಲ್ಲಿ ಹೈಪ್ರೊಫೈಲ್, ಲೋಪ್ರೊಫೈಲ್, ಒಳ್ಳೆಯ ಅಥವಾ ಕೆಟ್ಟ ರೌಡಿಗಳು ಎಂದಿರುವುದಿಲ್ಲ. ಒಳ್ಳೆಯವನಾಗಿದ್ದರೆ ರೌಡಿಪಟ್ಟ ಕ್ಲೋಸ್ ಆಗುತ್ತದೆ. ಕೆಟ್ಟವನಾಗಿದ್ದರೆ ಮುಂದುವರಿಯುತ್ತದೆ. ಕಾನೂನಿನಲ್ಲಿ ಸಾಕಷ್ಟು ಅವಕಾಶಗಳಿವೆ. ಓಪನ್ ಮತ್ತು ಕ್ಲೋಸ್ ಮಾಡುವ ಪ್ರಕ್ರಿಯೆ ಕೂಡ ನಡೆಯುತ್ತಿರುತ್ತದೆ ಎಂದರು.
ಚಾಕು ಹಿಡಿದು ಕೇಕ್ ಕಟ್ ಮಾಡುವುದು, ಗನ್ ಹಿಡಿದು ರೀಲ್ಸ್ ಮಾಡುವುದು ಸೇರಿದಂತೆ ಯಾವುದೇ ಕಾನೂನು ಮೀರುವ ವರ್ತನೆಗಳಿಗೆ ಅವಕಾಶವಿಲ್ಲ. ಈ ರೀಲ್ಸ್ ಮಾಡಿದ ಮೇಲೆ ಕೆಲವೊಂದಿಷ್ಟು ವೈಮ್ಸ್ ಬರಬಹುದು. ಆದರೆ, ಅದರ ಫಾಲೋ ಅಪ್ ರೀಲ್ಸ್ ಬೇರೆ ಬರುತ್ತದೆ. ಅದೂ ಪೊಲೀಸ್ ಠಾಣೆಗೆ ಪೊಲೀಸರ ಕರೆದುಕೊಂಡು ಹೋಗುವ ರೀಲ್ಸ್. ಉಚ್ಚಾಟಗಳಿಗೆ ಅವಕಾಶ ಕೊಡುವುದಿಲ್ಲ. ನಮ್ಮ ಇಲಾಖೆ ಸಾಮಾಜಿಕ ಜಾಲತಾಣಗಳ ಮೇಲೆಯೂ ನಿಗಾ ಇಡಲಿದೆ ಎಂದರು.
ಇರುವ ಸಿಬ್ಬಂದಿಯನ್ನು ಬಳಸಿಕೊಂಡು ಚೆನ್ನಾಗಿ ಕೆಲಸ ಮಾಡಲಾಗುವುದು. ಮಹಿಳೆಯರ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗುವುದು. ಬೀಟ್ ಸಿಬ್ಬಂದಿಯು ಚುರುಕಾಗಿ ಕೆಲಸ ಮಾಡಲಿದೆ ಎಂದರು.
ಉತ್ತಮವಾದ ಕೆಲಸ ಮಾಡಲು ಬಂದಿದ್ದೇನೆ; ಹು-ಧಾ ನೂತನ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್
ಹುಬ್ಬಳ್ಳಿ ಧಾರವಾಡಕ್ಕೆ ಬೇರೆ ಕೆಲಸದ ಮೇಲೆ ಸಾಕಷ್ಟು ಸಾರಿ ಬಂದಿದ್ದೇನೆ. ಮೊದಲು ಹಾವೇರಿ ಎಸ್.ಪಿ ಆಗಿ ಮೂರು ವರ್ಷ ಕೆಲಸ ಮಾಡಿದ್ದೇನೆ. ಬಹಳ ಉತ್ಸಾಹದಿಂದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಬಂದಿದ್ದೇನೆ, ಉತ್ತಮ ಸೇವೆ ನೀಡುತ್ತನೆ.
ನಿನ್ನೆ ದಿನದಂದು ನಾನು ಅಧಿಕಾರ ಸ್ವೀಕರಿಸಿದ್ದೇನೆ. ಒಳ್ಳೆಯ ಸಾಮಾಜಿಕ ಕಳಕಳ ಇಟ್ಟುಕೊಂಡು ಪೊಲೀಸ್ ಇಲಾಖೆಗೆ ಒಳ್ಳೆಯ ಹೆಸರು ತರುವಂತ ಕೆಲಸ ಮಾಡುತ್ತೇನೆಂದು. ಸಾರ್ವಜನಿಕರು ಕೂಡ ಸ್ಪಂದಿಸಬೇಕು. ಹುಬ್ಬಳ್ಳಿ ಧಾರವಾಡಲ್ಲಿ ಏನೆಲ್ಲ ಆಗುತ್ತಿದ್ದವು ಎಂಬುದನ್ನು ನಾನು ಗಮನಿಸುತ್ತ ಬಂದಿದ್ದೇ, ಹುಬ್ಬಳ್ಳಿ ಧಾರವಾಡ ಜನತೆಗೆ ಉತ್ತಮವಾದ ಸೇವೆ ಮಾಡುತ್ತೇನೆ ಎಂದರು.