ಕುರಿ, ಮೇಕೆ ಮಾಂಸವನ್ನು ಸಾಮಾನ್ಯವಾಗಿ ಮಟನ್ ಎಂದು ಕರೆಯಲಾಗುತ್ತದೆ. ಸಾಕಷ್ಟು ಮಂದಿಗೆ ಮಟನ್ ಫೇವರೆಟ್ ಫುಡ್ ಆಗಿದೆ. ಇದರ ಮಾಂಸವು ಮಾನವ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಇದಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇದೆ.
ವಿಜಯವಾಡದಲ್ಲಿ ದಾರುಣ ಘಟನೆ: ವೈದ್ಯರ ಕುಟುಂಬದ ಐವರ ನಿಗೂಢ ಸಾವು..!
ಮಾಂಸಪ್ರಿಯರ ಮುಂದೆ ಮಟನ್ ಇದ್ರೆ , ಒಂದು ಪ್ಲೇಟ್ ಅನ್ನ ಕ್ಷಣಮಾತ್ರದಲ್ಲಿ ಮಾಯವಾಗಿಬಿಡುತ್ತದೆ. ಇಂದಿನ ದಿನಗಳಲ್ಲಿ ಅನೇಕರು ವಿವಿಧ ಕಾಯಿಲೆಗಳಿಂದ, ಅದರಲ್ಲೂ ಕೊಲೆಸ್ಟ್ರಾಲ್, ಮಧುಮೇಹ, ಯೂರಿಕ್ ಆಸಿಡ್ ಮುಂತಾದ ಕಾಯಿಲೆಗಳಿಂದ ಮಾಂಸ ಸೇವನೆಯನ್ನು ಕಡಿಮೆ ಮಾಡಿದ್ದಾರೆ.
ಸಾವಿರಾರು ಖಾದ್ಯಗಳ ನಡುವೆ ಮಟನ್ ಆಹಾರ ಪ್ರಿಯರಿಗೆ ಮತ್ತೊಂದು ಸ್ವರ್ಗ. ಅದರೆ ಈ ಮಟನ್ ಊಟದ ನಂತರ ಅನೇಕರು ಗೊತ್ತಿಲ್ಲದೆ ತಿನ್ನುವ ಹಲವಾರು ಆಹಾರಗಳು ದೇಹಕ್ಕೆ ತುಂಬಾ ಡೇಂಜರ್. ಮಟನ್ ಜೊತೆಗೆ ಈ ಪದಾರ್ಥಗಳ ಸೇವನೆ ಕೆಲವೊಮ್ಮೆ ಫುಡ್ಪಾಯಿಸನ್ಗೆ ಕಾರಣವಾಗಬಹುದು.
ಮಟನ್ ಅಥವಾ ಚಿಕನ್ ತಿನ್ನುವ ಮೊದಲು ಅಥವಾ ನಂತರ ಹಾಲು ಸೇವಿಸಬಾರದು ಎಂಬುದನ್ನು ಗಮನಿಸಿ. ಏಕೆಂದರೆ ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ ಮತ್ತು ದೇಹದಲ್ಲಿ ವಿವಿಧ ಸಮಸ್ಯೆಗಳಿಗೆ ಕಾರಣವಾಗಬಹುದು. ಮಟನ್ ತಿನ್ನುವುದರಿಂದ ದೇಹದಲ್ಲಿ ತೀವ್ರ ಉಷ್ಣ ಉಂಟಾಗುತ್ತದೆ. ಮೇಕೆ ಮಾಂಸವನ್ನು ತಿಂದ ನಂತರ ನಿಮ್ಮ ದೇಹ ಜೇನುತುಪ್ಪವನ್ನು ಅಂಗೀಕರಿಸುವುದಿಲ್ಲ. ಏಕೆಂದರೆ ಮಾಂಸ ತಿಂದ ತಕ್ಷಣ ಜೇನುತುಪ್ಪ ತಿಂದರೂ ದೇಹ ಮತ್ತಷ್ಟು ಬಿಸಿಯಾಗುತ್ತದೆ. ಅನೇಕ ಜನರು ಊಟ, ಟಿಫನ್ ನಂತರ ಚಹಾವನ್ನು ಕುಡಿಯಲು ಇಷ್ಟಪಡುತ್ತಾರೆ. ಆದರೆ ಮಟನ್ ತಿಂದ ನಂತರ ಚಹಾವನ್ನು ಕುಡಿಯಬಾರದು. ಇದು ಅಜೀರ್ಣ ಮತ್ತು ಎದೆಯುರಿ ಉಂಟುಮಾಡುತ್ತದೆ