ವಾಷಿಂಗ್ ಮಷೀನ್ನಿಂದ ಬಟ್ಟೆಗಳನ್ನು ತೊಳೆಯುವುದು ತುಂಬಾ ಸುಲಭ. ನಿಮಿಷಾರ್ಧದಲ್ಲಿ ಈ ಕೆಲಸವೂ ಆಗಿಬಿಡುತ್ತದೆ.
ಆದರೆ, ನೀವು ವಾಷಿಂಗ್ ಮಷೀನ್ ಬಗ್ಗೆ ಕಾಳಜಿ ವಹಿಸದಿದ್ದರೆ ಇದು ನಿಮ್ಮ ಬಟ್ಟೆಯನ್ನೂ ಹಾಳುಮಾಡುತ್ತದೆ. ಹೌದು, ವಾಷಿಂಗ್ ಮಷೀನ್ ದೀರ್ಘಕಾಲದವರೆಗೆ ಸರಿಯಾಗಿ ಕಾರ್ಯನಿರ್ವಹಿಸಲು, ನೀವು ಅದರ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇತರ ಎಲೆಕ್ಟ್ರಾನಿಕ್ ಉಪಕರಣಗಳಂತೆ ವಾಷಿಂಗ್ ಮಷೀನ್ ಶುಚಿತ್ವವೂ ಬಹಳ ಮುಖ್ಯ ಎಂದು ಅನೇಕರಿಗೆ ತಿಳಿದಿಲ್ಲ.
ಹೆಚ್ಚಿನವರು ಮಾಡುವ ತಪ್ಪೆಂದರೆ ವಾಷಿಂಗ್ ಮಷೀನ್ನಲ್ಲಿ ಬಟ್ಟೆಗಳನ್ನು ಒಗೆದ ಬಳಿಕ ಅದನ್ನು ಆಫ್ ಮಾಡಿ ಮತ್ತು ಸಂಪೂರ್ಣವಾಗಿ ಮುಚ್ಚುವುದು. ಆದರೆ ಎಂದಿಗೂ ಹೀಗೆ ಮಾಡಬೇಡಿ. ಏಕೆಂದರೆ ವಾಷಿಂಗ್ ಮಷೀನ್ನಲ್ಲಿ ಬಟ್ಟೆ ತೊಳೆದ ನಂತರ ಅದರ ಮುಚ್ಚಳವನ್ನು ಸ್ವಲ್ಪ ಹೊತ್ತು ತೆರೆದಿಡಬೇಕು. ಆದರೆ, ಇದು ಯಾಕೆ ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಬಹುದು. ಈರೀತಿ ಮಾಡುವುದರಿಂದ ಗಾಳಿಯು ವಾಷಿಂಗ್ ಮಷೀನ್ ಒಳಗೆ ಬಂದಿಯಾಗದೆ ಹೊರಗಡೆ ಹೋಗುತ್ತದೆ. ಅಲ್ಲದೆ, ಇದರಲ್ಲಿ ಯಾವುದೇ ಬ್ಯಾಕ್ಟೀರಿಯಾ ಇದ್ದರೆ ಅದು ಹೋರಗೋಗುತ್ತದೆ.
ಇದಲ್ಲದೇ ಒಮ್ಮೆ ಬಟ್ಟೆ ಒಗೆದ ನಂತರ ವಾಷಿಂಗ್ ಮಷೀನ್ ಪೂರ್ತಿಯಾಗಿ ಮುಚ್ಚಿದರೆ ಕೆಟ್ಟ ವಾಸನೆ ಬರುತ್ತದೆ. ಇದು ಹೊರಹೋಗಿವುದಿಲ್ಲ. ಹಾಗಾಗಿ ಬಟ್ಟೆ ತೊಳೆದ ಕನಿಷ್ಠ 40-45 ನಿಮಿಷ ಮುಚ್ಚಳವನ್ನು ತೆರೆದಿಟ್ಟರೆ ಮುಂದಿನ ಬಾರಿ ಒಗೆಯಲು ಹಾಕಿದಾಗ ಬಟ್ಟೆ ವಾಸನೆ ಬರುವುದಿಲ್ಲ. ಇದಲ್ಲದೆ, ವಾಷಿಂಗ್ ಮಷೀನ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಬೇಕು. ಇದಕ್ಕಾಗಿ ನೀವು ಅಡುಗೆಮನೆಯಲ್ಲಿ ಇರಿಸಲಾದ ವಿನೆಗರ್ (ಬಿಳಿ ವಿನೆಗರ್) ಅನ್ನು ಬಳಸಬಹುದು.