ಬೆಳಗಾವಿ : ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಇಲ್ಲ ಎಂಬುದು ಬಟಾಬಯಲಾಗಿದೆ. ಪಕ್ಷದ ಆತಂರಿಕ ಕಲಹ ಜೋರಾಗಿದ್ದು, ಇತ್ತೀಚಿಗೆ ವಿದೇಶಿ ಪ್ರವಾಸದ ಹೇಳಿಕೆ ಕೊಟ್ಟಿದ್ದ ಶಾಸಕರ ಮನವೊಲಿಕೆಗೆ ಡಿಸಿಎಂ ಡಿಕೆಶಿವಕುಮಾರ್ ಮುಂದಾಗಿದ್ದಾರೆ.
ಇತ್ತೀಚಿಗಷ್ಟೇ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ವಿದೇಶಇ ಪ್ರವಾಸದ ಬಗ್ಗೆ ಹೇಳಿಕೆ ಕೊಟ್ಟಿದ್ದರು. ಶಾಸಕರೆಲ್ಲರೂ ವಿದೇಶಿ ಪ್ರವಾಸಕ್ಕೆ ಹೋಗ್ತಿವಿ ಎಂದಿದ್ದರು. ಇದೀಗ ಬೆಳಗಾವಿಯಲ್ಲಿರುವ ಡಿಕೆಶಿ ಕಪಿಲೇಶ್ವರ ಮಂದಿರದಲ್ಲಿ ಪೂಜೆ ಮುಗಿಯುತ್ತಿದ್ದಂತೆ ಆಸೀಪ್ ಸೇಠ್ ಮನೆಗೆ ದೌಡಾಯಿಸಿದ್ದಾರೆ. ಹನುಮಾನ್ ನಗರದಲ್ಲಿರುವ ಅಸೀಪ್ ಸೇಠ್ ಮನೆಗೆ ಭೇಟಿ ನೀಡಿ, ಅವರ ಜೊತೆಗೆ ಊಟ ಕೂಡ ಮಾಡಿದ್ದಾರೆ. ಡಿಕೆಶಿಗೆ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ಸಚಿವ ಸುಧಾಕರ್ ಸಾಥ್ ನೀಡಿದ್ದಾರೆ.