ಬೆಂಗಳೂರು:- ಲೋಕಸಭಾ ಚುನಾವಣೆ ಶಾಕ್ನಿಂದ ನಾವು ಇನ್ನೂ ಹೊರಬಂದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಪ್ರತಿರಾತ್ರಿ ಮೊಸರು ತಿನ್ನುತ್ತಿದ್ರೆ, ಇಂದಿನಿಂದ ಆ ಅಭ್ಯಾಸ ಬಿಟ್ಬಿಡಿ: ಆಯುರ್ವೇದ ತಜ್ಞರ ಸಲಹೆ ಹೀಗಿದೆ
ಈ ಸಂಬಂಧ ಮಾತನಾಡಿದ ಅವರು,ಚನ್ನಪಟ್ಟಣದಲ್ಲಿ ಡಿ.ಕೆ ಸುರೇಶ್ ಸ್ಪರ್ಧೆಗೆ ಒತ್ತಡ ಇದೆ. ಹೆಚ್ಚುಕಡಿಮೆ ಎಲ್ಲಾ ಫೈನಲ್ ಮಾಡಿದ್ದೇವೆ. ಸಚಿವರಿಗೆ ಜವಾಬ್ದಾರಿ ನೀಡಿದ್ದೇವೆ ಅವರು ನೋಡಿಕೊಳ್ತಾರೆ. ನಮ್ಮ ಪ್ರಸ್ತಾವನೆಯನ್ನ ದೆಹಲಿಗೆ ಕಳುಹಿಸುತ್ತೇವೆ. ದೆಹಲಿ ನಾಯಕರು ಅಂತಿಮ ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ.
ಭಾನುವಾರ ಸಿಎಂ ನಿವಾಸದಲ್ಲಿ ಸಚಿವರ ಸಭೆಯಲ್ಲೇ ಆಲ್ಮೋಸ್ಟ್ ಅಭ್ಯರ್ಥಿಗಳನ್ನ ಫೈನಲ್ ಮಾಡಿದ್ದೇವೆ. ನಮ್ಮ ಸಚಿವರ ಅಭಿಪ್ರಾಯ ಕೇಳಿ, ಅವರಿಗೂ ಜವಾಬ್ದಾರಿ ಕೊಟ್ಟಿದ್ದೇವೆ. ಎಲೆಕ್ಷನ್ ಕಮೀಟಿ ಸಭೆ ಕರೆಯೋ ಬದಲು. ಕ್ಯಾಬಿನೆಟ್ ಮಿನಿಸ್ಟರ್ಸ್ ಹಾಗೂ ಯಾರಿಗೆ ಜವಾಬ್ದಾರಿ ವಹಿಸಿದ್ವಿ ಅವರನ್ನೆಲ್ಲ ಕೇಳಿದ್ದೇವೆ. ನಮ್ಮ ಪ್ರಸ್ತಾವನೆಯನ್ನು ದೆಹಲಿಗೆ ಕಳಿಸಿಕೊಡುತ್ತೇವೆ. ಹೈಕಮಾಂಡ್ ನಾಯಕರು ಬೇರೆಯವರೊಂದಿಗೂ ವೈಯಕ್ತಿಕವಾಗಿ ಮಾತನಾಡುತ್ತಾರೆ. ಮಾತನಾಡಿ ತಿರ್ಮಾನ ಮಾಡುತ್ತಾರೆ. ಎಷ್ಟು ಅರ್ಜಿ ಬಂದಿದ್ದಾವೆ ಎಂಬುದನ್ನ ಬಹಿರಂಗಪಡಿಸುವುದಕ್ಕೆ ಆಗುವುದಿಲ್ಲ ಎಂದು ಇದೇ ವೇಳೆ ತಿಳಿಸಿದ್ದಾರೆ.