ಚಿಕ್ಕಮಗಳೂರು:- ಸಿ.ಟಿ.ರವಿ ದೊಡ್ಡ ಡ್ರಾಮಾ ಮಾಸ್ಟರ್ ಎಂದು DCM ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಸಿ.ಟಿ ರವಿ ಅವರಿಗೆ ಕೊಲೆ ಬೆದರಿಕೆ ಪತ್ರ ಬಂದಿದೆ ಎಂಬ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದರು. ಅವರ ಮಾತು-ವಿಚಾರ ನೋಡಿದ್ರೆ ಈ ಮಟ್ಟಕ್ಕೆ ಇಳಿಯುತ್ತಾರೆ ಎಂದು ಭಾವಿಸಿರಲಿಲ್ಲ. ಬೇರೆ ಯಾರು ಒಪೆÇ್ಪೀದು ಬೇಡ, ಆತ್ಮಸಾಕ್ಷಿ ಒಪ್ಪಿದ್ರೆ ಸಾಕು. ಹಾಗೆ ಮಾತಾಡಬೇಕು ಎಂದಿದ್ದಾರೆ.
100 ಜನ ಬಿಜೆಪಿ ನಾಯಕರು ಹಾಗೆ ಮಾತನಾಡಬಾರದಿತ್ತು ಎಂದು ಹೇಳಿದ್ದಾರೆ. ಕ್ಷಮೆ ಕೇಳಿದ್ರೆ ಮುಗಿದುಹೋಯ್ತು. ಸುಳ್ಳಿಗೆ ಸುಳ್ಳು ಹೇಳಿಕೊಂಡು ಹೋದ್ರೆ ಕೊನೆ ಇಲ್ಲ. ಅವರ ಹತ್ತಿರ ತನಿಖಾ ತಂಡ ಇದೆ, ತನಿಖೆ ಮಾಡಿಸಿಕೊಳ್ಳಲಿ ಎಂದಿದ್ದಾರೆ.