ವಿಜಯಪುರ : ಡಿಕೆಶಿ ಕಟ್ಟಾ ಕಾಂಗ್ರೆಸ್ಸಿಗರು, ಇದೆಲ್ಲವೂ ಊಹಾಪೋಹವೆಂದು ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಜೊತೆಗೆ ಡಿಕೆಶಿ ವೇದಿಕೆ ಹಂಚಿಕೊಂಡಿದ್ದಕ್ಕೆ ಬಿಜೆಪಿ ಸೇರ್ಪಡೆ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದರು.
ಸದ್ಗುರುಗಳು ಶಿವರಾತ್ರಿ ಕಾರ್ಯಕ್ರಮ ಅದ್ಧೂರಿಯಾಗಿ ಮಾಡುತ್ತಾರೆ. ಸಿನಿಮಾ ತಾರೆಯರು ಸೇರಿ ಎಲ್ಲರಿಗೂ ಆಹ್ವಾನ ಕೊಡ್ತಾರೆ. ಅಮಿತಾ ಶಾ , ಡಿ ಕೆ ಶಿವಕುಮಾರ್ ಅವರಿಗೂ ಆಹ್ವಾನ ಕೊಟ್ಟಿದ್ದಾರೆ. ಅದು ಪಾರ್ಟಿ ಕಾರ್ಯಕ್ರಮವಲ್ಲ. ಇಶಾ ಫೌಂಡೇಶನ್ ಶಿವರಾತ್ರಿ ಕಾರ್ಯಕ್ರಮಕ್ಕೆ ಅಮಿತಾ ಶಾ ಅವರಿಗೂ ಕರೆದಿದ್ದಾರೆ, ಡಿ ಕೆ ಶಿವಕುಮಾರ್ ಅವರಿಗೂ ಕರೆದಿದ್ದಾರೆ. ಮಾಧ್ಯಮಗಳು ಇಲ್ಲಸಲ್ಲದಾಗಿ ಮಾಡುತ್ತಿದ್ದಾರೆ ಅಷ್ಟೇ ಎಂದರು.
ಇನ್ನೂ ಡಿಸಿಎಂ ಡಿ ಕೆ ಶಿವಕುಮಾರ್ ಹಿಂದುತ್ವದತ್ತ ವಾಲುತ್ತಿದ್ದಾರೆ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಅವರವರ, ವ್ಯಕ್ತಿ ಸ್ವಾತಂತ್ರ್ಯ. ಅದನ್ನ ಪಾಲನೆ ಮಾಡ್ಲಿಕ್ಕೆ ಅಧಿಕಾರ ಇದೆ. ಪ್ರಜಾಪ್ರಭುತ್ವ, ಸಂವಿಧಾನದದಲ್ಲಿ ಧಾರ್ಮಿಕ ವಿಚಾರದಲ್ಲಿ ವ್ಯಕ್ತಿ ಸ್ವಾತಂತ್ರ್ಯ ವಿದೆ. ಶಿವಕುಮಾರ ವೈಯಕ್ತಿಕ, ಅದು ಪಕ್ಷದು ಅಲ್ಲ, ವೈಯಕ್ತಿಕ ಅಸ್ಮಿತೆ ಇದ್ರೆ ಬೇರೆ. ಒಂದಕ್ಕೊಂದು ಸೇರ್ಪಡೆ ಮಾಡುವ ಅವಶ್ಯಕತೆ ಇಲ್ಲ. ಡಿಕೆ ಶಿವಕುಮಾರ್ ಹಿಂದೂಗಳಲ್ವಾ, ಶಿವರಾತ್ರಿಗೆ ಹೋದ್ರೆ ಏನಾಗುತ್ತದೆ. ಕಾಂಗ್ರೆಸ್ ಬಿಜೆಪಿಯವರು ಎಷ್ಟೋ ಧಾರ್ಮಿಕ ಕಾರ್ಯಗಳಲ್ಲಿ ಸೇರಿಸುತ್ತೇವೆ, ತಪ್ಪೇನಿದೆ ಎಂದು ಪ್ರಶ್ನಿಸಿದರು.