ಬೆಂಗಳೂರು :-ಪಟಾಕಿ ಅವಘಡಗಳು ನಗರದಲ್ಲಿ ದೀಪಾವಳಿ ಹಬ್ಬಕ್ಕೂ ಮುನ್ನವೇ ಪಟಾಕಿ ಅವಘಡಗಳು ಸಂಭವಿಸುತ್ತಿದ್ದು, ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಒಂದು ಪ್ರಕರಣ ವರದಿಯಾಗಿದೆ.
7 ವರ್ಷದ ಬಾಲಕ ಪಟಾಕಿಯಿಂದಾದ ಗಾಯದ ಕಾರಣ ಮಿಂಟೊ ಆಸ್ಪತ್ರೆಗೆ ದಾಖಲಾಗಿದ್ದಾನೆ. ಬಿಜಲಿ ಪಟಾಕಿ ಸಿಡಿತ ವೀಕ್ಷಿಸುತ್ತಿದ್ದಾಗ ಕಣ್ಣಿಗೆ ಕಿಡಿ ಸಿಡಿದು, ಎರಡೂ ಕಣ್ಣಿಗೆ ಗಂಭೀರ ಸ್ವರೂಪದ ಗಾಯವಾಗಿದೆ.
ಬಾಲಕನ ಕಣ್ಣಿನ ಒಳಗೆ ರಕ್ತ ಹೆಪ್ಪುಗಟ್ಟಿದೆ. ಇದರಿಂದ ಕ್ಯಾಟರ್ಯಾಕ್ಟ್ ಸಮಸ್ಯೆಯೂ ಕಂಡುಬಂದಿದ್ದು, ಶಸ್ತ್ರಚಿಕಿತ್ಸೆ ಮಾಡಬೇಕಿದೆ. ಪಟಾಕಿಗಳನ್ನು ಸಿಡಿಸುವವರು ಮಾತ್ರವಲ್ಲದೆ, ನೋಡುವವರಿಗೂ ಅಪಾಯವಿರುತ್ತದೆ. ಆದ್ದರಿಂದ ಪಟಾಕಿಯಿಂದ ಅಂತರ ಕಾಯ್ದುಕೊಳ್ಳಬೇಕು’ ಎಂದು ಮಿಂಟೊ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.