ಚಾಮರಾಜನಗರ: ದೇಶಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಆದರೆ ಚಾಮರಾಜನಗರ ಜಿಲ್ಲೆಯ ಈ ಗ್ರಾಮಗಳಲ್ಲಿ ದೀಪಾವಳಿ ಆಚರಣೆ ಮಾಡುತ್ತಿಲ್ಲ. ತಾಲೂಕಿನ ನೇನೇಕಟ್ಟೆ ಸುತ್ತ-ಮುತ್ತಲ 7 ಹಳ್ಳಿಯಲ್ಲಿ ದೀಪಾವಳಿ ಹಬ್ಬವನ್ನು ಮಂಗಳವಾರ ಆಚರಿಸುವುದಿಲ್ಲ. ದೀಪಾವಳಿ ಹಬ್ಬ ಬುಧವಾರ ಬಂದರೆ ಮಾತ್ರ ಎಲ್ಲರಂತೆ ಈ 7 ಗ್ರಾಮಗಳ ಜನರು ಹಬ್ಬ ಮಾಡಲಿದ್ದಾರೆ. ಈ ಸಾಲಿನಲ್ಲಿ ದೀಪಾವಳಿ ಹಬ್ಬ ಮಂಗಳವಾರ ಬಂದಿರುವುದರಿಂದ ಹಬ್ಬದ ಕುರುಹು ಈ ಗ್ರಾಮದಲ್ಲಿ ಕಂಡು ಬಂದಿಲ್ಲ.
ನೇನೇಕಟ್ಟೆ ಗ್ರಾಮದ ಸೇರಿದಂತೆ ಏಳೂರು ಎಂದು ಕರೆಯಲ್ಪಡುವ ಮಳವಳ್ಳಿ, ಬನ್ನಿತಾಳಪುರ, ಇಂಗಲವಾಡಿ, ಬೆಂಡಗಳ್ಳಿ, ವೀರನಪುರ ಹಾಗೂ ನಲ್ಲೂರಲ್ಲಿ ಬುಧವಾರ ದೀಪಾವಳಿ ಬಂದರೆ ಮಾತ್ರ ಹಬ್ಬದ ಸಡಗರ, ಸಂಭ್ರಮ ಕಾಣಲಿದೆ. ದೇಶದಲ್ಲೆಡೆ ಯಾವ ದಿನವಾದರೂ ದೀಪಾವಳಿ ಹಬ್ಬ ಮಾಡಲಿದ್ದಾರೆ. ಆದರೆ ಈ ೭ ಹಳ್ಳಿಗಳಲ್ಲಿ ಮಾತ್ರ ಬುಧವಾರ ಹೊರೆತು ಪಡಿಸಿ ಹಬ್ಬ ಮಾಡಿದರೆ ಏನಾದರೂ ಅನಾಹುತ ಸಂಭವಿಸಲಿದೆ ಎಂಬ ನಂಬಿಕೆಯಾಗಿದೆ.