ಬೆಂಗಳೂರು:- ದೀಪಾವಳಿಗೆ ದಿನಗಣನೆ ಆರಂಭವಾಗಿದ್ದು, ಹೂವು, ಹಣ್ಣು ತರಕಾರಿ ಬೆಲೆ ಏರಿಕೆ ಆಗಿದೆ.
ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಕೆ.ಆರ್.ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಖರೀದಿ ಭರಟೆ ಜೋರಾಗಿದೆ. ಹೂವಿನ ಬೆಲೆ ಬಲು ದುಬಾರಿ ಆಗಿದ್ದು, ಬೆಲೆ ಕೇಳಿಯೇ ಗ್ರಾಹಕರು ಶಾಕ್ ಆಗುತ್ತಿದ್ದಾರೆ. ಹೂವಿನೊಂದಿಗೆ ಹಣ್ಣು, ತರಕಾರಿ ಕೂಡ ಬೆಲೆಯಲ್ಲಿ ಏರಿಕೆ ಆಗಿದೆ.
ಹಾಗಾಗಿ ಗ್ರಾಹಕರು ಇದು ದುಬಾರಿ ದೀಪಾವಳಿ ಎಂದು ಹೇಳುತ್ತಾ ಪರೋಕ್ಷವಾಗಿ ಬೇಸರ ಹೊರ ಹಾಕಿದ್ದಾರೆ.