ಕಳೆದ ವಾರ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ನಂತರ ಅಮೆರಿಕದ ವಾಷಿಂಗ್ಟನ್ನಲ್ಲಿ 25ಕ್ಕೂ ಅಧಿಕ ಸಂಸದರು ಮತ್ತು ಭಾರತೀಯ ಮೂಲದ ಪ್ರಮುಖ ಅಮೆರಿಕನ್ನರು ಸಂಸತ್ ಭವನದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದರು.
ಟ್ರಂಪ್ ಅಧ್ಯಕ್ಷೀಯ ಚುನಾವಣೆ ನಂತರ ಅಮೆರಿಕ ಸರ್ಕಾರ ಆಚರಿಸಿದ ಮೊಟ್ಟ ಮೊದಲ ಪ್ರಮುಖ ಹಬ್ಬ ಇದಾಗಿದೆ. ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರ ಮತ್ತು ಹಿಂದೂ ಅಮೆರಿಕನ್ ಫೌಂಡೇಷನ್, ಸಿಖ್ಸ್ ಫಾರ್ ಅಮೆರಿಕ, ಜೈನ್ ಅಸೋಸಿಯೇಷನ್ ಆಫ್ ನಾರ್ತ್ ಅಮೆರಿಕ, ಆರ್ಟ್ ಆಫ್ ಲಿವಿಂಗ್ ಸೇರಿದಂತೆ ಹಲವು ಭಾರತೀಯ ಅಮೆರಿಕನ್ ಸಂಘಟನೆಗಳ ಸಹಭಾಗಿತ್ವದಲ್ಲಿ ಇತ್ತೀಚೆಗೆ ದೀಪಾವಳಿ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸೆನೆಟರ್ ರಾಂಡ್ ಪಾಲ್, ‘ಅಮೆರಿಕವು ವಲಸಿಗರ ಭೂಮಿ. ಇದು ವಿಶ್ವದಾದ್ಯಂತ ಅತ್ಯುತ್ತಮ ಮತ್ತು ಪ್ರಕಾಶಮಾನವಾದವರನ್ನು ಆಕರ್ಷಿಸುತ್ತದೆ. ಅವರು ಅಮೆರಿಕವನ್ನು ಶ್ರೇಷ್ಠ ದೇಶವನ್ನಾಗಿ ಮಾಡಲು ಬೆರೆತಿದ್ದಾರೆ ಎಂದರು.
ಮಿಸಿಸಿಪ್ಪಿ ಸೆನೆಟರ್ ಸಿಂಡಿ ಹೈದೆ-ಸ್ಮಿತ್ ಅವರು, ‘ಈ ದೇಶದ ಸಮೃದ್ಧಿಯನ್ನು ನಾವು ಬಯಸುತ್ತೇವೆ. ಹೊಸದನ್ನು ಬಯಸುವವರು ಹೊಸದನ್ನು ಮಾಡಬೇಕು. ನಮಗೆ ಸ್ಥಿರ ವಾತಾವರಣ, ಅತ್ಯುತ್ತಮ ಆರ್ಥಿಕತೆ ಬೇಕಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾರತೀಯ ಅಮೆರಿಕನ್ನರಿಗೆ ಶುಭಾಶಯ ಕೋರಿದ ಮಿಸ್ಸಿಸ್ಸಿಪ್ಪಿ ಸೆನೆಟರ್ ಸಿಂಡಿ ಹೈಡ್-ಸಿತ್ ಅವರು ಮುಂದಿನ ನಾಲ್ಕು ವರ್ಷಗಳ ಶ್ರೇಷ್ಠತೆಯನ್ನು ಎದುರು ನೋಡುತ್ತಿರುವುದಾಗಿ ಹೇಳಿದರು. ನಾವು ಈ ದೇಶಕ್ಕೆ ಸಮದ್ಧಿಯನ್ನು ಒದಗಿಸಲು ಬಯಸುತ್ತೇವೆ, ಹೊಸದನ್ನು ಹುಡುಕಲು ಬಯಸುವವರಿಗೆ, ಹೊಸದನ್ನು ಮಾಡಲು ಎಂದು ಅವರು ಹೇಳಿದರು.