ಭಾರತ-ಪಾಕ್ ಸೈನಿಕರು ಗಡಿಯಲ್ಲಿ ಸಿಹಿ ಹಂಚಿ ದೀಪಾವಳಿ ಸಂಭ್ರಮಿಸಿದ್ದಾರೆ ಎಂಬ ವರದಿ ಇತ್ತೀಚೆಗೆ ಭಾರೀ ವೈರಲ್ ಆಗುತ್ತಿದೆ. ಆದರೆ ಇದು ಸುಳ್ಳೋ, ನಿಜವೋ ಎಂಬ ವಿಚಾರಕ್ಕೆ ಇದೀಗ ಫುಲ್ ಸ್ಟಾಪ್ ಇಡಲಾಗಿದೆ.
ಮುಡಾ ಆರೋಪಕ್ಕೆ ಸರ್ಕಾರದ ಕೊರೊನಾ ಅಸ್ತ್ರ: ಬಿಜೆಪಿ ನಾಯಕರಿಗೆ ಪಿಪಿಇ ಕಂಟಕ! ಯಡಿಯೂರಪ್ಪ, ಶ್ರೀರಾಮುಲುಗೆ ಸಂಕಷ್ಟ!
ಎಲ್ಒಸಿಯ ಬಾರಾಮುಲ್ಲಾ ಸೆಕ್ಟರ್ನಲ್ಲಿರುವ ಉರಿಯಲ್ಲಿ ಭಾರತೀಯ ಸೇನೆ ಕೂಡ ಜವಾನರು ಗ್ರಾಮಸ್ಥರೊಂದಿಗೆ ಹಬ್ಬವನ್ನು ಆಚರಿಸಿದರು. ಸೇನೆ ಮತ್ತು ಸ್ಥಳೀಯರು ಉಡುಗೊರೆ ಕೊಟ್ಟು, ಸಿಹಿ ಹಂಚಿದ ದೃಶ್ಯಗಳು ಕಂಡು ಬಂದವು.
ಪ್ರಧಾನಿ ನರೇಂದ್ರ ಮೋದಿ ಕೂಡ ಭಾರತದ ಸಶಸ್ತ್ರ ಪಡೆಗಳೊಂದಿಗೆ ಹಬ್ಬವನ್ನು ಆಚರಿಸುವ ಸಂಪ್ರದಾಯವನ್ನು ಮುಂದುವರೆಸಿದರು. ಪಾಕಿಸ್ತಾನದ ಗಡಿಯಲ್ಲಿರುವ ಬಿಎಸ್ಎಫ್ ಔಟ್ಪೋಸ್ಟ್ಗೆ ಭೇಟಿ ನೀಡಿದ ಅವರು, ಸೈನಿಕರೊಂದಿಗೆ ಸಂವಾದ ನಡೆಸಿ ದೀಪಾವಳಿ ಶುಭಾಶಯಗಳನ್ನು ಹಂಚಿಕೊಂಡರು
ಇದರ ಮಧ್ಯೆ, 2024 ರ ದೀಪಾವಳಿಯ ಸಂದರ್ಭದಲ್ಲಿ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಸೇನೆಗಳು ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡು ಸಿಹಿ ಹಂಚಿ ಸಂಭ್ರಮಿಸಿದೆ ಎಂಬ ಹೇಳಿಕೆಯೊಂದಿಗೆ ಸೈನಿಕರು ಉಡುಗೊರೆಗಳು ಮತ್ತು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುವ ವಿಡಿಯೋ ವೈರಲ್ ಆಗುತ್ತಿದೆ.
ಎಕ್ಸ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡು, ಭಾರತ-ಪಾಕಿಸ್ತಾನ ಗಡಿಯಲ್ಲಿ ದೀಪಾವಳಿಯ ಸಿಹಿತಿಂಡಿಗಳನ್ನು ಹಂಚಲಾಗಿದೆ. ಇದು ಎಲ್ಲಾ ಅವರ ಆಟ. ಇದು ಭಯೋತ್ಪಾದಕರದ್ದು ಎಂದು ತೋರಿಸುತ್ತದೆ ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.