ಯುಜವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀ ಶೀಘ್ರವೇ ಡಿವೋರ್ಸ್ ಪಡೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಆಪ್ತ ಮೂಲಗಳ ಪ್ರಕಾರ ಇಬ್ಬರು ಪ್ರತ್ಯೇಕವಾಗುವುದು ನಿಜ. ವಿಚ್ಛೇದನ ಪ್ರಕ್ರಿಯೆಗಳು ಇನ್ನೂ ಅಂತಿಮಗೊಂಡಿಲ್ಲ. ಎಲ್ಲಾ ಷರತ್ತುಗಳು ಪೂರ್ಣಗೊಂಡ ಬಳಿಕ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ.
ಒಡೆದ ತೆಂಗಿನಕಾಯಿ ಕೆಡದಂತೆ ಇಡಲು ಇಲ್ಲಿದೆ ಟಿಪ್ಸ್! ಹೀಗೆ ಮಾಡಿದ್ರೆ ಸಾಕು ತುಂಬಾ ದಿನ ತಾಜಾವಾಗಿರುತ್ತೆ.
ಇದರ ಬೆನ್ನಲ್ಲೇ ದಾಂಪತ್ಯ ಜೀವನದ ಬಿರುಕಿನಿಂದಾಗಿ ಯುಜ್ವೇಂದ್ರ ಚಹಲ್ ಕಂಠಪೂರ್ತಿ ಕುಡಿದು ತಿರುಗಾಡುತ್ತಿದ್ದಾರೆ ಎಂಬ ಟ್ಯಾಗ್ ಲೈನ್ನೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಡಲಾಗಿದೆ. ಈ ವಿಡಿಯೋದಲ್ಲಿ ಚಹಲ್ ವ್ಯಕ್ತಿಯೊಬ್ಬರ ಸಹಾಯದಿಂದ ಕಾರು ಹತ್ತಲು ಪ್ರಯತ್ನಿಸುತ್ತಿರುವುದು ಕಾಣಬಹುದು.
https://x.com/_Zsports/status/1876096321461059910?ref_src=twsrc%5Etfw%7Ctwcamp%5Etweetembed%7Ctwterm%5E1876096321461059910%7Ctwgr%5E44db814316e5c7ba578c031899e0262be51b57e5%7Ctwcon%5Es1_&ref_url=https%3A%2F%2Ftv9kannada.com%2Fsports%2Fcricket-news%2Fyuzvendra-chahal-breaks-down-shocking-viral-video-fire-on-social-media-kannada-news-zp-959713.html
ಯುಜ್ವೇಂದ್ರ ಚಹಲ್ ಅವರ ವೈರಲ್ ವೀಡಿಯೊಗೆ ಸಂಬಂಧಿಸಿದಂತೆ, ಅವರು ಕಂಠಪೂರ್ತಿ ಮದ್ಯಪಾನ ಮಾಡಿರುವುದು ನಿಜ. ಹೀಗಾಗಿ ನಡೆಯಲು ಕಷ್ಟಪಡುತ್ತಿದ್ದಾರೆ. ಅಲ್ಲದೆ ಒಬ್ಬ ವ್ಯಕ್ತಿಯೊಬ್ಬರ ಆಸರೆಯೊಂದಿಗೆ ಅವರನ್ನು ಕಾರಿನಲ್ಲಿ ಕೂರಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹದು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಆದರೆ ಅದು ಪ್ರಸ್ತುತ ವಿಡಿಯೋ ಎನ್ನುವುದಕ್ಕೆ ಯಾವುದೇ ಪುರಾವೆಯಿಲ್ಲ. ಅಲ್ಲದೆ ವೈಯುಕ್ತಿಕ ಜೀವನದ ಏರಿಳಿತದಿಂದಾಗಿ ಅವರು ಹೀಗೆ ಕಾಣಿಸಿಕೊಂಡಿದ್ದಾರೆ ಎಂಬುದನ್ನು ದೃಢೀಕರಿಸಲಾಗಿಲ್ಲ. ಕಳೆದ ವರ್ಷ ಟೀಂ ಇಂಡಿಯಾ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ವಿಚ್ಛೇದನ ಪಡೆದಿದ್ದರು. ಮಾಜಿ ಕ್ರಿಕೆಟಿಗ ಶಿಖರ್ ಧವನ್ ಕೂಡ ಪತ್ನಿಯಿಂದ ಬೇರ್ಪಟ್ಟಿದ್ದಾರೆ.