ನವದೆಹಲಿ: ಅಯೋಧ್ಯೆಯಲ್ಲಿ ಶ್ರೀರಾಮಂದಿರ (Ayodhya Ram Mandir) ನಿರ್ಮಾಣವಾಗಬೇಕು ಅನ್ನೋದು ದೈವಿಕ ಕನಸು. ಅದನ್ನು ವಿಧಿ ಬಹಳ ಹಿಂದೆಯೇ ನಿರ್ಧರಿಸಿತ್ತು. ಅದಕ್ಕಾಗಿ ವಿಧಿಯೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಆಯ್ಕೆ ಮಾಡಿಕೊಂಡಿದೆ ಎಂದು ಬಿಜೆಪಿ ಹಿರಿಯ ನಾಯಕ ಲಾಲ್ಕೃಷ್ಣ ಅಡ್ವಾಣಿ (LK Advani) ಅಭಿಪ್ರಾಯಪಟ್ಟಿದ್ದಾರೆ.
`ರಾಮ ಮಂದಿರ ನಿರ್ಮಾಣ್, ಏಕ ದಿವ್ಯ ಸ್ವಪ್ನ ಕಿ ಪೂರ್ತಿ’ (ರಾಮ ಮಂದಿರ ನಿರ್ಮಾಣ – ದಿವ್ಯ ಕನಸಿನ ಈಡೇರಿಕೆ) ಎಂಬ ಶೀರ್ಷಿಕೆಯೊಂದಿಗೆ ಅಡ್ವಾಣಿ ಅವರು ಬರೆದಿರುವ ಈ ಲೇಖನದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ 33 ವರ್ಷಗಳ ಹಿಂದೆ ನಡೆಸಿದ ‘ರಥಯಾತ್ರೆ’ಯನ್ನು (Rath Yatra) ಸ್ಮರಿಸಿಕೊಂಡಿದ್ದಾರೆ. ಈ ಲೇಖನದಲ್ಲಿ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಾಗಬೇಕೆಂಬ ದೈವಿಕ ಕನಸು ನನಸಾಗಿದೆ ಎಂದು ಉಲ್ಲೇಖಿಸಿದ್ದಾರೆ.
Salt in Vastu: ನಿಮ್ಮ ಕುಟುಂಬದಲ್ಲಿ ಆಗ್ತಾ ಇರುವ ಎಲ್ಲಾ ಸಮಸ್ಯೆಗಳಿಗೆ ಉಪ್ಪಿನಿಂದ ಪರಿಹಾರವಿದೆ!
`ರಾಷ್ಟ್ರಧರ್ಮ’ (Rashtradharma) ಹಿಂದಿ ಪತ್ರಿಕೆಯಲ್ಲಿ ಜನವರಿ 16ರಂದು ಅಡ್ವಾಣಿಯವರ ಈ ಲೇಖನ ಪ್ರಕಟಗೊಳ್ಳಲಿದೆ. ಈ ಲೇಖನವನ್ನು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳಿಗೆ ನೀಡಲಾಗುತ್ತದೆ. ಈ ಕುರಿತು ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅಡ್ವಾಣಿ ಅವರು, ತಮ್ಮ ರಥಯಾತ್ರೆ ಹಾಗೂ ರಾಮಮಂದಿರ ನಿರ್ಮಾಣ ಕುರಿತು ಅನೇಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಂದಿರ ನಿರ್ಮಾಣಕ್ಕಾಗಿ ಶ್ರೀರಾಮನೇ ತನ್ನ ಭಕ್ತ ಮೋದಿಯನ್ನ ಆಯ್ಕೆ ಮಾಡಿಕೊಂಡಿದ್ದಾನೆ ಎಂಬುದಾಗಿ ಹೇಳಿದ್ದಾರೆ.