ಧಾರವಾಡ:– ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ “ಭಾರತೀಯ ಪ್ರಜೆಗಳಾದ ನಾವು…” ಎಂದೇ ಆರಂಭವಾಗುತ್ತದೆ. ದೇಶದ ಪ್ರಜೆಗಳಾದ ನಮ್ಮ ಜೀವನ ವಿಧಾನ ಯಾವುದು, ಒಪ್ಪಿಕೊಂಡು ನಡೆಯಬೇಕಾದ ಮೌಲ್ಯಗಳು ಯಾವುವು? ಎಂಬುದನ್ನು ನಮ್ಮ ಸಂವಿಧಾನ ಒಳಗೊಂಡಿದೆ. ಸ್ವಾತಂತ್ರ್ಯಾ ಬಂದ ನಂತರ, ಎಲ್ಲ ಭಾರತೀಯರೂ ಒಪ್ಪಿ ನಡೆಯಬೇಕಾದ ಪವಿತ್ರ ಗ್ರಂಥವಾಗಿರುವ ಸಂವಿಧಾನವು ಬಾಬಾಸಾಹೇಬ್ ಅಂಬೇಡ್ಕರ್ರವರಿಂದ ರಚಿತವಾಗಿದೆ ಎನ್ನುವ ಕಾರಣಕ್ಕಾಗಿಯೇ ಅದನ್ನು ವಿರೋಧಿಸುವ, ಸಂವಿಧಾನದ ಮೂಲ ಆಶಯಗಳನ್ನೇ ಬುಡಮೇಲು ಮಾಡಲು ಮೂಲಭೂತವಾದಿ ಸಂಘ ಪರಿವಾರದಂತಹ ಸಂಘಟನೆಗಳು ಪ್ರಯತ್ನಿಸುತ್ತಾ ಬರುತ್ತಿವೆ. ಕೋಮುವಾದಿಗಳು ‘ನಾವು ಈಗಿರುವ ಸಂವಿಧಾನವನ್ನು ಬದಲು ಮಾಡುತ್ತೇವೆ’ ಎಂದು ನೇರವಾಗಿಯೇ ಹೇಳುವ ಮಟ್ಟಕ್ಕೆ ಇಳಿದ್ದಿದ್ದಾರೆ.
ಬಾಬಾಸಾಹೇಬರ ಹೋರಾಟ ಮತ್ತು ಚಿಂತನೆಯಿಂದ ಎಚ್ಚೆತ್ತುಕೊಳ್ಳುತ್ತಿರುವ ದಲಿತ ಸಮುದಾಯದ ನಡುವೆ ಸಂವಿಧಾನವನ್ನು ಬದಲಾಯಿಸುವುದು ಕಷ್ಟ ಎನ್ನುವುದನ್ನು ಅರ್ಥ ಮಾಡಿಕೊಂಡಿರುವ ಕೋಮುವಾದಿಗಳು, ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಮೂಲಕ ಸಂವಿಧಾನವನ್ನು ಅಪ್ರಸ್ತುತಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಹೊಸ ಆರ್ಥಿಕ ನೀತಿಗಳಿಂದ ಬಂಡವಾಳಶಾಹಿಗಳು ಮೇಲುಗೈ ಸಾಧಿಸುತ್ತಿವೆ. ಹೀಗಾಗಿ ಮೀಸಲಾತಿಯಂತಹ ಸಾಮಾಜಿಕ ನ್ಯಾಯದ ಪರಿಕಲ್ಪನೆಗಳಿಗೆ ದಕ್ಕೆ ಉಂಟಾಗಿದೆ. ಹೀಗೆ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನಗಳನ್ನು ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ನಡೆಸುತ್ತಲೇ ಇದೆ ಎಂದು ರಾಜ್ಯ ಸಂಚಾಲಕರು ಮಾವಳ್ಳಿ ಶಂಕರ್ ಮಾತನಾಡಿದರು
ಈ ಸಂದರ್ಭದಲ್ಲಿ ಲಕ್ಷ್ಮಣ ದೊಡ್ಡಮನಿ ವಿಭಾಗೀಯ ಸಂಚಾಲಕರು ರಾಮಣ್ಣ ಎಚ್ ಜಿಲ್ಲಾ ಪ್ರಧಾನ ಸಂಚಾಲಕರು ಮಾರುತಿ ಎನ್ ಲಮಾಣಿ ಜಿಲ್ಲಾ ಉಪ ಪ್ರಧಾನ ಸಂಚಾಲಕರು ಶಕುಂತಲಾ ವಾಲಿಕಾರ ಮಹಿಳಾ ಜಿಲ್ಲಾ ಸಂಚಾಲಕಿ
ವರದಿ ಮಾರುತಿ ಲಮಾಣಿ