ಮಂಡ್ಯ: ಹಲವು ದುರಂತದ ಬಳಿಕ ಕೊನೆಗೂ ಎಚ್ಚೆತ್ತಿರುವ ಜಿಲ್ಲಾಡಳಿತ ಇದೀಗ ವಿಸಿ ನಾಲೆಗೆ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದೆ. ಹೌದು ಆರು ವರ್ಷಗಳ ಬಳಿಕ ವಿಸಿ ತಡೆಗೋಡೆ ನಿರ್ಮಾಣಕ್ಕೆ ಮಂಡ್ಯ ಜಿಲ್ಲಾಡಳಿತ ಮುಂದಾಗಿದೆ.
ಅನ್ನದಾತರ ಅಕ್ಷಯಪಾತ್ರೆಯಾಗಿದ್ದ ವಿಸಿ ನಾಲೆ ಕಳೆದ ಆರು ವರ್ಷಗಳಲ್ಲಿ ಸಾವಿನ ನಾಲೆಯಾಗಿ ಬದಲಾಗಿತ್ತು. ಕಳೆದ ಆರು ವರ್ಷಗಳಲ್ಲಿ ವಿಸಿ ನಾಲೆಯಲ್ಲಿ ಸುಮಾರು 48 ಜನರು ದುರ್ಮರಣಕ್ಕೀಡಾಗಿದ್ದಾರೆ. ವಿಸಿ ನಾಲೆಯ ದಡದ ರಸ್ತೆ ಅತ್ಯಂತ ಕಿರಿದಾಗಿರುವುದರಿಂದ ಇಲ್ಲಿ ವಾಹನ ಸವಾರರು ಸ್ವಲ್ಪ ಯಾಮಾರಿದರೂ ವಾಹನ ಸಮೇತ ನಾಲೆಗೆ ಬೀಳುತ್ತಿದ್ದರು. ನಾಲೆ ವ್ಯಾಪ್ತಿಯ ಡೇಂಜರ್ ಝೋನ್ಗಳಲ್ಲಿ ತಡೆಗೋಡೆ ಇಲ್ಲದಿರಿವುದು ಈ ಅವಘಡಕ್ಕೆ ಪ್ರಮುಖ ಕಾರಣವಾಗಿತ್ತು.
ವಿಸಿ ನಾಲೆಗೆ ಕಾರು ಬಿದ್ದ ಪ್ರಕರಣ ; ನಾಪತ್ತೆಯಾಗಿದ್ದ ಫೀರ್ ಖಾನ್ ಮೃತದೇಹ ಪತ್ತೆ
ಕಳೆದ ಫೆ. 3ರಂದು ಮಾಚಹಳ್ಳಿ ಸಮೀಪ ಕಾರು ನಾಲೆಗೆ ಬಿದ್ದು ಮೂವರು ಸಾವನ್ನಪ್ಪಿದ್ದರು. ಇದೀಗ ಆ ದುರಂತ ನಡೆದ ತಿಂಗಳೊಳಗೆ ಹುಲಿಕೆರೆಯಿಂದ ಜೈಪುರದವರೆಗೆ ಎರಡೂವರೆ ಕಿ.ಮೀ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಡೇಂಜರ್ ಝೋನ್ಗಳಲ್ಲೂ ತಡೆಗೋಡೆ ಹಾಕಲು ಜಿಲ್ಲಾಡಳಿತ ಮುಂದಾಗಿದೆ.