ಗದಗ:- ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ರೂಪಾಂತರಿ ಕೇಸ್ ಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ ಕರೋನಾ ಜೆಎನ್-೧ ನಿಯಂತ್ರಣಕ್ಕೆ ಗದಗ ಜಿಲ್ಲಾಡಳಿತ ಸಜ್ಜಾಗಿದೆ.
ಆ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಸಕಲ ಸಿಧ್ಧತೆ ಮಾಡಲಾಗಿದೆ. ಸಧ್ಯ ಕರೋನಾ ಸೋಂಕಿತರಿಗಾಗಿ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ 50 ವಿಶೇಷ ಬೆಡ್ ವ್ಯವಸ್ಥೆ ಮಾಡಲಾಗಿದೆ. ಸೋಂಕಿತರ ಸಂಖ್ಯೆಯಾಧಾರದ ಮೇಲೆ ಹಂತಹಂತವಾಗಿ ಬೆಡ್ ಕನ್ವರ್ಟಗೆ ನಿರ್ಧಾರ ಮಾಡಲಾಗಿದೆ.
50ರ ಪೈಕಿ 10ಐಸಿಯು, 5ಪಿಡಿಯಾಟ್ರಿಕ್, 15 ಮಹಿಳೆಯರಿಗೆ, ಪುರುಷರಿಗೆ 20 ಬೆಡ್ ಮೀಸಲಿಡಲಾಗಿದೆ.
ಎರಡು ಆಕ್ಸಿಜನ್ ಘಟಕಗಳು 20ಕೆಎಲ್ -1, 13ಕೆಎಲ್-1,
ಒಂದು ನಿಮಿಷಕ್ಕೆ 1000ಲೀಟರ್ ಉತ್ಪಾದನೆಯ 1ಪ್ಲಾಂಟ್,
1ನಿಮಿಷಕ್ಕೆ 500ಲೀಟರ್- 3ಆಕ್ಸಿಜನ್ ಜನರೇಟರ್ ಪ್ಲಾಂಟ್
ಜಿಮ್ಸ್ ವ್ಯಾಪ್ತಿಯಲ್ಲಿ ಆಕ್ಸಿಜನ್ ಸಿಲಿಂಡರ್ಸ್ – 200
ಪರಿಸ್ಥಿತಿಗನುಗುಣವಾಗಿ 120-ವೆಂಟಿಲೇಟರ್, ಸಂಬಂಧಿತ ಔಷಧಿ ವ್ಯವಸ್ಥೆ ಮಾಡಲಾಗಿದ್ದು, ಸೋಂಕಿತರನ್ನ ಕರೆತರಲು ಪೂರಕ ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.
ವೈದ್ಯಾಧಿಕಾರಿಗಳು ಸೇರಿದಂತೆ ಪ್ರತಿ ವಿಭಾಗಕ್ಕೂ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಗುತ್ತಿಗೆ, ಅರೆಗುತ್ತಿಗೆ ಸೇರಿ ಸರ್ಕಾರಿ ವೈದ್ಯ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.