ಶಿವಮೊಗ್ಗ:- ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಹೆಸರಿನಲ್ಲಿ ಹೊಸ ವರ್ಷಕ್ಕೆ ವಿಷ ಪದಾರ್ಥ ಬೆರೆಸಿರುವ ಸಿಹಿ ತಿಂಡಿಯನ್ನ ನಗರದ ಮೂವರಿಗೆ ಕೊರಿಯರ್ ಮೂಲಕ ರವಾನಿಸಿರುವ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ.
ನನ್ನ ಜೊತೆ ಸಹಕರಿಸು: ವಿದ್ಯಾರ್ಥಿನಿಯರ ಜತೆ ಪ್ರಿನ್ಸಿಪಾಲ್ ಕಿರಿ- ಕಿರಿ, ದಾಖಲಾಯ್ತು ಕೇಸ್!
ಹೊಸ ವರ್ಷಕ್ಕೆ ಶುಭಾಶಯ ಕೋರುವ ನೆಪದಲ್ಲಿ ಡಿಟಿಡಿಸಿ ಕೋರಿಯರ್ ಮೂಲಕ ಸರ್ಜಿ ಗ್ರೂಪ್ ಆಫ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರೂ ಆದ ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಅವರ ಹೆಸರಿನಲ್ಲಿ ನಗರ ವೈದ್ಯರೂ ಸೇರಿ ವಿವಿಧ ಗಣ್ಯ ವ್ಯಕ್ತಿಗೆ ವಿಷಮಿಶ್ರಿತ ಲಾಡುಗಳಿರುವ ಪಾರ್ಸಲ್ ಅನ್ನು ಕೋರಿಯರ್ ಮೂಲಕ ಕಳುಹಿಸಿರುವ ಅಘಾತಕಾರಿ ಘಟನೆ ಗುರುವಾರ ನಡೆದಿದೆ.
ಡಿಟಿಡಿಸಿ ಕೋರಿಯರ್ ಮೂಲಕ ಭದ್ರಾವತಿಯಿಂದ ಈ ಪಾರ್ಸೆಲ್ ಕಳುಹಿಸಲಾಗಿದೆ. ಒಬ್ಬರು ಇದನ್ನು ಬಾಯಲ್ಲಿ ಹಾಕಿಕೊಂಡ ತಕ್ಷಣ ಕಹಿ ಅಂಶ ಪತ್ತೆಯಾಗಿದೆ. ಕೂಡಲೇ ಪ್ರಕರಣ ಬೆಳಕಿಗೆ ಬಂದಿದ್ದು, ದೊಡ್ಡ ಗಂಡಾಂತರ ತಪ್ಪಿದಂತಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಎಂಎಲ್ಸಿ ಧನಂಜಯ ಸರ್ಜಿ ಅವರು ಸ್ವೀಟ್ ಅನ್ನು ಲ್ಯಾಬ್ಗೆ ರವಾನೆ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಿದ್ದಾರೆ. ಸ್ವೀಟ್ ಬಾಕ್ಸ್ ಕಳುಹಿಸಿದ ಅನಾಮಧೇಯ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.