ಗದಗ: ಇದೇ ಜನೆವರಿ 22 ರಂದು ಅಯೋಧ್ಯೆಯಲ್ಲಿ ಶ್ರಿ ರಾಮಮಂದಿರ ಉದ್ಘಾಟನೆ ಶ್ರೀ ರಾಮಲಲ್ಲಾ ನೂತನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಗದಗ ನಗರದಲ್ಲಿ ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ ಹಾಗೂ ರಾಮ ಮಂದಿರ ಭಾವಚಿತ್ರ ಮನೆ ಮನೆ ವಿತರಣೆ ಕಾರ್ಯ ಪ್ರಾರಂಭವಾಗಿದೆ.
ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ ನೇತೃತ್ವದಲ್ಲಿ ಇಂದು ಗದಗ ನಗರದ ವಿವಿಧೆಡೆ ಮನೆ ಮನೆಗೆ ತೆರಳಿ ಮಂತ್ರಾಕ್ಷತೆ ವಿತರಣೆ ಕಾರ್ಯ ಮಾಡಲಾಯಿತು.
22 ನೇ ತಾರೀಖು ಮನೆ ಮುಂದೆ ದೀಪ ಹಚ್ಚಿ ರಂಗೋಳಿ ಬಿಡಿಸಿ ರಾಮನಾಮ ಜಪ ಮಾಡೋ ಮೂಲಕ ಹಬ್ಬ ಆಚರಿಸುವಂತೆ ಇದೇ ವೇಳೆ ಮನವಿಯನ್ನ ಮಾಡಿದ್ರು. ಈ ಸಂದರ್ಭದಲ್ಲಿ ಹಿಂದೂ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ಅಭಿಯಾನದಲ್ಲಿ ಭಾಗಿಯಾಗಿದ್ರು.