ಚಾಮರಾಜನಗರ:- ನಿಗಮ ಮಂಡಳಿ ಹಂಚಿಕೆ ವಿಚಾರದಲ್ಲಿ ಕೆಲ ಶಾಸಕರ ಅಸಮಾಧಾನ ವಿಚಾರವಾಗಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ನಮ್ಮ ಕಾಂಗ್ರೆಸ್ ಪಾರ್ಟಿ ಸಮುದ್ರ. ದದ್ದಲ್ ಆಗ್ಲಿ ಯಾರೇ ಆಗ್ಲಿ ಸ್ನೇಹಿತರೆ ಕುಳಿತುಕೊಂಡು ಮಾತನಾಡುತ್ತೇವೆ ಎಂದರು.
ಇನ್ನೂ ಬಿ.ವೈ ರಾಘವೇಂದ್ರ ಪರ ಶ್ಯಾಮನೂರು ಶಿವಶಂಕರಪ್ಪ ಬ್ಯಾಟ್ ಬೀಸಿದ ವಿಚಾರವಾಗಿ ಮಾತನಾಡಿ, ಇದನ್ನ ಯಾವ ಉದ್ದೇಶ ಇಟ್ಕೊಂಡು ಹೇಳಿದ್ದಾರೊ ಎಲ್ಲಿ ಹೇಳಿದ್ದಾರೊ ನನಿಗೆ ಗೊತ್ತಿಲ್ಲ ಅವರನ್ನೆ ಕೇಳ್ಬೇಕು ಎಂದರು.
ಇನ್ನೂ ಲಕ್ಷ್ಮಣ ಸವದಿಗೆ ಬಿಜೆಪಿಯಿಂದ ಒತ್ತಡವಿರುವ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿಯವರು ಈ ರೀತಿ ಹೇಳುತ್ತಲೇ ಬರುತ್ತಿದ್ದಾರೆ.
ಸರ್ಕಾರ ಒಂದು ತಿಂಗಳಲ್ಲಿ ಬೀಳುತ್ತೆ ನಾಲ್ಕುತಿಂಗಳಲ್ಲಿ ಬೀಳುತ್ತೆ ಅಂತ ಈಗ 9 ತಿಂಗಳಾಗಿದೆ ಸರ್ಕಾರಕ್ಕೆ ಏನಾದ್ರು ಆಯ್ತ..? ಏನು ಆಗಿಲ್ಲ
ಜಗದೀಶ್ ಶೆಟ್ಟರ್ ರವರು ಎಂ ಎಲ್ ಸಿ ಆದ್ರೆ ಎಂಎಲ್ಎ ಹೋಗ್ಬೇಕಲ್ಲಾ
ನಾವು ಸರ್ಕಾರ ರಚನೆ ಮಾಡಿರುವುದು ಎಂ ಎಲ್ ಎ ಗಳ ಮೇಲೆ. ನಮ್ಮ ಸರ್ಕಾರ ಸುಭದ್ರವಾಗಿರುತ್ತೆ ಎಂದರು.
ಇನ್ನೂ ಪಕ್ಷಕ್ಕೆ ಬರುವವರ ಮೇಲೆ ನಿಗಾ ವಹಿಸಬೇಕೆಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನ ಸಚಿವ ಬೈರತಿ ಸರೇಶ್ ಎತ್ತಿ ಹಿಡಿದಿದ್ದಾರೆ.