ಯಾದಗಿರಿ:- ಜಿಲ್ಲೆಯ ಹುಣಸಗಿಯಲ್ಲಿ ಪರ ಪುರುಷನ ವ್ಯಾಮೋಹಕ್ಕೆ ಸಿಲುಕಿದ್ದ ಪತ್ನಿಯೇ ಪತಿಯನ್ನೇ ಕೊಲೆ ಮಾಡಿರುವ ಘಟನೆ ಜರುಗಿದೆ.
ಫೆ.3ರಂದು ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ 30ನೇ ಪುಣ್ಯ ಸ್ಮರಣೋತ್ಸವ , ಜಾತ್ರಾ ಮಹೋತ್ಸವ
ಮಾನಪ್ಪ ಬಂಕಲದೊಡ್ಡಿ ಎಂಬಾತ ಕಳೆದ 11 ವರ್ಷಗಳ ಹಿಂದೆ ಲಕ್ಷ್ಮೀ ಎಂಬಾಕೆಯನ್ನ ಮದುವೆಯಾಗಿದ್ದ. ಇಬ್ಬರು ಅನ್ಯೋನ್ಯವಾಗಿಯೇ ಇದ್ದರು. ಆದ್ರೆ, ಈ ಮಧ್ಯೆ ಲಕ್ಷ್ಮೀ ಪರಪುರುಷರ ವ್ಯಾಮೋಹಕ್ಕೆ ಸಿಲುಕಿ ಪತಿಯನ್ನೇ ಕೊಲೆ ಮಾಡಿದ್ದಾಳೆ. ನಂತರ ಹಾರ್ಟ್ ಅಟ್ಯಾಕ್ನಿಂದ ಗಂಡ ಸಾವನ್ನಪ್ಪಿದ್ದಾನೆಂದು ಕಥೆ ಕಟ್ಟಿದ್ದಾಳೆ.
ಜಿಲ್ಲೆ ಹುಣಸಗಿ ಪಟ್ಟಣದ ಈ ಮಾನಪ್ಪ ಬಂಕಲದೊಡ್ಡಿ, 11 ವರ್ಷಗಳಿಂದೆ ಈ ಲಕ್ಷ್ಮೀಯನ್ನ ಮದುವೆ ಆಗಿದ್ದ. ಆದರೆ ಇತ್ತೀಚೆ ಲಕ್ಷ್ಮೀ ದಾರಿ ತಪ್ಪಿದ್ದಳು. ಕೆಲವರ ಜತೆ ಅಕ್ರಮ ಸಂಬಂಧ ಇಟ್ಕೊಂಡಿದ್ದಳು. ಈ ವಿಷಯ ಗಂಡನಿಗೆ ಗೊತ್ತಾಗಿ ಜಗಳ ಆಗಿತ್ತು. ಮೊನ್ನೆ ರಾತ್ರಿ ದಂಪತಿ ನಡುವೆ ಮತ್ತೆ ಗಲಾಟೆ ಆಗಿದೆ. ಅದೇ ರಾತ್ರಿ ಪ್ರಿಯಕರನನ್ನ ಮನೆಗೆ ಕರೆಸಿಕೊಂಡಿರುವ ಲಕ್ಷ್ಮೀ, ದಿಂಬಿನಿಂದ ಪತಿಯ ಉಸಿರು ಗಟ್ಟಿಸಿಕೊಂದಿದ್ದಾಳೆ.