ಬಿಗ್ ಬಾಸ್ ಸೀಸನ್ 11 ಬಹಳ ಕುತೂಹಲಕಾರಿಯಾಗಿ ಮೂಡಿ ಬರುತ್ತಿದ್ದು, ವೀಕ್ಷಕರಿಗೆ ಬಹಳ ಮನರಂಜನೆ ಮೂಡುತ್ತಿದೆ.
ಬಾಣಂತಿಯರ ಸರಣಿ ಸಾವು ಪ್ರಕರಣ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಿಂದ ಪರಿಶೀಲನೆ!
ಬಿಗ್ ಬಾಸ್ ವಾರದ ಕತೆಯಲ್ಲಿ ಕಿಚ್ಚ ಸುದೀಪ್ ಈ ವೀಕೆಂಡ್ ನಾನಾ ವಿಚಾರದ ಬಗ್ಗೆ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ಬಿಗ್ ಬಾಸ್ ಮನೆಯಲ್ಲಿನ ಕೆಲವರ ವೈಯಕ್ತಿಕ ದ್ವೇಷಗಳ ಅಂತರ ಹೆಚ್ಚಾಗುತ್ತಿದೆ. ಗೌತಮಿ – ಮಂಜು ಒಂದು ಕಡೆ ಜತೆಯಾಗಿದ್ದರೆ ಇವರಬ್ಬರ ಜತೆಯೂ ಅಷ್ಟಕಷ್ಟಕ್ಕೆ ಎನ್ನುವಂತಿರುವ ಮೋಕ್ಷಿತಾ ಅವರ ಪರಿಸ್ಥಿತಿ ಮನೆಯಲ್ಲಿ ಬೇರೆಯೇ ರೀತಿಯಲ್ಲಿದೆ.
ಗೌತಮಿ ಅವರ ಜತೆ ಆಡೋದಾದ್ರೆ ತಾನು ಆಡೋದೆ ಇಲ್ಲ ಎಂದು ಮೋಕ್ಷಿತಾ ಕ್ಯಾಪ್ಟನ್ಸಿ ಟಾಸ್ಕ್ ನಿಂದಲೇ ಆಚೆ ಉಳಿದಿದ್ದರು. ನನಗೆ ನನ್ನ ಸ್ವಾಭಿಮಾನನೇ ಮುಖ್ಯವೆಂದ ಮೋಕ್ಷಿತಾಗೆ ಪಂಚಾಯ್ತಿಯಲ್ಲಿ ಕಿಚ್ಚ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ.
ಅರ್ಥ ಆಯ್ತಾ, ಅರ್ಥ ಆಯ್ತಾ ಎಂದು ಊರಿಗೆಲ್ಲ ಹೇಳುವ ಒಬ್ಬರಿಗೆ ಇನ್ನು ಬಿಗ್ ಬಾಸ್ ರಿಯಲ್ ಗೇಮ್ ಏನು ಅಂಥ ಅರ್ಥನೇ ಆಗಿಲ್ಲವೆಂದು ಸುದೀಪ್ ಮೋಕ್ಷಿತಾ ಅವರ ನಿರ್ಧಾರದ ಬಗ್ಗೆ ಮಾತನಾಡಿದ್ದಾರೆ.