ಹುಬ್ಬಳ್ಳಿ : ಜಮೀನಿಗೆ ನೀರು ಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ದಾಯಾದಿಗಳ ನಡುವೆ ಹೊಡೆದಾಟ ಉಂಟಾದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಸಾವಿಗೀಡಾಗಿ ಮೂರು ಜನ ಗಾಯಗೊಂಡ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಕುರುವಿನಕೊಪ್ಪ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಹುಬ್ಬಳ್ಳಿ ಸಿಲಿಂಡರ್ ಸ್ಪೋಟ ಕೇಸ್: ಚಿಕಿತ್ಸೆ ಫಲಿಸದೇ ಮತ್ತೋರ್ವ ಮಾಲಾಧಾರಿ ಸಾವು, ಉಳಿದವರು ಇಬ್ಬರು ಮಾತ್ರ!
ಕುರುವಿನಕೊಪ್ಪ ಗ್ರಾಮದ ಪಾಟೀಲ ಕುಟುಂಬದ ನಡುವೆ ಹೊಲದ ವಿಚಾರಕ್ಕೆ ಜಗಳ ಆಗಾಗ ನಡೆಯುತ್ತಿತ್ತು. ಪಾಟೀಲ ಕುಟುಂಬದವರು ಹೊಲದಲ್ಲಿ ಕಬ್ಬು ಬೆಳೆದಿದ್ದರು. ಇನ್ನೆರಡು ದಿನಗಳಲ್ಲಿ ಕಬ್ಬು ಕಟಾವು ಮಾಡಬೇಕಿತ್ತು. ಆದ್ರೆ ಇವರ ದಾಯಾದಿಗಳು ಇಂದು ಹೊಲಕ್ಕೆ ನೀರು ಬಿಟ್ಟಿದ್ದಾರೆ.
ಎರಡು ಕುಟುಂಬಗಳ ನಡುವೆ ಮಾರಕಾಸ್ತ್ರಗಳಿಂದ ಹೊಡೆದಾಟ ನಡೆದ ಪರಿಣಾಮ ಅನುಸೂಯಾ ಮಂಜುನಾಥ್ ಪಾಟೀಲ್ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ಕುರಿತು ಕಲಘಟಗಿ ಪೊಲೀಸರು ತನಖೆ ಮಾಡತಾ ಇದ್ದಾರೆ.