ಉದ್ಯಮಿ ರತನ್ ಟಾಟಾ ಇನ್ನು ನೆನಪು ಮಾತ್ರ. ಕೈಗಾರಿಕೋದ್ಯಮಿ, ವಾಣಿಜ್ಯೋದ್ಯಮಿ ಮತ್ತು ಟಾಟಾ ಸನ್ಸ್ನ ಗೌರವಾಧ್ಯಕ್ಷರಾಗಿದ್ದ ರತನ್ ಟಾಟಾ ಅನಾರೋಗ್ಯದಿಂದ ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. 86 ವಯಸ್ಸಿನ ಉದ್ಯಮಿ ಆಸಕ್ತಿದಾಯಕ ಮತ್ತು ಬದುಕಿನ ಅನೇಕ ಕಥೆಗಳನ್ನು ಬಿಟ್ಟು ಹೋಗಿದ್ದಾರೆ. 150 ವರ್ಷಗಳ ಇತಿಹಾಸವಿರುವ ಟಾಟಾ ಗ್ರುಪ್ ನ್ನು ಸ್ಥಾಪನೆ ಮಾಡಿದವರು ರತನ್ ಟಾಟಾ ರ ತಾತಾ ಜೆಮ್ಶೆಟ್ಜಿ ಟಾಟಾ. ಟಾಟಾ ಕುಟುಂಬದಲ್ಲೇ ರತನ್ ಟಾಟಾ ಪ್ರಮುಖರು
ರತನ್ ನಾವಲ್ ಟಾಟಾ ( ಡಿಸೆಂಬರ್ 28, 1937)ಅನೇಕ ಪ್ರಮುಖ ಟಾಟಾ ಉದ್ಯಮಗಳಾದ ಟಾಟಾ ಸ್ಟೀಲ್, ಟಾಟಾ ಮೋಟರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಟೀ, ಟಾಟಾ ತಂತ್ರಜ್ಞಾನ, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ ಟೆಲಿ ಸರ್ವಿಸಸ್ ಮುಂತಾದ ಕಂಪನಿಗಳನ್ನು ಸ್ಥಾಪಿಸಿದ್ದರು.
ರತನ್ ಟಾಟಾ ಅವರು ಕೈಗಾರಿಕೋದ್ಯಮ, ವ್ಯಾಪಾರ ಸಾಮ್ರಾಜ್ಯದಲ್ಲಿ ತಮ್ಮದೇ ಆದ ವಿಶೇಷ ಗುರುತನ್ನು ಗಳಿಸಿದ್ದವರು. ವ್ಯಾಪಾರದಲ್ಲಿ ಮಾತ್ರವಲ್ಲದೆ ಸಮಾಜ ಸೇವೆ, ಪರೋಪಕಾರಿಯಲ್ಲೂ ರತನ್ ಟಾಟಾ ಅವರಿಗೆ ಸರಿಸಾಟಿ ಯಾರೂ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಬಹಳ ದಾನ ಧರ್ಮ ಉದಾರಗಳ ರತನ್ ಟಾಟಾ ನಿಜಕ್ಕೂ ಉದಾತ್ತ ವ್ಯಕ್ತಿಯಾಗಿದ್ದರು.
ದೇಶದಲ್ಲಿ ತಮ್ಮ ಅಧ್ಯಯನವನ್ನು ಮುಗಿಸಿದ ನಂತರ, ರತನ್ ಟಾಟಾ ಮೊದಲು ಟಾಟಾ ಗ್ರೂಪ್ ಕಂಪನಿಯಾದ ಟಾಟಾ ಇಂಡಸ್ಟ್ರೀಸ್ನಲ್ಲಿ ಸಹಾಯಕರಾಗಿ ಸೇರಿಕೊಂಡರು. ಆ ನಂತರ ಜಮ್ಶೆಡ್ಪುರದ ಟಾಟಾ ಪ್ಲಾಂಟ್ನಲ್ಲಿ ಕೆಲವು ತಿಂಗಳು ತರಬೇತಿ ಪಡೆದರು. ತರಬೇತಿ ಮುಗಿಸಿ ರತನ್ ಟಾಟಾ ಅವರು ತಮ್ಮ ಜವಾಬ್ದಾರಿಯನ್ನು ಆರಂಭಿಸಿದರು.
ರತನ್ ಟಾಟಾ ಅವರಿಗೆ ಸಂತಾನ ಇಲ್ಲ. ಹೀಗಾಗಿ, ಅವರ ಕುಟುಂಬದ ಇತರ ಸದಸ್ಯರ ಹೆಸರು ಟಾಟಾ ಗ್ರೂಪ್ ವಾರಸುದಾರಿಕೆಗೆ ಪರಿಗಣಿಸಲಾಗುತ್ತಿದೆ. ರತನ್ ಟಾಟಾ ಅವರಿಗೆ ಇಬ್ಬರು ಸಹೋದರರಿದ್ದಾರೆ. ಜಿಮ್ಮಿ ಟಾಟಾ ಮತ್ತು ನೋಯಲ್ ಟಾಟಾ (Noel Tata) ಅವರು ಆ ಇಬ್ಬರು ಬ್ರದರ್ಸ್. ರತನ್ ತಂದೆ ನವಲ್ ಟಾಟಾ ಅವರಿಗೆ ಇಬ್ಬರು ಪತ್ನಿಯರು. ರತನ್ ಮತ್ತು ಜಿಮ್ಮಿ ಅವರು ಮೊದಲ ಪತ್ನಿಯ ಮಕ್ಕಳು. ನೋಯಲ್ ಟಾಟಾ ಅವರು ಎರಡನೇ ಪತ್ನಿಯ ಮಕ್ಕಳು.
ಇಲ್ಲಿ ಕಿರಿಯ ಸಹೋದರ ಜಿಮ್ಮಿ ಟಾಟಾ ಅವರು ಬಿಸಿನೆಸ್ಗಳಿಂದ ದೂರವೇ ಉಳಿದು ಪ್ರಶಾಂತವಾಗಿ ಜೀವನ ನಡೆಸುತ್ತಿದ್ದಾರೆ. ಇನ್ನೊಬ್ಬ ಸಹೋದರ ನೋಯಲ್ ಟಾಟಾ ಅವರಿಗೆ ಮೂವರು ಮಕ್ಕಳಿದ್ದಾರೆ. ಲಿಯಾ ಟಾಟಾ, ಮಾಯಾ ಟಾಟಾ ಮತ್ತು ನೆವಿಲ್ಲೆ ಟಾಟಾ ಅವರ ಹೆಸರುಗಳು ಈಗ ಟಾಟಾ ಗ್ರೂಪ್ ವಾರಸುದಾರಿಕೆಗೆ ಕೇಳಿಬರುತ್ತಿವೆ. ಮೂವರೂ ಕೂಡ ಗ್ರೂಪ್ನ ಬೇರೆ ಬೇರೆ ಬಿಸಿನೆಸ್ಗಳನ್ನು ನಿರ್ವಹಿಸುತ್ತಿದ್ದಾರೆ.
ಲಿಯಾ ಟಾಟಾ
ಸ್ಪೇನ್ನಲ್ಲಿ ಬಿಸಿನೆಸ್ ಉನ್ನತ ಶಿಕ್ಷಣ ಪಡೆದ ಲಿಯಾ ಅವರು (Leah Tata) ಟಾಟಾ ಗ್ರೂಪ್ನ ಹೋಟೆಲ್ ಉದ್ದಿಮೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಜಾಗತಿಕವಾಗಿ ಟಾಟಾ ಉದ್ದಿಮೆ ಬೆಳೆಯಲು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಮಾಯಾ ಟಾಟಾ
ವಾರ್ವಿಕ್ ಯೂನಿವರ್ಸಿಟಿಯಲ್ಲಿ ಓದಿದ ಮಾಯಾ ಟಾಟಾ ಅವರು ಗ್ರೂಪ್ನ ಡಿಜಿಟಲ್ ಕಾರ್ಯಗಳನ್ನು ನಿಭಾಯಿಸಿದ್ದಾರೆ. ಟಾಟಾ ಆಪೋರ್ಚುನಿಟೀಸ್ ಫಂಡ್, ಟಾಟಾ ಡಿಜಿಟಲ್ನಲ್ಲಿ ಇವರ ಶ್ರಮ ಇದೆ. ಹಾಗೆಯೆ, ಟಾಟಾ ಗ್ರೂಪ್ನ ಸೂಪರ್ ಆ್ಯಪ್ ಆದ ಟಾಟಾ ನ್ಯೂ (Tata Neu) ಆರಂಭಿಸಲು ಈಕೆಯೇ ಪ್ರಮುಖ ಸೂತ್ರಧಾರಿ.
ನೆವಿಲ್ಲೆ ಟಾಟಾ
ಟಾಟಾ ಗ್ರೂಪ್ನ ಟ್ರೆಂಟ್ ಸಂಸ್ಥೆಗೆ ಸೇರಿದ ಸ್ಟಾರ್ ಬಜಾರ್ ಅನ್ನು ನೆವಿಲ್ಲೆ ಟಾಟಾ (Neville Tata) ಮುನ್ನಡೆಸುತ್ತಿದ್ದಾರೆ. ರೀಟೇಲ್ ಬಿಸಿನೆಸ್ ಅನ್ನು ಬೆಳೆಸಲು ಇವರ ಚಾಣಾಕ್ಷ್ಯತನ ಗಮನ ಸೆಳೆದಿದೆ.
ನವಲ್ ಟಾಟಾ ಅವರ ಈ ಮೇಲಿನ ಮೂವರು ಮಕ್ಕಳ ಪೈಕಿ ನವಿಲ್ಲೆ ಟಾಟಾ ಮಾತ್ರವೇ ಗಂಡು. ಇನ್ನಿಬ್ಬರೂ ಹೆಣ್ಮಕ್ಕಳೇ. ಬಿಸಿನೆಸ್ನಲ್ಲಿ ಸಮರ್ಥ ಎನಿಸಿರುವ ನೆವಿಲ್ಲೆ ಟಾಟಾ ಅವರಿಗೆ ವಾರಸುದಾರಿಕೆ ಸಿಗಬಹುದು ಎಂದು ಹೇಳಲಾಗುತ್ತಿದೆ. ಹಾಗೆಯೇ, ಮಾಯಾ ಟಾಟಾ ಅವರ ಹೆಸರೂ ಸಾಕಷ್ಟು ಕೇಳಿಬರುತ್ತಿದೆ.
ಏರ್ ಇಂಡಿಯಾ ಸೇರಿದಂತೆ ಹಲವು ಸಂಸ್ಥೆಗಳ ಒಡೆತನ
ಜೆಆರ್ಡಿ ಟಾಟಾ ಸ್ಥಾಪಿಸಿದ್ದ ಏರ್ ಇಂಡಿಯಾ ಕಂಪನಿ ಬಳಿಕ 1953ರಿಂದ ಭಾರತ ಸರ್ಕಾರದ ಅಧೀನದಲ್ಲಿತ್ತು. 2022ರಲ್ಲಿ 18 ಸಾವಿರ ಕೋಟಿ ಮೊತ್ತದ ಡೀಲ್ನಲ್ಲಿ ಏರ್ ಇಂಡಿಯಾ ಕಂಪನಿಯನ್ನ ಟಾಟಾ ಗ್ರೂಪ್ ಮರಳಿ ಖರೀದಿಸಿತ್ತು. ಟೆಟ್ಲಿ ಟೀ, ಬಿಗ್ ಬ್ಯಾಸ್ಕೆಟ್, ಸ್ಟಾರ್ ಬಕ್ಸ್, ಹೀಗೆ ಒಂದಾ ಎರಡಾ ನೂರಾರು ಕಂಪನಿಗಳನ್ನ ಖರೀದಿಸಿ, ಕೋಟ್ಯಂತರ ನೌಕರರ ಜೀವನಕ್ಕೆ ಆಧಾರ ಸ್ತಂಭವಾಗಿದ್ದರು. ಈಗ ಇಂತಹ ದೈತ್ಯ ಉದ್ಯಮಿಯನ್ನ ಕಳೆದುಕೊಂಡು ಟಾಟಾ ಗ್ರೂಪ್ ಅನಾಥವಾಗಿದೆ.