ನವದೆಹಲಿ: ಭಾರತ ಸೌರ ಶಕ್ತಿ ಉತ್ಪಾದನಾ ಸಾಮರ್ಥ್ಯದಲ್ಲಿ ಕ್ಷಿಪ್ರ ಬೆಳವಣಿಗೆ ಕಂಡಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ಎಕನಾಮಿಕ್ ಟೈಮ್ಸ್ ಎನರ್ಜಿ ಲೀಡರ್ಶಿಪ್ ಶೃಂಗಸಭೆ 2024 ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತ ಸೌರ ಶಕ್ತಿ ಉತ್ಪಾದನಾ ಸಾಮರ್ಥ್ಯದಲ್ಲಿ ಕ್ಷಿಪ್ರ ಬೆಳವಣಿಗೆ ಕಂಡಿದೆ. ದೇಶೀಯ ಬೇಡಿಕೆ ಪೂರೈಸುವ ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಫ್ತು ಕೈಗೊಂಡು ವಿದೇಶಿ ವಿನಿಮಯ ಗಳಿಸುವಲ್ಲಿ ತನ್ನದೇ ಕೊಡುಗೆ ನೀಡುತ್ತದೆ ಎಂದು ಹೇಳಿದ್ದಾರೆ.
2014 ರಲ್ಲಿ ಭಾರತದ ಸ್ಥಾಪಿತ ಸೌರ ಶಕ್ತಿ ಉತ್ಪಾದನಾ ಸಾಮರ್ಥ್ಯ ಕೇವಲ 2.3 GW ಇತ್ತು. ಅದೀಗ ಒಂದು ದಶಕದಲ್ಲಿ ಸರಿಸುಮಾರು 67 GW ಗೆ ಅತ್ಯಧಿಕ ಏರಿಕೆ ಕಂಡು “ಮೇಕ್ ಇನ್ ಇಂಡಿಯಾ” ಆಗುವತ್ತ ದಾಪುಗಾಲಿಟ್ಟಿದೆ ಎಂದು ಪ್ರತಿಪಾದಿಸಿದ್ದಾರೆ.
https://ainlivenews.com/fix-these-diseases-if-you-lack-sleep/
2021 ರಲ್ಲಿ ಇದ್ದ 8 GW ಸೌರ ಶಕ್ತಿ ಉತ್ಪಾದನಾ ಸಾಮರ್ಥ್ಯ ಕಳೆದ 3.5 ವರ್ಷಗಳಲ್ಲಿ ವರ್ಷಕ್ಕೆ 67 GW ಗೆ ಜಿಗಿದಿದೆ. 2026 ರ ವೇಳೆಗೆ ಪ್ರತಿ ವರ್ಷ 100 GW ಗೆ ಕೊಂಡೊಯ್ಯುವ ಯೋಜನೆ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಸೌರ PLI ಯೋಜನೆ ಭಾರತಕ್ಕೆ ಅತ್ಯಾಧುನಿಕ ಸೌರ ಶಕ್ತಿ ಮಾಡ್ಯೂಲ್ ಉತ್ಪಾದನಾ ತಂತ್ರಜ್ಞಾನ ತರುತ್ತಿದ್ದು, 1.1 ಲಕ್ಷ ಕೋಟಿ ಆರ್ಥಿಕ ಉಳಿತಾಯದ ಜತೆಗೆ ಸುಮಾರು 45,000 ಜನರಿಗೆ ನೇರ ಉದ್ಯೋಗವನ್ನೂ ಸೃಷ್ಟಿಸುತ್ತದೆ. ಅಲ್ಲದೇ, ಆಮದು ಅವಲಂಬನೆ ಕಡಿಮೆ ಮಾಡುತ್ತದೆ ಎಂದಿದ್ದಾರೆ.