ಲಕ್ನೋ: ಅಯೋಧ್ಯೆಯ ರಾಮಮಂದಿರ ಇಂದು ಸುಮಾರು 28 ಲಕ್ಷಕ್ಕೂ ಹೆಚ್ಚಿನ ದೀಪಗಳಿಂದ ಬೆಳಗಿದೆ. ಆರತಿಯ ಸಮಯದಲ್ಲಿ 1,100 ಕ್ಕೂ ಹೆಚ್ಚು ಜನರು ಸರಯು ಘಾಟ್ನಲ್ಲಿ ಒಟ್ಟಾಗಿ ಆರತಿಯನ್ನು ಮಾಡುವ ಮೂಲಕ ಎರಡು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ದಾಖಲೆಯನ್ನು ಬರೆದಿದ್ದು, ಸಿಎಂ ಯೋಗಿ ಆದಿತ್ಯನಾಥ್ ಪ್ರಮಾಣ ಪತ್ರವನ್ನು ಸ್ವೀಕರಿಸಿದ್ದಾರೆ.
ಅಯೋಧ್ಯೆಯ ರಾಮಮಂದಿರದ ಪ್ರಾಣಪ್ರತಿಷ್ಠೆಯ ನಂತರ ಇದು ಮೊದಲ ದೀಪೋತ್ಸವವಾಗಿದೆ. ಕಾರ್ಯಕ್ರಮದಲ್ಲಿ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಗಣ್ಯರು ಭಾಗಿಯಾಗಿದ್ದರು. 500 ವರ್ಷಗಳ ಬಳಿಕ ಅಯೋಧ್ಯೆಯ ರಾಮಲಲ್ಲಾನ ಜನ್ಮಸ್ಥಳದಲ್ಲಿ ನಿರ್ಮಿಸಲಾದ ದೇವಾಲಯವನ್ನು ಸಾವಿರಾರು ದೀಪಗಳಿಂದ ಬೆಳಗಿಸುವ ಮೂಲಕ ಈ ವರ್ಷದ ದೀಪಾವಳಿಯು ಐತಿಹಾಸಿಕವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.
ರಾತ್ರಿ ಪದೇ ಪದೇ ಮೂತ್ರ ವಿಸರ್ಜನೆ ಮಾಡ್ತೀರಾ? ಹಾಗಾದ್ರೆ ಈ ಕಾಯಿಲೆಗಳು ಬರುವ ಸಾಧ್ಯತೆ
ಗಿನ್ನೆಸ್ ವರ್ಲ್ಡ್ ರೆಕಾರ್ಡ್ ತಂಡವು ದೀಪೋತ್ಸವದ ಮೇಲ್ವಿಚಾರಣೆಯನ್ನು ನಡೆಸಿದ್ದು, ಇದೀಗ ಎರಡು ದಾಖಲೆಗಳನ್ನು ಅಯೋಧ್ಯೆ ದೀಪಾವಳಿ ಬರೆದಿದೆ. 1,100 ಜನರ ಸರಯು ಆರತಿ ಮತ್ತು 28 ಲಕ್ಷಕ್ಕೂ ಅಧಿಕ ದೀಪಗಳನ್ನು ಬೆಳಗಿಸುವ ಮೂಲಕ ಇದು ರಾಮಮಂದಿರ ನಿರ್ಮಾಣದ ನಂತರದ ಮೊದಲ ದೀಪೋತ್ಸವವಾಗಿದೆ. ಮಂಗಳವಾರ, ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಲಹೆಗಾರ ನಿಶ್ಚಲ್ ಬರೋಟ್ ನೇತೃತ್ವದ 30 ಸದಸ್ಯರ ತಂಡವು ಡ್ರೋನ್ಗಳನ್ನು ಬಳಸಿಕೊಂಡು ಸರಯುವಿನ 55 ಘಾಟ್ಗಳಲ್ಲಿ ದಿಯಾಗಳನ್ನು ಎಣಿಸಲು ಪ್ರಾರಂಭಿಸಿದ್ದರು.
ರಾಮಾಯಣದ ಘಟನೆಗಳನ್ನು ಚಿತ್ರಿಸುವ ಲೇಸರ್ ಮತ್ತು ಡ್ರೋನ್ ಪ್ರದರ್ಶನ ಕೂಡ ನಡೆಯಿತು. ಈ ಆಚರಣೆಯು ಆರು ದೇಶಗಳನ್ನು ಪ್ರತಿನಿಧಿಸುವ ಮ್ಯಾನ್ಮಾರ್, ನೇಪಾಳ, ಥೈಲ್ಯಾಂಡ್, ಮಲೇಷ್ಯಾ, ಕಾಂಬೋಡಿಯಾ ಮತ್ತು ಇಂಡೋನೇಷ್ಯಾವನ್ನು ಪ್ರತಿನಿಧಿಸುವ ಕಲಾವಿದರಿಂದ ಸಾಂಸ್ಕೃತಿಕ ಪ್ರದರ್ಶನಗಳನ್ನು ಒಳಗೊಂಡಿತ್ತು. ಹಾಗೆಯೇ ಉತ್ತರಾಖಂಡದ ರಾಮ್ ಲೀಲಾ ಪ್ರಸ್ತುತಿ ಕೂಡ ನಡೆಯಿತು.