ಬೆಂಗಳೂರು:- ಕರ್ನಾಟಕದ 136 ಸ್ಥಾನಗಳನ್ನು ಪಡೆದು ಸರ್ಕಾರ ರಚಿಸಿರುವ ಕಾಂಗ್ರೆಸ್ ನಲ್ಲಿ ಮೊದಲಿನಿಂದಲೂ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದೆ. ಅದರಂತೆ ಇತ್ತೀಚೆಗೆ ಡಿನ್ನರ್ ಪಾಲಿಟಿಕ್ಸ್ ಜೋರಾಗಿದೆ.
ರಾತ್ರಿ ಮಲಗೋಕು ಮುನ್ನ ನಿಮ್ಮ ಬಾಯಿಯೊಳಗೆ ಇದನ್ನು ಹಾಕೊಳ್ಳಿ: ಆಮೇಲೆ ನೋಡಿ ಮ್ಯಾಜಿಕ್!
ಇತ್ತೀಚೆಗೆ CM ಸಿದ್ದರಾಮಯ್ಯ ಅವರು ಡಿಕೆಶಿ ವಿದೇಶದಲ್ಲಿ ಇದ್ದಾಗ ಡಿನ್ನರ್ ಮೀಟಿಂಗ್ ನಡೆಸಿದರು. ಇದು ಬಂಡೆ ಡಿಕೆಶಿ ಹಾಗೂ ಬೆಂಬಲಿಗರನ್ನು ಕೆರಳಿಸಿತ್ತು. ಇದೀಗ ಗೃಹ ಸಚಿವ ಜಿ ಪರಮೇಶ್ವರ್ ಅವರು ಔತಣಕೂಟ ಏರ್ಪಡಿಸಿದರು. ಇದಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದೆ.
ಸಚಿವ ಡಾ. ಜಿ.ಪರಮೇಶ್ವರ್ ಕರೆದಿದ್ದ ಡಿನ್ನರ್ ಮೀಟಿಂಗ್ ಅನ್ನು ಮುಂದೂಡಲಾಗಿದೆ. ಪರಮೇಶ್ವರ್ ಅವರು, ದಲಿತ ನಾಯಕರ ಜೊತೆಗಿನ ಡಿನ್ನರ್ ಮೀಟಿಂಗ್ ಅನ್ನು ಹೈಕಮಾಂಡ್ ಸೂಚನೆ ಮೇರೆಗೆ ಮುಂದೂಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ.
ಇದೇ ಜ.8 ರಂದು ರಾಜ್ಯ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಚಿವರು, ಶಾಸಕರು, ಸಂಸದರು ಹಾಗೂ ಮುಖಂಡರ ಸಭೆಯನ್ನು ಬೆಂಗಳೂರಿನ ರ್ಯಾಡಿಸನ್ ಬ್ಲೂ ಹೋಟೆಲ್ನಲ್ಲಿ ಆಯೋಜಿಸಲಾಗಿದ್ದು ಸರಿಯಷ್ಟೆ. ಸದರಿ ಸಭೆಯನ್ನು ಕಾಂಗ್ರೆಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲ ಅವರ ಸೂಚನೆ ಮೇರೆಗೆ ಮುಂದೂಡಲಾಗಿದೆ. ಸದರಿ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದಿದೆ.