ಬೆಂಗಳೂರು:- ಡಿನ್ನರ್ ಮೀಟಿಂಗ್, ಪತ್ಯೇಕ ಸಭೆಗೆ ಬ್ರೇಕ್ ಹಾಕಿ, ಯಾವುದಕ್ಕೂ ಅವಕಾಶವಿಲ್ಲ ಎಂದು ಉಸ್ತುವಾರಿ ರಣದೀಪ್ ಸುರ್ಜೇವಾಲ ತಾಕೀತು ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಎಲ್ಲಾ ರೀತಿಯ ಪ್ರತ್ಯೇಕ ಸಭೆ, ಊಟ, ಡಿನ್ನರ್ ಮೀಟಿಂಗ್ ಯಾವುದಕ್ಕೂ ಅವಕಾಶ ಇಲ್ಲ. ಎಲ್ಲದಕ್ಕೂ ಬ್ರೇಕ್ ಹಾಕಿ ಎಂದರು.
ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದ ಸಿದ್ಧತೆ ಹಾಗೂ ಪಕ್ಷ ಸಂಘಟನೆ ಬಗ್ಗೆ ಚರ್ಚೆ: ಡಿಸಿಎಂ ಡಿ.ಕೆ. ಶಿವಕುಮಾರ್
ಸಮುದಾಯದ ಸಭೆ, ಸಮುದಾಯದ ನಾಯಕರ ಸಭೆ ಮಾಡಬೇಕಾದ ಯಾವುದೇ ಪರಿಸ್ಥಿತಿ ಬಂದರೂ ಹೈಕಮಾಂಡ್ ಅನುಮತಿ ಪಡೆದು ಮಾಡಬೇಕು. ಬಹಿರಂಗವಾಗಿ ಮಾತನಾಡುವ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಸೂಚಿಸಿದ್ದಾರೆ.
ನೀವು ಏನೇ ಮಾತನಾಡಿದರೂ ಅದು ಪಕ್ಷಕ್ಕೆ ದೊಡ್ಡ ಹಾನಿಯಾಗುತ್ತದೆ. ಏನಿದ್ದರೂ ಬಿಜೆಪಿಯವರ ವಿರುದ್ದ ಮಾತನಾಡಿ. ಅವರು ಆರೋಪ ಮಾಡುತ್ತಿರುತ್ತಾರೆ. ನೀವು ನಿಮ್ಮ ಪಾಡಿಗೆ ಸುಮ್ಮನೆ ಇರುತ್ತೀರಿ. ಪಕ್ಷದ ಬಗ್ಗೆ ಮಾತನಾಡುವುದಲ್ಲ. ಬಿಜೆಪಿಯವರ ಆರೋಪದ ವಿರುದ್ದ ಮೊದಲು ಮಾತನಾಡಿ ಎಂದು ಹೇಳಿದರು.